ಅನಧಿಕೃತ ಜಾನುವಾರುಗಳ ವಧೆ ಹಾಗೂ ಸಾಗಾಣೆಕೆ ತಡೆಯಲು ಜಿಲ್ಲಾಧಿಕಾರಿ ಡಾ. ಆನಂದ ಕೆ. ಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗುರುವಾರ ನಡೆಯಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅನಧಿಕೃತ ಜಾನುವಾರುಗಳ ವಧೆ ಹಾಗೂ ಸಾಗಾಣೆಕೆ ತಡೆಯಲು ಬಕ್ರೀದ್ ಹಬ್ಬದ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಚೆಕ್ ಪೋಸ್ಟ್ ಹಾಗೂ ವಿಶೇಷ ತಂಡ ರಚಿಸಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಬಕ್ರೀದ್ ಹಬ್ಬದ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ನಿರ್ಧರಿಸಿದಂತೆ ಜಿಲ್ಲೆಯಲ್ಲಿ ಚೆಕ್ ಪೋಸ್ಟಗಳನ್ನು ಸ್ಥಾಪಿಸಿ ಬಕ್ರೀದ್ ಹಿನ್ನೆಲೆಯಲ್ಲಿ ಮೇ ೨೭ ಮತ್ತು ೨೮ ರಂದು ಚೆಕ್ ಪೋಸ್ಟ್ ಗಳಲ್ಲಿ ಅನಧಿಕೃತ ಜಾನುವಾರುಗಳ ಸಾಗಣೆ ಹಾಗೂ ತಡೆಯಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಸೋಲ್ಲಾಪುರ ನಾಕಾ, ಜಮಖಂಡಿ ನಾಕಾ, ತಿಡಗುಂದಿ ಟೋಲ್ ಗೇಟ್, ಕನ್ನೊಳ್ಳಿಯಲ್ಲಿ ಹೊಸದಾಗಿ ಹೆಚ್ಚಿನ ಚೆಕ್ ಪೋಸ್ಟಗಳನ್ನು ತೆರೆಯಲು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಸ್ಥಾಪಿಸಲಾದ ಚೆಕ್ ಪೋಸ್ಟ್ ವಿವರ:
ಕನಮಡಿ: ನಿಯೋಜಿಸಲಾದ ಅಧಿಕಾರಿ ಹೆಸರು: ಡಾ. ನಾಗರಾಜ್ ಕನ್ನೂರ, ಪಶು ವೈದ್ಯಾಧಿಕಾರಿ. ಇವರೊಟ್ಟಿಗೆ ಸಿಬ್ಬಂದಿ ಬಸವರಾಜ ಸವದತ್ತಿ.
ಸಿದ್ದಾಪೂರ: ಡಾ. ಸಿ.ಟಿ. ರಾಠೋಡ, ಪಶು ವೈದ್ಯಾಧಿಕಾರಿ, ಇವರೊಟ್ಟಿಗೆ ಸಿಬ್ಬಂದಿ ಎಂ.ಬಿ. ಬಿರಾದಾರ.
ಯತ್ನಾಳ: ಡಾ. ಸಿ.ಟಿ. ರಾಠೋಡ, ಪಶು ವೈದ್ಯಾಧಿಕಾರಿ, ಇವರೊಟ್ಟಿಗೆ ಸಿಬ್ಬಂದಿ ನಮ್ರತಾ ರಾಠೋಡ.
ಸೋಲ್ಲಾಪುರ ನಾಕಾ: ಡಾ. ರವಿಶಂಕರ ಬಿರಾದಾರ, ಪಶು ವೈದ್ಯಾಧಿಕಾರಿ, ಇವರೊಟ್ಟಿಗೆ ಸಿಬ್ಬಂದಿ ಅಂಬಾದಾಸ ಗರುಡಕರ,
ಶಿರಾಡೋಣ: ಡಾ.ಸಂಗನಗೌಡ ಬಿರಾದಾರ, ಪಶು ವೈದ್ಯಾಧಿಕಾರಿ, ಇವರೊಟ್ಟಿಗೆ ಸಿಬ್ಬಂದಿ ಪ್ರವೀಣ ದಂಧರಗಿ.
ಧೂಳಖೇಡ: ಡಾ.ಶಿವಾನಂದ ನಾಯಕ,ಪಶು ವೈದ್ಯಾಧಿಕಾರಿ, ಇವರೊಟ್ಟಿಗೆ ಸಿಬ್ಬಂದಿ ಉಮೇಶ ಹೊನ್ನಕೋಡೆ.
ಜಮಖಂಡಿ ನಾಕಾ: ಡಾ.ಶಿವಾನಂದ ಪೂಜಾರಿ, ಪಶು ವೈದ್ಯಾಧಿಕಾರಿ, ಇವರೊಟ್ಟಿಗೆ ಸಿಬ್ಬಂದಿ ರವೀಂದ್ರ ಕುಲಕರ್ಣಿ.
ತಿಡಗುಂದಿ ಟೋಲ್ ಗೇಟ್: ಡಾ. ಪ್ರಶಾಂತ ಬೆಳ್ಳುಂಡಗಿ, ಪಶು ವೈದ್ಯಾಧಿಕಾರಿ, ಇವರೊಟ್ಟಿಗೆ ಸಿಬ್ಬಂದಿ ಎ.ಕೆ. ಜೋರಾಪುರ.
ಕನ್ನೊಳ್ಳಿ ಚೆಕ್ ಪೋಸ್ಟ್: ಡಾ.ಮಾರುತಿ ತಡ್ಲಗಿ, ಮುಖ್ಯ ಪಶು ವೈದ್ಯಾಧಿಕಾರಿ, ಇವರೊಟ್ಟಿಗೆ ಸಿಬ್ಬಂದಿ ಹತ್ತರಕಿಹಾಳ.
