ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಾಲ್ಯದಿಂದ ಉನ್ನತ ಶಿಕ್ಷಣದ ವರೆಗೆ ನಮ್ಮನ್ನು ತಿದ್ದಿ ತೀಡಿ, ಕಾಡುಗಲ್ಲಿನಂತಿದ್ದ ವಿದ್ಯಾರ್ಥಿಗಳನ್ನೆಲ್ಲ ಶಿಲೆಯಾಗಿ ರೂಪಿಸಿ, ಸಂಸ್ಕಾರ ತುಂಬಿ, ತಂದೆ ತಾಯಿ ಜೀವ ನೀಡಿದ್ದರೆ, ಶಿಕ್ಷಕರು ಗುರುವಿನ ರೂಪದಲ್ಲಿ ಜೀವನ ನೀಡಿದವರಾಗಿದ್ದಾರೆ ಹೀಗಾಗಿ ಅವರ ಋಣ ತೀರಿಸಲು ಸಾಧ್ಯವಿಲ್ಲ, ಭಾರತ ರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜೀವನ ನಮ್ಮೆಲ್ಲರಿಗೂ ಸದಾ ಆದರ್ಶಪ್ರಾಯವಾಗಿರಲಿ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ನಗರದ ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕ ದಿನಾಚರಣೆ ಉದ್ಘಾಟಿಸಿ, ಆದರ್ಶ ಶಿಕ್ಷಕರನ್ನು ವಿದ್ಯಾರ್ಥಿಗಳೊಂದಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶ್ವೇತಾ ಬಿರಾದರ್ ಮಾತನಾಡಿ, ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ ನಾವೆಲ್ಲರೂ ಆ ವೃತ್ತಿಯಲ್ಲಿರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ ಎಂದು ಹೇಳಿದರು. ರಾಜಕುಮಾರ್ ತಿಡಗುಂದಿ, ಐಶ್ವರ್ಯ ಜಂಬಿಗಿ, ಸಂತೋಷಿ ನಿಕಂ, ವಿಶ್ವನಾಥ್ ಕುಲಕರ್ಣಿ, ಶಶಿಧರ್ ತಳ್ಳಿ, ದೀಪಾ ಬರಗನಿ, ಸನಾಂಜುಂಮ್ ಪಟೇಲ್, ಸುಮಯ್ಯ ನದಾಫ್, ಅಮೃತ ಪತ್ತಾರ್, ಕಿರಣ್ ಇನಾಮ್ದಾರ್, ಶಿವಾನಂದ್ ಮೊದಲಾದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

