ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಈ ವರ್ಷ ಮಳೆ ಇಲ್ಲದೆ ತೀವ್ರ ಬರಗಾಲ ಇರುವದರಿಂದ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದ್ದು ಇದರಿಂದ ಮಹಾರಾಷ್ಟ್ರದ ತುಳಜಾಪುರದ ಅಂಬಾಭವಾನಿ ದರ್ಶನಕೆ ತೆರಳುವ ಪಾದಯಾತ್ರಿಕರಿಗೆ ಮತ್ತು ಅಲ್ಲಲ್ಲಿ ದಾಸೋ ವ್ಯವಸ್ಥೆ ಮಾಡುವವರಿಗೆ ನೀರಿನ ಸಮಸ್ಯೆ ಕಂಡು ಬಂದಿದ್ದು ಮುಂಚಿತವಾಗಿ ಪರಿಶೀಲಿಸಿ ಪ್ರತಿ ವರ್ಷದಂತೆ ದಾಸೋಹ ಹಾಗೂ ಉಚಿತ ಆರೋಗ್ಯ ಸೇವೆ ಮಾಡಲಾಗುವುದು ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ಬಸವರಾಜ ಹೂಗಾರ ಹೇಳಿದರು.
ಭಾನುವಾರ ಆಲಮೇಲ ಪಟ್ಟಣದ ತುಳಜಾಪುರದ ಪಾದಯಾತ್ರಿಕರಿಗೆ ದಾಸೋಹ ಕಮಿಟಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೇಳಿದರು.
ತುಳಜಾಪುರದ ಶ್ರೀ ಅಂಬಾಭವಾನಿ ದೇವಿಯ ದರ್ಶನಕ್ಕಾಗಿ ಪಾದಯಾತ್ರೆ ಕೈಗೊಳ್ಳುವ ಭಕ್ತಾದಿಗಳ ಅನುಕೂಲಕ್ಕಾಗಿ ಆಲಮೇಲ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳು, ದಾಸೋಹ ಸಮಿತಿಗಳು ಹಾಗೂ ಗೆಳೆಯರ ಬಳಗದವತಿಯಿಂದ ತುಳಜಾಪುರ ಮಾರ್ಗದಲ್ಲಿ ದಾಸೋಹ ಮತ್ತು ಉಚಿತ ವೈದ್ಯಕೀಯ ಸೇವೆಗಳನ್ನು ಕಲ್ಪಿಸಲಾಗುತ್ತಿದೆ. ಭಕ್ತಾದಿಗಳ ಪ್ರಯಾಣದ ಆಯಾಸವನ್ನು ಕಡಿಮೆ ಮಾಡಿ, ಅವರಿಗೆ ಆಹಾರ ಮತ್ತು ಅಗತ್ಯ ವೈದ್ಯಕೀಯ ನೆರವು ಒದಗಿಸುವ ಸದುದ್ದೇಶದಿಂದ ಆಲಮೇಲದ ಸಂಘಟಕರು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಾರಂಭದಲ್ಲಿ ಇಂಡಿ ರೈಲ್ವೆ ನಿಲ್ದಾಣದಿಂದ ಸುಮಾರು 3 ಕಿ.ಮೀ. ಅಂತರದಲ್ಲಿ ಆಲಮೇಲದ ಸಂಗಮೇಶ್ವರ ಮೆಡಿಕಲ್ ಸ್ಟೋರ್ಸ್ ನವರು ಉಚಿತ ವೈದ್ಯಕೀಯ ಸೇವೆ ಮತ್ತು ಎದುರುಗಡೆ ಜೈ ಭವಾನಿ ಬಸ್ ಸ್ಟಾಂಡ್ ಗೆಳೆಯರ ಬಳಗ ದಾಸೋಹ ಹಮ್ಮಿಕೊಳ್ಳಲಾಗಿದೆ. ಇಂಡಿ ತಾಲೂಕಿನ ಹಲಸಂಗಿಯಿಂದ ಸುಮಾರು 1 ಕಿ.ಮೀ. ಅಂತರದಲ್ಲಿ ಆಲಮೇಲದ ಕನಸು ಫೌಂಡೇಶನ್ ಉಚಿತ ವೈದ್ಯಕೀಯ ಸೇವೆ. ಹಲಸಂಗಿ ಕ್ರಾಸ್, ಹೈವೇ ಪಕ್ಕದಲ್ಲಿ, ವಿರಾಮ್ ಹೋಟೆಲ್ ಎದುರಿಗೆ ಆಲಮೇಲ ಅಂಬಾಭವಾನಿ ದಾಸೋಹ ಕಮಿಟಿ ದಾಸೋಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸೋಲಾಪುರದಿಂದ ತುಳಜಾಪುರ ಮಾರ್ಗದಲ್ಲಿ ಸೋಲಾಪುರ ಸಮೀಪ ಸುಮಾರು 10 ಕಿ.ಮೀ. ಮುಂದಕ್ಕೆ ದಾಸೋಹ ವೆವಸ್ಥೆ ಮಾಡಿಕೊಳ್ಳಲಾಗಿದೆ. ತುಳಜಾಪುರ ಶ್ರೀ ಅಂಬಾಭವಾನಿ ದೇವಿಯ ದರ್ಶನಕ್ಕಾಗಿ ದೂರದ ಊರುಗಳಿಂದ ಪಾದಯಾತ್ರೆ ಕೈಗೊಳ್ಳುವ ಭಕ್ತಾದಿಗಳಿಗೆ ಮಾರ್ಗಮಧ್ಯದಲ್ಲಿ ಆಹಾರ ಮತ್ತು ವೈದ್ಯಕೀಯ ನೆರವು ಒದಗಿಸಲಾಗುವದು ಅದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಸಿದರು.
ಬಸವರಾಜ ಹೂಗಾರ, ಪ್ರಶಾಂತ ನಾಶಿ, ವಿಶ್ವನಾಥ ಕೋರಳ್ಳಿ, ಶರಣು ಅಚಲೇರಿ, ಬಸವರಾಜ ಗಾಳಿಮಠ, ನಾಗರಾಜ ಆಳೂರ, ಗುರುರಾಜ ಕೋಣಶಿರಸಗಿ, ಬಂಡು ಸ್ಥಾವರಮಠ, ಗೌತಮ ಯಂಟಮನ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

