ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಮನೆ-ಮನೆ ಸಮೀಕ್ಷೆ ವೇಳೆ ಗೈರು ಹಾಜರಿ, ಶಾಶ್ವತ ಸ್ಥಳಾಂತರ, ಮರಣ ಹೊಂದಿದ, ನಕಲಿ (ಡುಪ್ಲಿಕೇಟ್) ಮತ್ತು ಇತರೆ ಮತದಾರರ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಮಾಹಿತಿ ನೀಡಿದ್ದಾರೆ
ಕ್ಷೇತ್ರವಾರು ಎಎಸ್ ಡಿಡಿಒ ಮತದಾರರ ವಿವರ:
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ೨,೯೫೯ ಮತದಾರರು ಗೈರು, ೧೯೪೪೮ ಶಾಶ್ವತವಾಗಿ ಸ್ಥಳಾಂತರಗೊAಡರೆ, ೮, ೮೪೭ ಮತದಾರರು ಮೃತಪಟ್ಟಿದ್ದರೆ, ೪೭೨೯ ನಕಲಿ, ೨೫ ಇತರೇ ಸೇರಿ ೩೬,೦೦೮ ಎಎಸ್ ಡಿಡಿಒ ಮತದಾರರು ಪತ್ತೆಯಾಗಿದ್ದಾರೆ ಎಂದವರು ತಿಳಿಸಿದ್ದಾರೆ.
ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ: ೮೩೬ ಮತದಾರರು ಗೈರು, ೧೮೬೬೪ ಶಾಶ್ವತವಾಗಿ ಸ್ಥಳಾಂತರಗೊAಡರೆ, ೭೯೪೧ ಮತದಾರರು ಮೃತಪಟ್ಟಿದ್ದರೆ, ೨೯೯೩ ನಕಲಿ, ಇತರೇ ೭೦ ಸೇರಿ ೩೦೫೦೪ ಎಎಸ್ ಡಿಡಿಒ ಮತದಾರರು ಪತ್ತೆಯಾಗಿದ್ದಾರೆ ಎಂದವರು ತಿಳಿಸಿದ್ದಾರೆ.
ಬಸವನಬಾಗೇವಾಡಿ: ಮತಕ್ಷೇತ್ರದಲ್ಲಿ ೧,೪೯೪ ಮತದಾರರು ಗೈರು, ೧೩೦೬೩ ಶಾಶ್ವತವಾಗಿ ಸ್ಥಳಾಂತರಗೊಂಡರೆ, ೬೦೩೯ ಮತದಾರರು ಮೃತಪಟ್ಟರೆ, ೪೪೨೩ ನಕಲಿ, ಇತರೇ ೪೨ ಸೇರಿ ೨೫೦೬೧ ಎಎಸ್ ಡಿಡಿಒ ಮತದಾರರು ಪತ್ತೆಯಾಗಿದ್ದಾರೆ.
ಬಬಲೇಶ್ವರ: ಮತಕ್ಷೇತ್ರದಲ್ಲಿ ೧,೪೮೭ ಮತದಾರರು ಗೈರು, ೧೫,೧೬೭ ಶಾಶ್ವತವಾಗಿ ಸ್ಥಳಾಂತರಗೊAಡರೆ, ೫,೨೬೪ ಮತದಾರರು ಮೃತಪಟ್ಟರೆ, ೨,೩೩೪ ನಕಲಿ, ಇತರೇ ೩೯ ಸೇರಿ ೨೪,೨೯೧ ಎಎಸ್ ಡಿಡಿಒ ಮತದಾರರು ಪತ್ತೆಯಾಗಿದ್ದಾರೆ.
ವಿಜಯಪುರ ನಗರ: ಮತಕ್ಷೇತ್ರದಲ್ಲಿ ೩೯,೪೫೦ ಮತದಾರರು ಗೈರು, ೨೪,೬೬೧ ಮತದಾರರು ಶಾಶ್ವತವಾಗಿ ಸ್ಥಳಾಂತರಗೊAಡರೆ, ೮೦೫೮ ಮತದಾರರು ಮೃತಪಟ್ಟರೆ, ೮,೨೪೯ ನಕಲಿ, ಇತರೇ ೧೩೧ ಸೇರಿ ೮೦,೫೪೯ ಎಎಸ್ ಡಿಡಿಒ ಮತದಾರರು ಪತ್ತೆಯಾಗಿದ್ದಾರೆ.
ನಾಗಠಾಣ: ಮತಕ್ಷೇತ್ರದಲ್ಲಿ ೮,೬೨೪ ಮತದಾರರು ಗೈರು, ೨೨,೬೮೪ ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡರೆ, ೬,೫೮೦ ಮತದಾರರು ಮೃತಪಟ್ಟರೆ, ೨,೯೫೩ ನಕಲಿ, ಇತರೇ ೭೦ ಸೇರಿ ೪೦,೯೧೧ ಎಎಸ್ ಡಿಡಿಒ ಮತದಾರರು ಪತ್ತೆಯಾಗಿದ್ದಾರೆ.
