ವಿಜಯಪುರ: ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ಕ್ರೋಢಿಕರಿಸುವ ಉದ್ಧೇಶದಿಂದ ೩೭೯ ವರ್ಗಗಳ ಎಲ್ಲ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಪೊರ್ಟಲ್ ಮೂಲಕ ನೊಂದಾಯಿಸಲಾಗುತ್ತಿದ್ದು, ದಿ.೩೧-೦೩-೨೦೨೨ರವರೆಗೆ ನೊಂದಣಿಯಾಗಿ ಅಪಘಾತೊಂಡ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ೨ ಲಕ್ಷ ರೂ. ಅಪಘಾತ ಪರಿಹಾರ ಒದಗಿಸುತ್ತಿದೆ.
ಫಲಾನುಭವಿ ಆಧಾರ ಸಂಖ್ಯೆ, ಯುಎಎನ್ ಕಾರ್ಡ, ಮರಣ ಪ್ರಮಾಣ ಪತ್ರ, ಮರಣಕ್ಕೆ ಕಾರಣದ ವೈದ್ಯಕೀಯ ಪ್ರಮಾಣ ಪತ್ರ, ಎಫ್‌ಐಆರ್-ಪಂಚನಾಮೆಯೊಂದಿಗೆ ನೊಂದಾಯಿಸಿಕೊಂಡು ಪರಿಹಾರ ಪಡೆದುಕೊಳ್ಳಬಹುದಾಗಿದ್ದು, ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಕಾರ್ಮಿಕರ ಅಧಿಕಾರಿಗಳ ಕಚೇರಿ, ವಿಜಯಪುರ ಉಪ ವಿಭಾಗ, ಕಾರ್ಮಿಕ ಕಲ್ಯಾಣ ಸಮುದಾಯ ಭವನ, ಸಿಂದಗಿ ನಾಕಾ, ಅಲ್ಲಾಪೂರ ಓಣಿ, ವಿಜಯಪುರ ಇವರಿಗೆ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕಾರ್ಮಿಕ ಅಧಿಕಾರಿ ಎಸ್.ಜಿ.ಖೈನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
