ಕಲಕೇರಿಯಲ್ಲಿ ದುರ್ಗಾದೇವಿಯ ಪುರಾಣ ಮಂಗಲೋತ್ಸವ ಮತ್ತು ಧರ್ಮಸಭೆ | ಶಾಸಕ ರಾಜುಗೌಡ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಮನುಷ್ಯ ಜೀವನದಲ್ಲಿ ಎದುರಾಗುವ ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಎದೆಗುಂದದೇ, ಅನ್ಯ ಮಾರ್ಗದಲ್ಲಿ ನಡೆಯದೇ ದೇವರಲ್ಲಿ ಅಚಲ ನಂಬಿಕೆಯನಿಟ್ಟು ಸತ್ಯ ಶುದ್ಧ ಕಾಯಕ ಮಾಡಿದಾಗ ದೇವಿಯ ಕೃಪೆಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು ಹೇಳಿದರು.
ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ದುರ್ಗಾದೇವಿ ಪುರಾಣ ಮಹಾಂಗಲೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಶರನ್ ನವರಾತ್ರಿ ಅಂಗವಾಗಿ ದೇವಿಯನ್ನು ಆರಾಧಿಸಲಾಗುತ್ತಿದ್ದು, ಬರಗಾಲದಿಂದ ತತ್ತರಿಸಿರುವ ಈ ನಾಡಿಗೆ ದೇವಿ ಕೃಪೆಯಿಂದ ಒಳ್ಳೆಯ ಮಳೆ, ಬೆಳೆಯಾಗಲಿ, ರೈತರ ಕಷ್ಟಗಳೆಲ್ಲ ದೂರವಾಗಲಿ, ಜನರ ಬದುಕು ಹಸನಾಗಲಿ, ಲೋಕ ಕಲ್ಯಾಣವಾಗಲಿ ಎಂದು ದುರ್ಗಾದೇವಿಯಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿಗಳು ಮತ್ತು ವಿಜಯಪುರ ಸಿಕ್ಯಾಬ್ ಮಹಿಳಾ ಪಿಯು ಕಾಲೇಜಿನ ಉಪನ್ಯಾಸಕರಾದ ಪ್ರೊ. ಉಮರಶರೀಫ ಕುಂಟೋಜಿ ಅವರು ಮಾತನಾಡಿ ಮನುಷ್ಯ ಮನುಷ್ಯನಿಗಾಗಿ ತುಡಿಯುವುದು, ಪ್ರತಿಯೊಬ್ಬರೂ ಪ್ರೀತಿ ಆದರಗಳಿಂದ ಸಾಮರಸ್ಯದ ಬದುಕನ್ನು ನಡೆಸುವುದು ಆ ಮೂಲಕ ವಿಶ್ವ ಬ್ರಾತೃತ್ವವನ್ನು ಸಾಧಿಸುವುದೇ ಎಲ್ಲ ಧರ್ಮಗಳ ಸಾರವಾಗಿದ್ದು, ದೇವಿಯ ಪುರಾಣದಲ್ಲಿ ಬರುವ ಅಸುರರ ಸಂಹಾರ ಅದು ನಮ್ಮ ದೇಹದಲ್ಲಿರುವ ಅರಿಷಡ್‌ವರ್ಗಗಳ ಸಂಹಾರವೇ ಆಗಿದ್ದು, ನಮ್ಮಲ್ಲಿರುವ ದುರ್ಗುಣಗಳನ್ನು ಸಂಹರಿಸಿ ಸದ್ಗುಣ ಸಂಪನ್ನರಾಗಿ ಜೀವನ ನಡೆಸಿ ಮುಕ್ತಾತ್ಮರಾಗುವುದೇ ನಿಜವಾದ ದೇವಿಯ ಪುರಾಣದ ಸಾರವಾಗಿದ್ದು, ಎಲ್ಲರು ಇದನ್ನರಿತು ನಡೆಯಬೇಕಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸನಗೌಡ ಎಸ್ ಪಾಟೀಲ ಯಡಿಯಾಪೂರ, ವಾಯ್ ಬಿ ಕುಲಕರ್ಣಿ, ಡಾ.ವ್ಹಿ.ಕೆ.ಜಾಲಹಳ್ಳಿಮಠ, ಆರ್ ಜಿ ಗುಮಶೆಟ್ಟಿ ಅವರು ಮಾತನಾಡಿದರು.
