ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ

30 ನೆಯ ದಿನದ ಶರಣ ಮಾಲಿಕೆಯಲ್ಲಿ ಶಂಕರ ಕುಪ್ಪಸ್ತ ಅವರು ಶಂಕರ ದಾಸಿಮಯ್ಯ ಅವರ ಕುರಿತು ತಮ್ಮ ಅನುಭಾವವನ್ನು ಹಂಚಿಕೊಂಡರು.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಂದಕಲ್ಲು ಗ್ರಾಮದಲ್ಲಿ ಗೋವಿಂದ ಭಟ್ಟನೆಂಬ ನಾಮದಿಂದ ಜನಿಸಿ, ದುಮ್ಮವ್ವೆ ಎಂಬ ಸತಿಯೊಡನೆ ಕಾಶಿಯಾತ್ರೆಗೆಂದು ಹೊರಟು ಕೃಷ್ಣಾ ತೀರದ ನವಿಲೆಗೆ ಬಂದು ಅಲ್ಲಿಯ ಜಡೆಯ ಶಂಕರನ ಕೃಪೆಯಿಂದ ಶಂಕರ ದಾಸಿಮಯ್ಯನಾಗಿ ಹೊಸ ಹುಟ್ಟನ್ನು ಪಡೆದದ್ದನ್ನು, ಸೂಜಿ ಕಾಯಕದ ಕಾಯಕವನ್ನು, ಅವರು ನಿಜಗುರು ಶಂಕರ ದೇವಾ ಅಂಕಿತದಲ್ಲಿ ಐದು ವಚನಗಳು ಬರೆದದ್ದನ್ನು, ಶಂಕರ ದಾಸಿಮಯ್ಯನವರ ಬಗೆಗೆ ತೆಲುಗು ಬಸವ ಪುರಾಣ ಸೋಮೇಶ್ವರ ಪುರಾಣ, ಭೈರವೇಶ್ವರ ಕಾವ್ಯ ರಗಳೆ ಶಂಕರ ದಾಸಿಮಯ್ಯನ ಪುರಾಣಗಳಲ್ಲಿ ಮಾಹಿತಿ ಲಭ್ಯವಾಗುತ್ತದೆ ಎಂಬುದನ್ನು, ಶಿವನಿಂದ ಹಣೆಗಣ್ಣು ಪಡೆದ ಸಂಗತಿ, ಕಲ್ಯಾಣದಲ್ಲಿ ವಿಷ್ಣುವಿನ ವಿಗ್ರಹ ದಹಿಸಿದ ಘಟನೆ,ಮುದೇನೂರಿನಲ್ಲಿ ಜೇಡರ ದಾಸಿಮಯ್ಯನವರ ಅಹಂಕಾರವನ್ನು ಮುರಿದ ಪ್ರಸಂಗಗಳು ಚರಿತ್ರೆಯ ರೂಪದಲ್ಲಿ ಪುರಾಣಗಳಲ್ಲಿ ಕಾಣಸಿಗುತ್ತವೆ ಎಂದು ಅವರ ಐದು ವಚನಗಳ ವಿಶ್ಲೇಷಣೆಯೊಂದಿಗೆ ತಿಳಿಸಿ ಕೊಟ್ಟರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಶಂಕರ ದಾಸಿಮಯ್ಯ ಒಬ್ಬ ದಿಟ್ಟ ಶರಣ ತಾವು ಬರೆದ ಐದು ವಚನಗಳಲ್ಲಿ ಬಸವಣ್ಣ, ಅಲ್ಲಮಪ್ರಭು,ಚನ್ನಬಸವಣ್ಣ, ಮತ್ತು ಮರುಳ ಶಂಕರ ದೇವರನ್ನು ಸುತ್ತಿಸಿದ್ದಾರೆ.ಶಂಕರ ದಾಸಿಮಯ್ಯ ಬಸವಣ್ಣನವರ ಸಮಕಾಲೀನ ಅನುಭಾವಿ ಶರಣರು. ಇವರು ನೇಕಾರ ಜಾಡರು.