ಸಿಂದಗಿ: ಆಲಮೇಲ ತಾಲೂಕಿನ ದೇವಣಗಾವ ಗ್ರಾಮದ ಹಿರಿಯ ಜೀವಿ, ಮಾಜಿ ಶಾಸಕ ರಮೇಶ ಭೂಸನೂರ ಅವರ ತಂದೆ ಬಾಳಪ್ಪ ಮಲ್ಲಪ್ಪ ಭೂಸನೂರ (90) ಇವರು ಅ.7ರಂದು ಸಂಜೆ ನಿಧನರಾದರು. ಮೃತರರಿಗೆ ಶಾಸಕ ರಮೇಶ ಭೂಸನೂರ ಸೇರಿದಂತೆ ಈರ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಅ.8ರಂದು ಮಧ್ಯಾಹ್ನ 3 ಗಂಟೆಗೆ ದೇವಣಗಾವ ಗ್ರಾಮದ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂತಾಪ: ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಮಾಜಿ ವಿಪ ಸದಸ್ಯ ಅರುಣ ಶಹಾಪುರ, ಡಾ.ಗೌತಮ್ ಆರ್. ಚೌಧರಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಗುರು ತಳವಾರ, ಯಶವಂತರಾಯಗೌಡ ರೂಗಿ, ಖಾಜು ಬಂಕಲಗಿ, ರವಿ ನಾಯ್ಕೋಡಿ, ಮಲ್ಲು ಸಾವಳಸಂಗ, ಸಾಯಬಣ್ಣ ದೇವರಮನಿ, ಸಂತೋಷ ಪಾಟೀಲ ಡಂಬಳ ಸೇರಿದಂತೆ ತಾಲೂಕಿನ ಜನತೆ ಸಂತಾಪ ಸೂಚಿಸಿದ್ದಾರೆ.
Related Posts
Add A Comment