ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ಭಾರತೀಯ ಸಂಸ್ಕೃತಿಯು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ವಿಶ್ವದ ಅತ್ಯಂತ ಹಳೆಯ ನಿರಂತರ ಸಂಸ್ಕೃತಿಗಳಲ್ಲಿ ಒಂದಾಗಿದೆ. ಇದು ಸಿಂಧೂ ಕಣಿವೆ ನಾಗರೀಕತೆಯಿಂದ ಪ್ರಾರಂಭವಾಗಿ, ಹಲವಾರು ಪ್ರಭಾವಗಳು ಮತ್ತು ವಿಕಸನಗಳ ಮೂಲಕ ಹಾದುಹೋಗಿದೆ. ಭಾರತೀಯ ಸಂಸ್ಕೃತಿಯು ಭಾಷೆಗಳು, ಧರ್ಮಗಳು, ನೃತ್ಯ, ಸಂಗೀತ, ವಾಸ್ತುಶಿಲ್ಪ, ಆಹಾರ ಮತ್ತು ಆಚರಣೆಗಳಲ್ಲಿ ವೈವಿಧ್ಯತೆಯನ್ನು ಹೊಂದಿದೆ. ಭಾರತೀಯ ಸಂಸ್ಕೃತಿಯು ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿದೆ ಮತ್ತು ಪ್ರಪಂಚದಾದ್ಯಂತ ಅದರ ಪ್ರಭಾವವನ್ನು ಬೀರಿದೆ.
ಇಂತಹ ಸೂಕ್ಷ್ಮತೆಗಳನ್ನು ಅರಿತು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸ ಸಂಶೋಧನಾ ಕ್ಷೇತ್ರಕ್ಕೆ ಕಾಲಿಟ್ಟವರು ನಮ್ಮ ಡಾ. ತಾರಾ ಬಿ.ಎನ್ ಅವರು.
ಇತಿಹಾಸ,ಸಾಹಿತ್ಯ, ಸಂಸ್ಕೃತಿ, ಸೇತುವೆಯಾಗಿ ಕಾರ್ಯ ಮಾಡುತ್ತ ಬದುಕಿನ ಹೊಸ ಸವಾಲುಗಳನ್ನು ಸ್ವೀಕರಿಸಿ ನಿರಂತರ ಅಧ್ಯಯನ ಮಾಡುವ ಸಂಘರ್ಷ ಸಮರಸದ ಜ್ಯೋತಿ ಡಾ. ತಾರಾ. ಬಿ. ಎನ್ ಅವರದು ಅಪರೂಪದ ಪ್ರಬುದ್ಧ ವ್ಯಕ್ತಿತ್ವ.
ಡಾ. ತಾರಾ. ಬಿ. ಎನ್. ಅವರು ನಮ್ಮ ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು.
ಡಾ ತಾರಾ ಬಿ. ಎನ್
ಮುಖ್ಯಸ್ಥರು
ಇತಿಹಾಸ ವಿಭಾಗ
ಕೆ ಎಲ್ ಇ. ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಧಾರವಾಡ
ಎಂ. ಎ. ಪಿ ಎಚ್. ಡಿ
.ಡಿಪ್ಲೋಮ ಇನ್ ಎಪಿಗ್ರಫಿ
ಡಾ. ತಾರಾ ಬಿ. ಎನ್ ಅವರು ತಮ್ಮ ಅಧ್ಯಾಪನ ವೃತ್ತಿಯಲ್ಲಿ
34 ವರ್ಷ ಬೋಧನಾ ಅನುಭವವನ್ನು ಪಡೆದಿದ್ದಾರೆ.
ಇವರು ಒಬ್ಬ ಉತ್ತಮ ಲೇಖಕಿ ಮತ್ತು ಸಂಗೀತದಲ್ಲಿ ಆಸಕ್ತಿಯುಳ್ಳವರು ಧಾರವಾಡದ ಆಕಾಶವಾಣಿಯಲ್ಲಿ ಇವರ 135 ಚಿಂತನೆಗಳು ಪ್ರಸಾರಗೊಂಡಿವೆ. ಅಲ್ಲದೆ ಅನೇಕ ವಿಶೇಷ ಭಾಷಣಗಳು ಪ್ರಸಾರ ಗೊಂಡಿವೆ. ಈ.ಟಿವಿ ಚಂದನ ಟಿವಿ ಮುಂತಾದ ಟಿ.ವಿ ಚಾನಲ್ ಗಳಲ್ಲಿ ಅನೇಕ ಕಾರ್ಯಕ್ರಮಗಳು ಪ್ರಸಾರವಾಗಿವೆ.
ಡಾ. ತಾರಾ ಬಿ. ಎನ್ ಅವರು ಅನೇಕ ಶೈಕ್ಷಣಿಕ ಮಂಡಳಿಗಳಲ್ಲಿ ಅಜೀವ ಸದಸ್ಯತ್ವವನ್ನು ಹೊಂದಿದ್ದಾರೆ.
