ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ

29 ನೆಯ ದಿನದ ಶರಣ ಮಾಲಿಕೆಯಲ್ಲಿ ಡಾ. ಚಂದ್ರ ಶೇಖರ ಹೆಗಡೆ ಅವರು ” ವಚನ ಗಳು ಮುಕ್ತ ಛಂದಸ್ಸಿನ ಕಾವ್ಯ ” ಎನ್ನುವ ವಿಷಯ ಕುರಿತು ಅತ್ಯಂತ ಪ್ರಭುದ್ದವಾಗಿ ಮಾತಾಡಿದರು.
ಡಾ. ಚಂದ್ರಶೇಖರ ಅವರು ಮೊದಲಿಗೆ ವಚನಗಳ ವಿಶಿಷ್ಟತೆಗಳನ್ನು ವಿವರಿಸುತ್ತ ಹೋದರು. ವಚನಗಳ ಸಂಕ್ಷಿಪ್ತತೆ, ವಚನಗಳ ಕೊನೆಯಲ್ಲಿ ಅಂಕಿತಗಳು, ನಿಯತ ಛoದಸ್ಸಿಗೆ ಒಳಪಡದ ಸಾಲುಗಳು,ಗದ್ಯದ ಸರಳ ಶೈಲಿ, ಪದ್ಯದ ಸೌಂದರ್ಯ ರೀತಿ, ಲಯಬದ್ಧತೆ, ನಾದಮಯತೆ, ಸಾಲುಗಳ ಬಂಧನವಿಲ್ಲ, ಪ್ರಾಸಗಳ ಕಡ್ಡಾಯ ನಿಯಮ ವಿಲ್ಲ,ಜನಸಾಮಾನ್ಯರ ಸರಳವಾದ ಆಡು ಭಾಷೆ ಬಳಕೆ, ಮಾತನಾಡಿದಂತೆ ಕವನ, ಆತ್ಮವಿಮರ್ಶೆ, ಸ್ವ ನಿರೀಕ್ಷಣೆ, ಪ್ರಮಾಣಗಳು ಸಂವಾದಾತ್ಮಕತೆ ಭಾವಗೀತೆಗಳು, ಮುಕ್ತವಾದ ಛಂದಸ್ಸು, ತಾಳಮಾನಗಳ ಅಗತ್ಯತೆಯಿಲ್ಲ, ಮಾತ್ರಾಗಣ, ಅಕ್ಷರ ಗಣ, ಅಂಶಗಣಗಳ ಹಂಗಿಲ್ಲ ಎನ್ನುವುದರ ಪ್ರತಿಯೊಂದು ಲಕ್ಷಣಗಳನ್ನು ತಿಳಿಸಿ ಹೇಳಿದರು.
ವಚನಗಳ ಮುಕ್ತಕ ರೂಪ, ವಚನಗಳ ಚಂದೋಗoಧಿತ್ವ, ವಚನಗಳಲ್ಲಿ ಪಂಚ ಮಾತ್ರಾಲಯ, ವಚನಗಳಲ್ಲಿ ಅಂಶಲಯ,ವಚನಗಳಲ್ಲಿ ಪ್ರಾಸ ಶ್ಲೇಷಾಲಂಕಾರಗಳು, ವಚನಗಳಲ್ಲಿ ಅನುಪ್ರಾಸ, ವಚನಗಳಲ್ಲಿ ಅಂತ್ಯಪ್ರಾಸ, ವಚನಗಳಲ್ಲಿ ಕಾವ್ಯ ಗುಣ, ಹೀಗೆ ಪ್ರತಿಯೊಂದು ಅಂಶಗಳನ್ನು ಶರಣರ ವಚನ ಗಳ ಉದಾಹರಣೆ ಮೂಲಕ ತಿಳಿಸಿಕೊಟ್ಟರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಚಂಪೂ ಕಾವ್ಯವೆಂಬ ಮಹಾಪೂರಕ್ಕೆ ಅಡ್ಡಗೋಡೆ ಕಟ್ಟಿ,ಬಸವಣ್ಣ ನವರು ಸರಳ ಭಾಷೆಯಲ್ಲಿ ವಚನ ರಚನೆ ಮಾಡಿದ ಶರಣರನ್ನು ಮಾಲೀಕರನ್ನಾಗಿ ಮಾಡಿದರು,
ಷಟಸ್ಥಲದ ಅರಿವು ಮೂಡಿಸಿದರು,ನಿನ್ನೊಳಗೆ ಚೇತನ, ಜ್ಞಾನ ಎಲ್ಲವೂ ಇದೆ, ಯಾವುದಕ್ಕೂ ಜೋತು ಬೀಳದೆ ಎಲ್ಲವನ್ನೂ ಕುರುಹು ಆಗಿ ತೆಗೆದುಕೊಳ್ಳಬೇಕು ಎನ್ನುವ ಕಿವಿಮಾತು ಹೇಳಿದರು.
ಶರಣೆ ಪ್ರೇಮಕ್ಕ ಹೊರಟ್ಟಿ ಅವರ ವಚನ ಪ್ರಾರ್ಥನೆ, ಶರಣೆ ಗೌರಿ ಕುಬಸದ ಅವರ ಸ್ವಾಗತ, ಶರಣೆ ವಿಜಯಾ ಗೌಡ ಅವರ ಶರಣು ಸಮರ್ಪಣೆ, ಶರಣೆ ತ್ರಿವೇಣಿ ವಾರದ ಅವರ ವಚನ ಮಂಗಳ ಮತ್ತು ಡಾ. ಮೀನಾಕ್ಷಿ ಪಾಟೀಲ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಸಾಂಗವಾಗಿ ನಡೆಯಿತು.

ವಿಶೇಷ ದತ್ತಿ ಉಪನ್ಯಾಸ – 326
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶ್ರೀ ಬಿ.ಎಂ.ಪಾಟೀಲ ಮತ್ತು ತಾಯಿಯವರಾದ ಲಿಂ.ಶ್ರೀಮತಿ ಅಕ್ಕಮಹಾದೇವಿ ಪಾಟೀಲ – ಗದಗ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 326
