ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಡಿಸೆಂಬರ್ 13 ರಂದು ಆಯೋಜಿಸಲಾಗಿರುವ ವೃಕ್ಷೋಥಾನ್ ಹೆರಿಟೇಜ್ ರನ್ 7ನೇ ಆವೃತ್ತಿ ಅಂಗವಾಗಿ ಮನೆ ತೋಟ (ಹೋಂ ಗಾರ್ಡನ್) ಸ್ಪರ್ಧೆ ಆಯೋಜಿಸಲಾಗಿದೆ.
ತಮ್ಮ ಮನೆ ಒಳಾಂಗಣ ಇಲ್ಲವೆ ಹೊರಾಂಗಣದಲ್ಲಿ ಗಿಡ-ಮರಗಳು, ಹೂ-ಹಸಿರು ಬಳ್ಳಿಗಳು, ಹಸಿರು ಹೊದಿಕೆ ಹೆಚ್ಚಿಸುವ ಕ್ರಮಗಳನ್ನು ಕೈಗೊಂಡಿರುವ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಈ ಸ್ಪರ್ಧೆ ಎರಡು ವಿಭಾಗಗಳಾಗಿದ್ದು 2400 ಚದುರ ಅಡಿಗಿಂತ ಕಡಿಮೆ ಇರುವ ಹಾಗೂ 2400 ಚ.ಅ ಗಿಂತ ಹೆಚ್ಚಿನ ನಿವೇಶನದಲ್ಲಿ ಹಸಿರೀಕರಣ ಕೈಗೊಂಡಿರುವವರು ಒಂದು ನಿಮಿಷಗಳಿಗಿಂತ ಕಡಿಮೆ ಅವಧಿಯ ವಿಡಿಯೋ ರೀಲ್ಸ್ ಮಾಡಿ ಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಆರ್ಕಿಟೆಕ್ಟ್ ಸಂಗಮೇಶ ಹಾವರಗಿ-9448360474 ಮತ್ತು ಆಯೋಜಕ ಶಿವು ಕುಂಬಾರ: 9972795289 ಇವರಿಗೆ ಕಳುಹಿಸಬೇಕು. ವಿಡಿಯೋ ವೀಕ್ಷಿಸಿ, ನಂತರ ಸ್ಥಳ ಪರಿಶೀಲನೆ ಮಾಡಿ ವಿಜೇತರನ್ನು ಘೋಷಿಸಲಿದ್ದಾರೆ.
ಎರಡೂ ವಿಭಾಗಗಳ ವಿಜೇತರಿಗೆ ಪ್ರಥಮ ರೂ. 10 ಸಾವಿರ, ದ್ವಿತೀಯ ರೂ. 7 ಸಾವಿರ ಹಾಗೂ ತೃತೀಯ ರೂ. 5 ಸಾವಿರ ನಗದು ಪುರಸ್ಕಾರ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಅಭಿನಂದನೆ ಪತ್ರವನ್ನು ನೀಡಲಾಗುವುದು ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.
