Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಿಜೆಪಿ ರೈತಮೋರ್ಚಾ ಧರಣಿ ಸತ್ಯಾಗ್ರಹ ಅಂತ್ಯ

ಸಂಗೊಳ್ಳಿ ರಾಯಣ್ಣ ಕನ್ನಡ ನಾಡಿನ ಕಟ್ಟಾಳು :ಶಾಸಕ ಪಾಟೀಲ

ಪಿಒಪಿ, ರಾಸಾಯನಿಕ ಬಣ್ಣದ ಗಣೇಶ ಮೂರ್ತಿ ಬಳಕೆ ಸಂಪೂರ್ಣ ನಿಷೇಧ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಶಿಕ್ಷಕ ಸಾಮಾಜಿಕ ಬದಲಾವಣೆ ಹರಿಕಾರ
ವಿಶೇಷ ಲೇಖನ

ಶಿಕ್ಷಕ ಸಾಮಾಜಿಕ ಬದಲಾವಣೆ ಹರಿಕಾರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಕಬೂಲ್ ಆರ್. ಕೊಕಟನೂರ.
ಶಿಕ್ಷಕರು
ವಿಜಯಪುರ

ಉದಯರಶ್ಮಿ ದಿನಪತ್ರಿಕೆ

ಶಿಕ್ಷಕ ಈ ರಾಷ್ಟ್ರ ರಕ್ಷಕ, ಸಮಾಜ ಸುಧಾರಕನಾಗಿದ್ದು, ಇಡೀ ಸಮಾಜ ಅವನ ಆಶಯದಲ್ಲಿಯೇ ಬೆಳೆಯುತ್ತದೆ. ಹುಮಾಯೂನ್ ಕಬೀರದಾಸ ಹೇಳುವಂತೆ ಅಕ್ಷರಶಃ ಶಿಕ್ಷಕ ರಾಷ್ಟ್ರದ ಅದೃಷ್ಠದ ನಿರ್ಣಾಯಕ. ಒಂದು ದೇಶದ ಅಳಿವು-ಉಳಿವು ಪರೋಕ್ಷವಾಗಿ ಅಲ್ಲಿಯ ಶಿಕ್ಷಕರನ್ನು ಅವಲಂಬಿಸಿದೆ. ವೇದ ಕಾಲದಿಂದಲೂ ಗುರುವಿಗೆ ಉನ್ನತ ಸ್ಥಾನವಿದೆ. ಆದ್ದರಿಂದಲೆ ಆಚಾರ್ಯ ದೇವೋಭವ’ ಎಂಬ ಉಕ್ತಿ ನಮ್ಮ ಮುಂದಿದೆ. ಇಂದು ನಾವೆಲ್ಲ ಜನ್ಮದಿನ ಆಚರಿಸುತ್ತಿರುವ ಶ್ರೇಷ್ಠ ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಹೇಳುವಂತೆ ಶಿಕ್ಷಕರೆಂದರೆ ಜೀವನವನ್ನು ಪ್ರಕಾಶಿಸುವ ಪ್ರೇರಕ ಶಕ್ತಿ. ಗುರುವಿನ ಕೃಪೆ ಕರುಣೆ, ಪ್ರೇರಣೆ ಇಲ್ಲದೆ ಯಾವುದನ್ನು ಸಾಧಿಸಲಾಗದು.
‘ಹರ ಮುನಿದರೆ ಗುರು ಕಾಯುವನು’
ಶಿಕ್ಷಕನಿಗೆ ಗುರು, ಅಧ್ಯಾಪಕ, ಆಚಾರ್ಯ ಎಂಬ ನಾಮಗಳುಂಟು. ಶಿಕ್ಷಕನಾದವನು ಸದಾ ಸಹನಾ ಮೂರ್ತಿಯಾಗಿದ್ದು, ಮಗುವಿನ ಅಂತರಂಗವನ್ನರಿತು ಬೋಧನೆಗೈದಾಗ ಮಾತ್ರ ನಿಜವಾದ ಮುಖ ನೋಡಲು ಸಾಧ್ಯ. ಭವಿಷ್ಯತ್ತಿನ ನಿರ್ಮಾಣವಾಗುವುದು