ಒಂಭತ್ತು ದಿನಗಳ ಕಾಲ ದುರ್ಗಾದೇವಿಯ ಪುರಾಣವನ್ನು ಹೇಳಿದ ಕೊಮ್ಮನೂರಿನ ನಾಗಭೂಷಣ ಶಾಸ್ತಿçಗಳು ಪುರಾಣ ಮಹಾಮಂಗಲದ ಪ್ರಯುಕ್ತ ಜೀವನಮುಕ್ತಿಸಾರ ಸಂದೇಶವನ್ನು ಹೇಳಿದರು, ರಾಜು ಬುಯ್ಯಾರ ಮತ್ತು ಸದ್ದೇಶಕುಮಾರ ಹೂಗಾರ ಅವರು ನಡೆಸಿಕೊಟ್ಟ ಸಂಗೀತ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಪಂಚರಂಗ ಸಂಸ್ಥಾನ ಗದ್ದುಗೆಮಠದ ಮಡಿವಾಳೇಶ್ವರ ಶಿವಾಚಾರ್ಯರು ಸಾನಿಧ್ಯವಹಿಸಿದ್ದರು, ತಿಳಗೂಳ ಬ್ರಹ್ಮವಿದ್ಯಾಶ್ರಮದ ಮಹೇಶ್ವರಾನಂದಜೀ ಮಹಾಸ್ವಾಮಿಗಳು ಅಧ್ಯಕ್ಷತೆವಹಿಸಿದ್ದರು, ಶರಬಯ್ಯ ಗದ್ದುಗೆಮಠ, ಈರಯ್ಯ ಚಿಕ್ಕಮಠ, ಶಿವಾನಂದ ಬಸವರಾಜ ಶಿಲ್ಪಿ ಅವರು ನೇತೃತ್ವವಹಿಸಿದ್ದರು, ಹಿರಿಯರಾದ ಬಸವರಾಜ ಚಿಕ್ಕಮಠ, ಎಸ್.ಬಿ.ಪಾಟೀಲ, ಸಂಗಮನಾಥ ದೇಸಾಯಿ, ಶ್ರೀಶೈಲ ವಿಶ್ವಕರ್ಮ, ವೀರೇಶ ಸರಗಣಾಚಾರಿ, ಜಹಾಂಗೀರಬಾಶಾ ಸಿರಸಗಿ, ಸಹಕಾರಿ ಇಲಾಖೆಯ ಕನಕರಾಜ ವಡ್ಡರ, ವಿಜಯಪುರದ ಸಂಗನಗೌಡ ಪಾಟೀಲ, ಉಪನ್ಯಾಸಕರಾದ ಜಗದೀಶ ಸಾತಿಹಾಳ, ಪ್ರಶಾಂತ ಸುಣಗಾರ ಸಿಂದಗಿ, ಪ್ರಭುಗೌಡ ಬಿರಾದಾರ ಅಸ್ಕಿ, ಶರಣಪ್ಪ ಮೋಪಗಾರ, ಪಿಕೆಪಿಎಸ್ ಅಧ್ಯಕ್ಷರಾದ ರುದ್ರಪ್ಪ ಗುಮಶೆಟ್ಟಿ, ಕುಮಾರ ದೇಸಾಯಿ, ಶಿವಪುತ್ರ ಸಾತಿಹಾಳ, ಕಂಠೀರವ ದೇಸಾಯಿ, ಪ್ರವೀಣ ಜಗಶೆಟ್ಟಿ, ಹಣಮಂತ ವಡ್ಡರ, ನಿತ್ಯಾನಂದ ಕತ್ತಿ, ಸುನೀಲಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