ವಿಶೇಷ ತಂಡಗಳ ವಿವರ:
೨೦೨೦-೨೧ನೇ ಕರ್ನಾಟಕ ಆಧ್ಯಾದೇಶ ಸಂಖ್ಯೆ: ೦೧ ಬಕ್ರೀದ ಹಬ್ಬದ ನಿಮಿತ್ಯ ಗೋಹತ್ಯೆ ನಿಷೇಧ ಕಾಯ್ದೆಯಡಿ ಬಕ್ರೀದ ಹಿನ್ನೆಲೆಯಲ್ಲಿ ಅನಧಿಕೃತ ಜಾನುವಾರುಗಳ ವಧೆ ಹಾಗೂ ಸಾಗಣೆ ತಡೆಯಲು ವಿಜಯಪುರ ನಗರದಲ್ಲಿ ಒಟ್ಟು ೦೫ ತಂಡ ಹಾಗೂ ಗ್ರಾಮೀಣ ಪ್ರದೇಶದಲ್ಲಿ ೦೧ ತಂಡವನ್ನು ರಚಿಸಲಾಗಿದೆ.
ನಿಯೋಜಿಸಿದ ಸಿಬ್ಬಂದಿ ವಿವರ:
ತಂಡ-೦೧ ಶಹಪೂರ ಅಗಸಿ: ಡಾ. ರಮೇಶ ರಾಠೋಡ, ಮೊ:೭೮೯೨೯೨೯೩೪೯, ಎಸ್.ಎಸ್. ಹಿರೇಮಠ, ಮೊ: ೯೭೪೧೨೯೯೦೬೭, ಸುನೀಲ್ ಬಿ.ಕಲಕೇರಿ ಮೊ:೮೧೯೭೫೯೯೮೦೭.
ತಂಡ-೨ (ಅಫಜಲಪುರ ಟಕ್ಕೆ): ಡಾ.ಬಾಳಾಸಾಹೇಬ ಬಂಡಿ, ಮೊ: ೬೩೬೨೧೯೪೫೦೩, ರಮೇಶ ಮೆಂಡಿಗೇರಿ ಮೊ: ೯೬೬೩೧೫೬೨೫೪, ಬಸವರಾಜ ಜುಮನಾಳ ಮೊ: ೯೧೧೦೬೬೯೨೬೦.
ತಂಡ-೩ ಖಾಜಾ ಹಸನ ದರ್ಗಾ ಹಕೀಮ ಚೌಕ ಹತ್ತಿರ: ಡಾ. ಅಖಿಲ ಜೋಷಿ, ಮೊ:೮೯೫೧೫೯೨೧೬೭, ಬಾಬು ಭಜಂತ್ರಿ ಮೊ:೯೪೪೮೫೫೫೬೭೬, ಆರ್.ಬಿ. ಬಡಿಗೇರ ಮೊ:೮೧೨೩೧೧೩೮೫೯.
ತಂಡ-೪ ನಿಸ್ಸಾರ ಮಡ್ಡಿ ಹವೇಲಿ ಗಲ್ಲಿ ಹತ್ತಿರ ಹಳೇ ಜುಮ್ಮಾ ಮಸೀದಿ: ಡಾ. ಮುತ್ತನಗೌಡ ಆರ್. ಬಿರಾದಾರ, ಮೊ: ೮೩೧೦೪೩೫೭೩೮, ಕೆ.ಎಫ್. ನಾಯಕ, ಮೊ: ೯೦೩೬೪೬೮೬೫೧, ವಿನೋದ ರಾಠೋಡ ಮೊ: ೮೮೬೭೧೯೨೩೫೮.
ತಂಡ-೫ ಸಕಾಫ ರೋಜಾ ನವಬಾಗ: ಡಾ. ದಯಾನಂದ ಸಜ್ಜನ, ಮೊ: ೯೮೪೫೦೬೫೨೦೮, ಶಿವಾನಂದ ವಾರನಕೋಡಿ, ಮೊ: ೯೩೮೦೫೦೧೫೧೫, ಯಮನಪ್ಪ ಗಂಗನಹಳ್ಳಿ ಮೊ: ೭೮೯೨೪೨೭೨೯೧.
ತಂಡ-೬ ತಾಲ್ಲೂಕಿನ ಗ್ರಾಮೀಣ ಪ್ರದೇಶ: ಡಾ. ಪ್ರಕೃತಿ ಬಿ.ಎಸ್. ಮೊ: ೮೭೪೬೯೦೫೩೬೯, ಎಂ.ಬಿ. ಭೋಸಲೆ, ಮೊ: ೭೭೬೦೧೩೬೩೯೬, ಪ್ರಹ್ಲಾದ ರಾಠೋಡ ಮೊ: ೯೭೪೩೭೫೩೪೫೯.
ತಂಡ-೭ ತಾಲ್ಲೂಕಿನ ಮೀಸಲು ತಂಡ: ಡಾ.ಸುಧೀರ ನಾಯಕ, ಮೊ: ೯೯೮೬೧೧೨೧೬೮, ಆಯ್.ಎಸ್.ಯರನಾಳ ಮೊ: ೯೯೦೦೫೭೦೪೧೫, ಆನಂದ ಬುರುಡ ಮೊ: ೮೧೨೩೦೮೭೦೨೬.
ಪಶುಪಾಲನಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಸುಜಾತಾ ಎಸ್.ಎಂ. ಮೊ:೯೮೪೫೮೭೩೭೦೧ ಇವರನ್ನು ಪಶು ಪಾಲನಾ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಯೊಂದಿಗೆ ಸಮನ್ವಯ ಹಾಗೂ ರಕ್ಷಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಬಕ್ರೀದ್ ಹಬ್ಬ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

