ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಾರ್ಚ ೧೮ ರಂದು ರಾಜ್ಯಾದಂತ ಕನ್ನಡ ಉರ್ದು ಇಂಗ್ಲೀಷ ಮಾಧ್ಯಮದ ಪ್ರಥಮ ಬಾಷೆ ಪೇಪರ ಎಲ್ಲ ಕಡೆ ಶಾಂತಿಯುತ ವಾಗಿದೆ. ಆದರೆ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯ ಪ್ರಶ್ನೆ ನಂ ೧ ರ ಉತ್ತರ ಗಳು ಎರಡು ಸರಿಯಾಗಿದ್ದು ಇದರಿಂದ ೬೨೫ ಕ್ಕೆ ೬೨೫ ಪಡೆಯುವ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ.
ಇಂಗ್ಲೀಷ್ ಪ್ರಶ್ನೆ ಪತ್ರಿಕೆಯಲ್ಲಿ ಮೊದಲ ಪ್ರಶ್ನೆಯ ಯು ಬ್ಲಾಕ್ಸ, ಯು ಸ್ಟೋನ್ಸ, ಯು ರ‍್ಸ ದ್ಯಾನ ಸೆನ್ಸಲೆಸ್ ಥಿಂಗ್ಸ ಎಂಬ ಪ್ರಶ್ನೆಗೆ ಸಿಮಿಲಿ, ಪರಸಾನಿಫಿಕೇಷನ್ ಮೇಠಾಫೆರ್ ಮತ್ತು ಅಲಿಟರೇಷನ್ ನಾಲ್ಕು ಉತ್ತರ ಗಳಿವೆ, ಈ ಪ್ರಶ್ನೆಗೆ ಬಳಸಿರುವ ವಾಕ್ಯವು ವಿಲಿಯಂ ಸೆಕ್ಸಪಿಯರ್ ರವರ ಜುಲಿಯಸ್ ಸಿಜರ್ ನಾಟಕದ್ದು ಆದರೆ ಆ ನಾಟಕ ೧೦ ನೇ ತರಗತಿ ಪಠ್ಯ ಕ್ರಮದಲ್ಲಿ ಇಲ್ಲ. ಲೆಸ್ಸನ್ ಬೇಸ್ಡ ಅಸ್ಸೆಸ್ಸಮೆಂಟ್ ಸಿಲೆ ಬಸ್ ನಲ್ಲಿ ಇಲ್ಲ. ಇದರಿಂದ ಈ ವಾಕ್ಯದ ಹಿನ್ನೆಲೆ ವಿದ್ಯಾರ್ಥಿಗಳಿಗೆ ತಿಳಿಯದೇ ಇರುವ ಕಾರಣ, ಅದರ ಅರ್ಥವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವದು ಕಷ್ಟಕರವಾಗಿದೆ. ಪರಿಣಾಮವಾಗಿ ಸರಿಯಾಗಿ ಅಲಂಕಾರವನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ವಿಷಯ ತಜ್ಞರ ಅಭಿಪ್ರಾಯವೂ ಪಡೆದಾಗಲೂ ಈ ಪ್ರಶ್ನೆಯು ಸ್ಪಷ್ಠತೆಯ ಕೊರತೆಯಿಂದ ಕೂಡಿದೆ ಎಂಬುದು ತಿಳಿದು ಬಂದಿದೆ.
ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಪ್ರಶ್ನೆಗೆ ಒಂದು ಕೃಪಾಂಕ ಗ್ರೆಸ್ ಮಾರ್ಕ ನೀಡುವಂತೆ ಇಂಡಿಯ ಶ್ರೀ ಸಾಯಿ ಪಬ್ಲಿಕ್ ಶಾಲೆ, ರಾಯಲ್ ಪಬ್ಲಿಕ ಶಾಲೆ, ಕರ್ನಾಟಕ ವಿದ್ಯಾವರ್ಧಕ ಸಂಘ, ವೀರ ಭಾರತಿ ವಿದ್ಯಾ ಕೇಂದ್ರ ಬಾಗ್ಯವಂತಿ ಪ್ರೌಢಶಾಲೆ ಚವಡಿಹಾಳ, ಬೀರಲಿಂಗೇಶ್ವರ ಪ್ರೌಢಶಾಲೆ ಹಿರೇಬೇವನೂರದ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯರರು ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಪರೀಕ್ಷಾ ಮಂಡಳಿಗೆ ತಿಳಿಸಿ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ

