ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಳೆ ಗಾಳಿಯಿಂದಾಗಿ ತಕ್ಷಣಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ ತುರ್ತು ಸೇವಾ ಕೇಂದ್ರ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಹೆಸ್ಕಾಂನ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹೆಸ್ಕಾಂ ವಿಜಯಪುರ ನಗರ ಉಪ ವಿಭಾಗ-೧ಕ್ಕೆ ಸಂಬಂಧಿಸಿದಂತೆ,ನಗರದ ಗಾಂಧಿ ವೃತ್ತದಿಂದ ಉತ್ತರ ಈಶಾನ್ಯ ಮತ್ತು ವಾಯುವ್ಯ ದಿಕ್ಕಿನ ಪ್ರದೇಶಕ್ಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಡಿ.ಎಂ. ಮೂಲಿಮನಿ ಮೊಬೈಲ್ ಸಂಖ್ಯೆ: ೯೪೪೮೩೭೦೨೫೦ ಹಾಗೂ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ:೦೮೩೫೨-೨೫೦೦೩೬, ಮತ್ತು ಹೆಸ್ಕಾಂ ವಿಜಯಪುರ ನಗರ ಉಪ ವಿಭಾಗ-೨ಕ್ಕೆ ಸಂಬಂಧಿಸಿದಂತೆ ನಗರದ ಗಾಂಧಿ ವೃತ್ತದಿಂದ ದಕ್ಷಿಣ, ನೈಋತ್ಯ ಮತ್ತು ಅಗ್ನಿಯ ದಿಕ್ಕಿನ ಪ್ರದೇಶದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಕ್ಷರಬಾಶಾ ಕುರಿ ಮೊ. ಸಂಖ್ಯೆ:೯೪೪೮೩೨೭೫೭೧೧, ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: ೯೪೮೦೮೮೨೬೯೦ ಹಾಗೂ ೦೮೩೫೨-೨೭೬೯೪೦ ಸಂಪರ್ಕಿಸಬಹುದಾಗಿದೆ.
ಜೊತೆಗೆ ಟೊಲ್ ಫ್ರೀ ಅಥವಾ ಹೆಸ್ಕಾಂ, ಸಹಾಯವಾಣಿ ೧೯೧೨ ಸಂಪರ್ಕಿಸಬಹುದು. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದಲ್ಲಿ ತುರ್ತು ಸಂದರ್ಭಕ್ಕೆ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