ನಾಲ್ಕು ಗೋಡೆಗಳ ಮಧ್ಯೆ ಎಂಬುದು ಕೋಠಾರಿ ಆಯೋಗದ ಮಾತು ಅಕ್ಷರಶಃ ಸತ್ಯ. ಮಕ್ಕಳೆಂದರೆ ಭವಿಷ್ಯದ ಆಶಾಕಿರಣಗಳು, ಅವುಗಳನ್ನು ವ್ಯವಸ್ಥಿತವಾಗಿ ಎರಕಹೊಯ್ದು ನಾಡಿನ ಖಣಿಗಳಾಗಿ ಮಾಡುವ ಹೊಣೆ ಗುರುಕುಲದ ಮೇಲಿದೆ. ಇಂತಹ ಜವಾಬ್ದಾರಿ ಹೊತ್ತ ಶಿಕ್ಷಕನ ಸ್ಥಾನಮಾನ ವರ್ಣಾತೀತ, ಅಂತೆಯೇ ಒಬ್ಬ ಸಾಮಾನ್ಯ ಶಿಕ್ಷಕರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದರು. ಟೀಚರ್ ಇಸ್ ಫೆಸಿಲಿಟೇಟರ್ ಎನ್ನುವಂತೆ ಶಿಕ್ಷಕ ಸದಾ ರಕ್ಷಕನೇ ಹೊರತು ಭಕ್ಷಕನಲ್ಲ. ಆ ಕಾರಣಕ್ಕಾಗಿಯೇ ‘ಹರ ಮುನಿದರೆ ಗುರು ಕಾಯುವನು’ ಎನ್ನುವರು.
ಶಿಕ್ಷಕ ಸಾಮಾಜಿಕ ಬದಲಾವಣೆ ಹರಿಕಾರ
ನಿಜವಾದ ಗುರುವಿನ ಸಾಧನೆಗೆ ಮಿಗಿಲಾದುದು ಯಾವುದು ಇಲ್ಲ. ಮಾನವ ಜನಾಂಗವನ್ನು ರೂಪಿಸುವ ಅವಕಾಶವಿರುವುದು ಶಿಕ್ಷಕ ಸಮುದಾಯಕ್ಕೆ ಎಂಬ ಮಾತು ಉತ್ತೇಕ್ಷೆಯಾಗಲಾರದು. ಶಾಂತಿನಿಕೇತನದ ಸಂಸ್ಥಾಪಕ ರವೀಂದ್ರನಾಥ ಟ್ಯಾಗೋರ ಹೇಳುವಂತೆ ”ಶಿಕ್ಷಕರು ಆಧ್ಯಾತ್ಮದ ದೀಪವಿದ್ದಂತೆ. ಶಿಕ್ಷಕ ಸದಾ ಕಲಿಯುತ್ತಲೇ ಇರಬೇಕು. ದೀಪವು ತಾನು ನಿರಂತರ ಉರಿಯುತ್ತಿದ್ದಾಗಲೆ ಇನ್ನೊಂದನ್ನು ಹೊತ್ತಿಸಲು ಸಾಧ್ಯ. ಶಿಕ್ಷಕ ವೃತ್ತಿ ಪವಿತ್ರವಾದುದು. ಸತ್ಯಕ್ಕೆ ತಲೆಬಾಗುವ ಸಹೃದಯತೆ, ಅನ್ಯಾಯವನ್ನು ಎದುರಿಸುವ ಎದೆಗಾರಿಕೆ ಇರಬೇಕು. ಶಿಕ್ಷಕ ಸಾರ್ವಜನಿಕ ಸೇವಕರಲ್ಲಿ ಅಗ್ರಗಣ್ಯ. ಇಡೀ ಶಿಕ್ಷಣ ಪದ್ಧತಿ ಚಲಿಸುತ್ತದೆಯೋ ಅವರ ಕೇಂದ್ರ ಬಿಂದು ಶಿಕ್ಷಕನಾಗಿದ್ದಾನೆ. ಯಥಾ ಗುರು ತಥಾ ಶಿಷ್ಯನೆಂಬಂತೆ ಶ್ರೇಷ್ಠ ಶಿಕ್ಷಕ ಸ್ಪೂರ್ತಿಯ ಸೆಲೆಯಾಗಿ ಮಾರ್ಗದರ್ಶಕನಾಗಿ, ಸದಾ ಸ್ನೇಹಮಯಿಯಾಗಿ ಸಂಪನ್ನಶೀಲನಾಗಿ, ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಸರ್ವವ್ಯಾಪಿಯಾಗಿದ್ದಾನೆ.


ಎ ಐ ಯುಗದಲ್ಲೂ ಗುರುವಿಗೆ ಗೌರವ
ಆಧುನಿಕತೆ ತಂತ್ರಜ್ಞಾನ ಬೆಳೆದಂತೆ ಶಿಕ್ಷಕರ ಕಾರ್ಯವೈಖರಿ, ಕಲಿಸುವ ಪದ್ದತಿ, ಇರುವಿಕೆ ಬದಲಾಗಿರಬಹುದು. ಗುರುವಿಗಿರುವ ಗೌರವ ಕಡಿಮೆಯಾಗಿಲ್ಲ. ಸಮಾಜದಲ್ಲಿ ಅದೆಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಮಾಜಿಯಾಗಬೇಕು. ಆದರೆ ಶಿಕ್ಷಕ ಮಾತ್ರ ಯಾವತ್ತು ಮಾಜಿಯಾಗಲ್ಲ. ಶಿಷ್ಯ ಬಳಗಕ್ಕೆ ಸದಾ ಗುರುವಾಗಿಯೇ ಹೃನ್ಮನದಲ್ಲಿರುತ್ತಾನೆ. ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆಯಾಗಿ ಸಮಾಜ ಮುಂದುವರೆಸುವ ಅದಮ್ಯ ಚೇತನ ಗುರುವಾಗಿದ್ದಾನೆ. ಅದಕ್ಕಾಗಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ನುಡಿ ಎಷ್ಟು ಸೂಕ್ತವಲ್ಲವೇ?
ಆದರೆ, ಶಿಕ್ಷಕರ ದಿನಾಚರಣೆ ಶಿಕ್ಷಕರೇ ಆಚರಿಸಿಕೊಳ್ಳುವುದು ವಿಷಾದನೀಯ, ಅದಕ್ಕಾಗಿ ಬನ್ನಿ ನಾವೆಲ್ಲ ಶಿಕ್ಷಕರ ದಿನವನ್ನು ಆಚರಿಸೋಣ, ಚಿರಋಣಿಯಾಗೋಣ. ಈ ಮೂಲಕ ಗುರುಕಾಣಿಕೆ ಸಲ್ಲಿಸೋಣ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಿಜೆಪಿ ರೈತಮೋರ್ಚಾ ಧರಣಿ ಸತ್ಯಾಗ್ರಹ ಅಂತ್ಯ

ಸಂಗೊಳ್ಳಿ ರಾಯಣ್ಣ ಕನ್ನಡ ನಾಡಿನ ಕಟ್ಟಾಳು :ಶಾಸಕ ಪಾಟೀಲ

ಪಿಒಪಿ, ರಾಸಾಯನಿಕ ಬಣ್ಣದ ಗಣೇಶ ಮೂರ್ತಿ ಬಳಕೆ ಸಂಪೂರ್ಣ ನಿಷೇಧ

ಸೆ.೮ ರಂದು ಇಂಡಿಯಲ್ಲಿ ಬೃಹತ್ ಪ್ರತಿಭಟನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಿಜೆಪಿ ರೈತಮೋರ್ಚಾ ಧರಣಿ ಸತ್ಯಾಗ್ರಹ ಅಂತ್ಯ
    In (ರಾಜ್ಯ ) ಜಿಲ್ಲೆ
  • ಸಂಗೊಳ್ಳಿ ರಾಯಣ್ಣ ಕನ್ನಡ ನಾಡಿನ ಕಟ್ಟಾಳು :ಶಾಸಕ ಪಾಟೀಲ
    In (ರಾಜ್ಯ ) ಜಿಲ್ಲೆ
  • ಪಿಒಪಿ, ರಾಸಾಯನಿಕ ಬಣ್ಣದ ಗಣೇಶ ಮೂರ್ತಿ ಬಳಕೆ ಸಂಪೂರ್ಣ ನಿಷೇಧ
    In (ರಾಜ್ಯ ) ಜಿಲ್ಲೆ
  • ಸೆ.೮ ರಂದು ಇಂಡಿಯಲ್ಲಿ ಬೃಹತ್ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಉಸ್ತುವಾರಿ ಕಾರ್ಯದರ್ಶಿ ಆರ್.ಗಿರೀಶ್ ಪ್ರವಾಸ
    In (ರಾಜ್ಯ ) ಜಿಲ್ಲೆ
  • ಶ್ರೀಕೃಷ್ಣನ ಭಗವದ್ಗೀತೆ ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ
    In (ರಾಜ್ಯ ) ಜಿಲ್ಲೆ
  • ವಿಜಯಪುರದಲ್ಲಿ ಇಂದು ‘ಸಾಧಕರೊಂದಿಗೆ ಸಂವಾದ’
    In (ರಾಜ್ಯ ) ಜಿಲ್ಲೆ
  • ರಾಷ್ಟ್ರ ನಿರ್ಮಾಣದ ಶಿಲ್ಪಿಗಳಿಗೆ ನಮನ
    In ವಿಶೇಷ ಲೇಖನ
  • ಸೋಲೇ ಗೆಲುವಿನ ಮೆಟ್ಟಿಲು
    In ವಿಶೇಷ ಲೇಖನ
  • ಶಿಕ್ಷಕ ಸಾಮಾಜಿಕ ಬದಲಾವಣೆ ಹರಿಕಾರ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.