ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸದೆ ಇರುವ ಹಾಗೂ ಗುಂಪುಗಳನ್ನು ರಚಿಸದೆ ಇರುವ ಚೀಟಿ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.
ಈ ಪತ್ರಿಕಾ ಪ್ರಕಟಣೆ ಜಾರಿಯಾದ ೦೭ ದಿನದಲ್ಲಿ ಸಂಬಂಧಪಟ್ಟ ಚೀಟಿ ಕಂಪನಿಯ ಪೋರಮನ್‌ಗಳು ಆಕ್ಷೇಪಣೆಗಳಿದ್ದರೆ ನೇರವಾಗಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಗೆ ಸಂಪರ್ಕಿಸಬಹುದಾಗಿದೆ.
ಒಂದು ವೇಳೆ ಯಾವುದೇ ಆಕ್ಷೇಪಣೆಗಳು ಇಲ್ಲದಿದ್ದರೆ ಗುಂಪುಗಳ ರಚಿಸದೆ ಇರುವಂತಹ ಕಂಪನಿಗಳ ಹೆಸರನ್ನು ಇಲಾಖೆಯಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದವರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಒಟ್ಟು ೩೮ ಚೀಟಿ ನಿಧಿಗಳ ಕಂಪನಿಗಳಿದ್ದು ಅವುಗಳ ಪೈಕಿ ಕೇವಲ ೧೮ ಚೀಟಿ ಕಂಪನಿಗಳು ಕಾರ್ಯನಿರತವಾಗಿರುತ್ತವೆ. ೨೦ ಚೀಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ಚೀಟಿ ಅಧಿನಿಯಮ ೧೯೮೨ ಪ್ರಕರಣ ೨೦(೧)ರ ಪ್ರಕರಣ ಚೀಟಿ ೪ರಡಿಯಲ್ಲಿ ಈ ಕಾರ್ಯಾಲಯದ ಪೂರ್ವಾನುಮೋದನೆ ಪಡೆದು ಚಾಲ್ತಿಯಲ್ಲಿರುವ ಗುಂಪುಗಳ ಮಾಹಿತಿ ಹಾಗೂ ಮತ್ತು ಮುಕ್ತಾಯಗೊಂಡ ಗುಂಪುಗಳ ಮಾಹಿತಿ ಕುರಿತು ೩ ವರ್ಷದ ಅಢಾವೆ ಪತ್ರಿಕೆಯ ಮಾಹಿತಿ ಕೇಳಿದ್ದು ಇರುತ್ತದೆ ಅದರಂತೆ ಕಾರ್ಯನಿರ್ವಹಿಸುತ್ತಿರುವ ಚೀಟಿ ಕಂಪನಿಗಳು ಮಾಹಿತಿ ನೀಡಬೇಕು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
