ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನ್ಯಾಯಮೂರ್ತಿ ನಾಗಮೋಹನದಾಸ ಒಳ ಮಿಸಲಾತಿ ಏಕ ಸದಸ್ಯ ವಿಚಾರಣಾ ಆಯೋಗ ವಿರೋಧಿಸಿ ದಿನಾಂಕ ೨೫-೦೩-೨೦೨೬ ರಂದು ಮುಂಜಾನೆ ೧೦.೩೦ ಘಂಟೆಗೆ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದ್ದು, ವಿಜಯಪುರ ಜಿಲ್ಲೆಯ ಸಮಸ್ತ ಛಲವಾದಿ ಬಂಧುಗಳು ಹೋರಾಟದಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಚಂದ್ರಶೇಖರ ಕೊಡಬಾಗಿ, ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷರುಗಳಾದ ಸುನೀಲ ಉಕ್ಕಲಿ, ಮತ್ತು ರಾಹುಲ ಕುಬಕಡ್ಡಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಘೋಣಸಗಿ, ಕುಮಾರ ಶಹಾಪುರ ಅವರು ಪತ್ರಿಕಾ ಹೇಳಿಕೆ ನೀಡುವುದರ ಮೂಲಕ ಜಿಲ್ಲೆಯ ಸಮಸ್ತ ಛಲವಾದಿ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
