ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಲೋಕ ಕಲ್ಯಾಣ ಪ್ರಾಥಮಿಕ ಶಾಲೆ ಗೋಳಗುಮ್ಮಟ ಹಿಂದುಗಡೆ ಡಾಲರ್ಸ್ ಕಾಲನಿ ಹತ್ತಿರ ಇರುವ ಶಾಲೆಯ ಆವರಣದಲ್ಲಿ ಶಿಬಿರ ಮುಕ್ತಾಯವಾಯಿತು.
ಈ ಶಿಬಿರದಲ್ಲಿ ಒಟ್ಟು ೧೫೦ ವಿದ್ಯಾರ್ಥಿಗಳಿಗೆ ಯೋಗ ಮತ್ತು ಕರಾಟೆ ತರಬೇತಿಯು ಕೊನೆಗೊಂಡಿತು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ದಾನಪ್ಪ ಸೂರಗೊಂಡ, ಆಡಳಿತಾಧಿಕಾರಿ ಪ್ರಭು ಕೋಟ್ಯಾಳ, ಮುಖ್ಯ ಗುರು ದಯಾಸಾಗರ ಸೂರಗೊಂಡ ಹಾಗೂ ದೈಹಿಕ ಶಿಕ್ಷಕಿ ಶ್ರೀಮತಿ ಅನಿತಾ ರಜಪುತ, ಶಿಕ್ಷಕರಾದ ಎ.ಎಸ್. ಬಾಸಿಂಗಿ, ಯೋಗ ಮತ್ತು ಕರಾಟೆ ತರಬೇತಿದಾರರಾದ ಬಸವರಾಜ ಎನ್ ಬಾಗೇವಾಡಿ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಮಕ್ಕಳೊಂದಿಗೆ ಹಾಜರಾಗಿದ್ದರು.