ಇಂಡಿ: ಮತಕ್ಷೇತ್ರದಲ್ಲಿ ೨,೮೭೦ ಮತದಾರರು ಗೈರು, ೧೭,೭೫೪ ಮತದಾರರು ಶಾಶ್ವತವಾಗಿ ಸ್ಥಳಾಂತರಗೊAಡರೆ, ೫,೯೫೬ ಮತದಾರರು ಮೃತಪಟ್ಟರೆ, ೨,೨೫೯ ನಕಲಿ, ಇತರೇ ೮೧ ಸೇರಿ ೨೮,೯೨೦ ಎಎಸ್ ಡಿಡಿಒ ಮತದಾರರು ಪತ್ತೆಯಾಗಿದ್ದಾರೆ.
ಸಿಂದಗಿ: ಮತಕ್ಷೇತ್ರದಲ್ಲಿ ೨,೬೬೨ ಗೈರು, ೨೦,೯೦೨ ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡರೆ, ೫,೯೭೬ ಮತದಾರರು ಮೃತಪಟ್ಟರೆ, ೨,೪೨೭ ನಕಲಿ ಇತರೇ ೮೩ ಸೇರಿ ೩೨,೦೫೦ ಎಎಸ್ ಡಿಡಿಒ ಮತದಾರರು ಪತ್ತೆಯಾಗಿದ್ದಾರೆ.
ಜಿಲ್ಲೆಯಾದ್ಯಂತ ಒಟ್ಟಾರೆ, ೬೦,೩೮೨ ಮತದಾರರು ಗೈರು ಉಳಿದಿದ್ದರೆ, ೧,೫೨,೩೪೩ ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ೫೪,೬೬೧ ಮತದಾರರು ಮೃತಪಟ್ಟಿದ್ದಾರೆ. ೩೦,೩೬೭ ನಕಲಿ, ಇತರೇ ೫೪೧ ಸೇರಿ ಒಟ್ಟು ೨,೯೮,೨೯೪ ಎಎಸ್ ಡಿಡಿಒ ಮತದಾರರು ಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಮತಗಟ್ಟೆವಾರು ಸಂಪೂರ್ಣ ಹೆಸರು ಮತ್ತು ವಿಳಾಸ ಒಳಗೊಂಡ ಎಎಸ್ ಡಿಡಿಒ ಪಟ್ಟಿಯನ್ನು ಮತಗಟ್ಟೆ ಅಧಿಕಾರಿಗಳು, ಏಜೆಂಟರುಗಳು, ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳ ಮಾಹಿತಿ ಫಲಕಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಹಾಗೂ ಮತದಾರರ ನೋಂದಣಾಧಿಕಾರಿಗಳಿಗೆ ಈ ಪಟ್ಟಿಯ ಒಂದು ಪ್ರತಿಯನ್ನು ಈಗಾಗಲೇ ತಲುಪಿಸಲಾಗಿದೆ.
ಸಾರ್ವಜನಿಕರು ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್ :viರಿಚಿಥಿಚಿಠಿuಡಿಚಿ.ಟಿiಛಿ.iಟಿ ಮೂಲಕ ಅಥವಾ ನೀಡಿರುವ ಗೂಗಲ್ ಡ್ರೈವ್ ಲಿಂಕ್ ಬಳಸಿ ಪರಿಶೀಲಿಸಬಹುದಾಗಿದೆ.
ಆಕ್ಷೇಪಣೆ ಸಲ್ಲಿಕೆಗೆ ಆ.೧೭ ಕೊನೆಯ ದಿನವಾಗಿದೆ. ಅಧಿಕಾರಿಗಳು ಗುರುತಿಸಿರುವ ಎಎಸ್ ಡಿಡಿಒ ಪಟ್ಟಿಯ ಕುರಿತು ಆಕ್ಷೇಪಣೆಗಳಿದ್ದರೆ, ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳಿಗೆ ಆ. ೧೭ ಸಲ್ಲಿಸಬಹುದು. ತದನಂತರ ಅಧಿಕಾರಿಗಳು ಮರುಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಿದ್ದಾರೆ ಎಂದವರು ತಿಳಿಸಿದ್ದಾರೆ.
ಆ. ೧೭ರೊಳಗೆ ನಮೂನೆ ಹಿಂತಿರುಗಿಸಿ: ಎಸ್‌ಐಆರ್ ಗೆ ಸಂಬಂಧಿಸಿದಂತೆ ಗಣತಿ ನಮೂನೆಗಳ ಗಣಕೀಕರಣ ಕಾರ್ಯ ಪೂರ್ಣಗೊಂಡಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಸಾರ್ವಜನಿಕರು ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಆ. ೧೭ರೊಳಗಾಗಿ ಸಲ್ಲಿಸಲು ತಮ್ಮ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದವರು ತಿಳಿಸಿದ್ದಾರೆ.
ಸೇರ್ಪಡೆಗೆ ನಮೂನೆ-೬ ಸಲ್ಲಿಸಿ: ಆ.೨೪ ರಿಂದ ಸೆ. ೨೩ ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಅರ್ಹ ಮತದಾರರು ಅಗತ್ಯ ದಾಖಲೆಗಳೊಂದಿಗೆ ನಮೂನೆ-೬ ನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿಕೊಳ್ಳಬಹುದು.
ಜಿಲ್ಲೆಯ ಎಲ್ಲಾ ನಾಗರಿಕರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

