ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಾಡಿಗೆ ರಶೀದಿಗಳು ಹಣದ ರಶೀದಿಗಳು ಮತ್ತು ಇತರ ಕಾನೂನು ಬದ್ದ ದಾಖಲೆಗಳಗೆ ಅಗತ್ಯವಿರುವ ಒಂದು ರೂಪಾಯಿ ಮೌಲ್ಯದ ಕಂದಾಯ ಚೀಟಿಗಳು (ಖeveಟಿue Sಣmಠಿ) ಜಿಲ್ಲೆಯ ಮುಖ್ಯ ಅಂಚೆ ಕಚೇರಿ ಹಾಗೂ ಉಪ ಅಂಚೆ ಕಚೇರಿಗಳಲ್ಲಿ ಲಭ್ಯವಿವೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಜಯಪುರ ವಿಭಾಗದ ಅಂಚೆ ಕಚೇರಿಗಳ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