ನೇಯ್ದ ಬಟ್ಟೆಗೆ ಮತ್ತು ನೂತ ನೂಲಿಗೆ ಬಣ್ಣವನ್ನು ಎದ್ದುತ್ತಿದ್ದರು. ಶಂಕರ ದಾಸಿಮಯ್ಯನವರಿಗೆ ತಮ್ಮ ಅನುಭಾವದ ಅವಿರ್ಭಾವದ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಬಸವಣ್ಣನವರು ಚನ್ನಬಸವಣ್ಣನವರು ಮರುಳ ಶಂಕರ ದೇವರು ಪ್ರಭುದೇವರು ನೆರವಾದರು, ಸ್ಫೂರ್ತಿಯಾದರು ಎಂದು ನೆನೆದಿದ್ದಾರೆ. ತಮ್ಮ ಕಾಯಕಕ್ಕೆ ಪಾವಿತ್ರ್ಯ ಒದಗಿಸಿದ ಮಹಾ ಮಹಿಮ ಬಸವಣ್ಣನವರು ತಮಗೆ ಕಾಯಕದ ಮಹತ್ವ ಕಲಿಸಿದ ಮತ್ತು ತಮಗೆ ಕಾಯಕದ ಕಡ್ದಾಯತ್ವವನ್ನು ತೋರಿದ ಗುರು ಎಂದಿದ್ದಾರೆ. ಅದೇ ರೀತಿ ತಮ್ಮ ಜೀವಕ್ಕೆ ಲಿಂಗವಾದನು ಚನ್ನಬಸವಣ್ಣ ಎಂದು ಹೇಳಿದ್ದಾರೆ. ಎನ್ನುವದನ್ನು ತಮ್ಮ ಮಾರ್ಗದರ್ಶನದಲ್ಲಿ ಸ್ಪಷ್ಟ ಪಡಿಸಿದರು.
ದತ್ತಿ ದಾಸೋಹಿಗಳಾದ ಸುಧಾ ಪಾಟೀಲ ಅವರು ತಮ್ಮ ತಂದೆ ಯವರ ಬಗೆಗೆ ಗದುಗಿನ ತೋoಟದಾರ್ಯ ಮಠದಿಂದ ಪ್ರಕಟವಾಗುವ ಪುಸ್ತಕಕ್ಕೆ ” ಕಟ್ಟುನಿಟ್ಟಿನ ಮತ್ತು ಶಿಸ್ತುಬದ್ಧ ಲಿಂಗಾಯತ ಅಧಿಕಾರಿ ಶ್ರೀ ಬಿ. ಎಂ. ಪಾಟೀಲ ” ಎನ್ನುವ ಲೇಖನ ಬರೆದು ಕೊಟ್ಟಿದ್ದೇನೆ ಎಂದು ಹೇಳುತ್ತಾ, ತಮ್ಮ ತಂದೆಯವರು ಬರೆದಿಟ್ಟ 200 ಪುಟಗಳ ಜೀವನ ಚರಿತ್ರೆಯಿಂದ ಆಯ್ದ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡರು. ಸಂವಾದದಲ್ಲಿ ಹಲವಾರು ಗಣ್ಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿ ಸಿದರು.
ಶರಣೆ ಸುಗುಣ ಮಲ್ಲೇಶ ಅವರ ವಚನ ಪ್ರಾರ್ಥನೆ, ಶರಣೆ ಸ್ಮಿತಾ ಪಾವಟೆ ಅವರ ಸ್ವಾಗತ,ಶರಣೆ ಅಕ್ಕಮಹಾದೇವಿ ತೆಗ್ಗಿ ಅವರ ಶರಣು ಸಮರ್ಪಣೆ, ಶರಣೆ ಶಾಂತಾ ಲಂಬಿ ಅವರ ವಚನ ಮಂಗಳ ಮತ್ತು ಶರಣೆ ದಾಕ್ಷಾಯಣಿ ಮಂಡಿ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.

ವಿಶೇಷ ದತ್ತಿ ಉಪನ್ಯಾಸ – 327
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶ್ರೀ ಬಿ.ಎಂ.ಪಾಟೀಲ ಮತ್ತು ತಾಯಿಯವರಾದ ಲಿಂ.ಶ್ರೀಮತಿ ಅಕ್ಕಮಹಾದೇವಿ ಪಾಟೀಲ – ಗದಗ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 327
