ಉದಯರಶ್ಮಿ ದಿನಪತ್ರಿಕೆ
ಇಂಡಿ: ಸರಕಾರಿ ಸೇವೆ, ಸೌಲಭ್ಯ ಪಡೆಯುವಲ್ಲಿನ ಆಡಚಣೆ ಸಮಸ್ಯೆ ಸವಾಲುಗಳ ಬಗ್ಗೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸರಳ ವಿಧಾನದಡಿ ಹೇಳಿಕೊಳ್ಳಬಹುದಾದ ವ್ಯವಸ್ಥೆಯನ್ನು ಪ್ರಜಾಸೇವಾ ಇಲಾಖೆ ಮೂಲಕ ಸರಕಾರ ಕಲ್ಪಿಸಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ನಗರದ ಶ್ರೀ ಶಾಂತೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಪ್ರಜಾಸೇವಾ ಅಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಣ್ಣ ಪುಟ್ಟ ಸಮಸ್ಯೆಗಳ ಪರಿಹಾರಕ್ಕೆ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ನಾನಾ ಇಲಾಖೆಗಳಿಗೆ ಸಂಬAಧಿಸಿದ ದೂರುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ಇತ್ಯರ್ಥ ಪಡಿಸಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಉತ್ತರದಾಯಿತ್ವ ಹೆಚ್ಚಿಸುವ ದೃಷ್ಠಿಯಿಂದ ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಇಂದು ಕೂಡ್ಲಗಿಯಲ್ಲಿ ಚಾಲನೆ ನೀಡುತ್ತಿದ್ದಾರೆ ಎಂದರು.
ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿಯವರು ಮಾತನಾಡಿ, ಪ್ರಜಾಸೇವಾ ಅಭಿಯಾನ ಸಭೆಗಳಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಅಹವಾಲುಗಳ ಪರಿಶೀಲನೆ ಕಾರ್ಯ ತಾಲೂಕು ಉಪವಿಭಾಗ ಮಟ್ಟದಲ್ಲಿ ನಡೆಯಲಿದೆ ಎಂದರು.
ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಮಾತನಾಡಿದರು.
ಕೆಬಿಜೆಎನ್‌ಎಲ್ ಅಧಿಕಾರಿ ಬೀರಪ್ಪ ಪೂಜಾರಿ, ಹೆಸ್ಕಾನ ಎಸ್.ಆರ್ ಮೆಂಡೆಗಾರ, ಕೆಎಸ್‌ಆರ್‌ಟಿಸಿ ಶಿಕ್ಷಣ ಇಲಾಖೆಯ ಮೋಹನಕುಮಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಅಹವಾಲು ಸ್ವೀಕರಿಸಿ ಸ್ಥಳದಲ್ಲಿಯೇ ಉತ್ತರ ನೀಡಿದರು.
ಇದೇ ವೇಳೆ ೨೫ ಅಂಗವಿಕಲರಿಗೆ ಮಂಜುರಾತಿ ಪ್ರಮಾಣ ಪತ್ರ, ಹಿರಿಯ ನಾಗರಿಕರಿಗೆ ಸಿನಿಯರ್ ಸಿಟಿಜನ್ ಕಾರ್ಡು ಮತ್ತು ಕಾರ್ಮಿಕ ಇಲಾಖೆಯಿಂದ ಕೀಟ್ ಗಳನ್ನು ವಿತರಿಸಲಾಯಿತು.
ಪಿ.ಎಸ.ಪೂಜಾರ, ಬಸವರಾಜ ಗೊರನಾಳ ಮಾತನಾಡಿದರು.
ವೇದಿಕೆಯ ಮೇಲೆ ಇಒ ಮಹಾದೇವಪ್ಪ ಏವೂರ, ಭೀಮಣ್ಣ ಕವಲಗಿ, ಪ್ರಶಾಂತ ಕಾಳೆ, ಸಿಪಿಐಗಳಾದ ಸುನೀಲ ಪಾಟೀಲ ಪ್ರದೀಪ ಬಿಸೆ ಮತ್ತಿತರಿದ್ದರು.