ಮೌನಗೀತೆ ಎಂಬ ಕವನ ಸಂಕಲನ
ವಿಚಾರ ತರಂಗ ಎಂಬ ವೈಚಾರಿಕ ಲೇಖನಗಳ ಗ್ರಂಥ ಅಲ್ಲದೆ ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಕ್ಕೆ ಅನುಗುಣವಾಗಿ
1..ಸಾಮಾಜಿಕ ಸುಧಾರಣೆಗಳು,
2..ಭಾರತೀಯ ರಾಷ್ಟ್ರೀಯ ಚಳುವಳಿಗಳು,
3.. ಆಧುನಿಕ ಭಾರತದ ಇತಿಹಾಸ,
4..ಸಮಕಾಲಿನ ಭಾರತ 5..ಸಮಕಾಲೀನ ಕರ್ನಾಟಕ 6..ಭಾರತ ಇತಿಹಾಸ ಪ್ರಾರಂಭ ಕಾಲದಿಂದ ಶಾತವಾಹನವರಗೆ ಎಂಬ ಪುಸ್ತಕಗಳನ್ನು ವಿದ್ಯಾರ್ಥಿಗಳಿಗಾಗಿ ಬರೆದಿದ್ದಾರೆ.
1..ಧಾರವಾಡ ಜಿಲ್ಲೆಗೆ ಜೈನ ಧರ್ಮದ ಕೊಡುಗೆ ಕುರಿತು ಜೈನ ಪರಂಪರೆ ಮತ್ತು
2.. ವಚನ ಚಳುವಳಿ ಐತಿಹಾಸಿಕ ಅನುಸಂಧಾನ. ಕುರಿತ ನಿಷ್ಪತ್ತಿ ಎಂಬ ಎರಡು ಗ್ರಂಥಗಳ ಸಂಪಾದನೆ ಮಾಡಲಾಗಿದೆ .
ಇದೇ ತಿಂಗಳು ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರದ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ತಮ್ಮ ಸಂಸ್ಥೆಯ ಮೂಲಕ ಡಾ. ತಾರಾ. ಬಿ. ಎನ್ ಅವರು ಬರೆದ ” ಕರ್ನಾಟಕದ ಚರಿತ್ರೆಯಲ್ಲಿ ಮಹಿಳಾ ಆಡಳಿತಗಾರರು ” ಪುಸ್ತಕವನ್ನು ಪ್ರಕಟಿಸಿದ್ದಾರೆ. ಆ ಪುಸ್ತಕದಲ್ಲಿ ಡಾ. ತಾರಾ ಬಿ. ಎನ್ ಅವರು ಸ್ತ್ರೀ ಪರ ಕಳಕಳಿ, ಕಾಳಜಿಯ ಜೊತೆಗೆ ಸ್ತ್ರೀ ಸಾಮರ್ಥ್ಯವನ್ನು ಸಾದರಪಡಿಸಿದ್ದಾರೆ.
ಡಾ. ತಾರಾ ಬಿ. ಎನ್ ಅವರು ಅಂತರಾಷ್ಟ್ರೀಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಅವರು 85 ಕ್ಕೂ ಹೆಚ್ಚು ಲೇಖನಗಳನ್ನು ಮಂಡನೆ ಮಾಡಿದ್ದಾರೆ ಮತ್ತು ಅವುಗಳೆಲ್ಲವೂ ಪ್ರಕಟವಾಗಿವೆ.
2020ರಲ್ಲಿ ಕರೋನ ತಾಂಡವಾಡುತ್ತಿರುವ ಸಂದರ್ಭದಲ್ಲಿ ಗದಗ ಸಮೀಪದ ಮಲ್ಲಸಮುದ್ರ ಗ್ರಾಮವನ್ನು ಆಯ್ಕೆ ಮಾಡಿಕೊಂಡು ರೈತಾಪಿ ಜನರಿಗೆ, ಬಡವರಿಗೆ ಕಾರ್ಮಿಕರಿಗೆ , ದಿನನಿತ್ಯ ಉಪಯೋಗಿಸುವ ದಿನಸಿ ಕಿಟ್ ಗಳನ್ನು ಹಂಚಿಕೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ಮಹಾಪ್ರಬಂಧವು ಪುಸ್ತಕದ ರೂಪದಲ್ಲಿ ಹೊರ ಬಂದಿದೆ.
ಹಂಪಿಯ ಕನ್ನಡ ವಿಶ್ವ ವಿದ್ಯಾಲಯದ ಚರಿತ್ರೆ ವಿಭಾಗದ ಸಂಶೋಧನಾ ಮಾರ್ಗದರ್ಶಕರಾಗಿ ಕಾರ್ಯ ಮಾಡುತ್ತಿದ್ದು ಒಬ್ಬ ವಿದ್ಯಾರ್ಥಿನಿಯು ಅವರ ಮಾರ್ಗದರ್ಶನದಲ್ಲಿ ಪಿ. ಎಚ್. ಡಿ ಪದವಿ ಪಡೆದಿದ್ದಾರೆ. ಇನ್ನೊಬ್ಬ ವಿದ್ಯಾರ್ಥಿನಿಯು ಸಂಶೋಧನೆ ಮಾಡುತ್ತಿದ್ದಾರೆ.
ನಮ್ಮ ವೇದಿಕೆಯ ಅತ್ಯಂತ ಸೂಕ್ಷ್ಮಮನಸ್ಸಿನ, ತಮ್ಮ ಬಗೆಗೆ ಏನೂ ಹೆಚ್ಚಿಗೆ ಹೇಳಿಕೊಳ್ಳದ, ತಮ್ಮ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಡಾ. ತಾರಾ. ಬಿ. ಎನ್ ಅವರು ಚತುರ ವಾಗ್ಮಿ, ಶ್ರೇಷ್ಠ ಗಾಯಕಿ, ಎನ್. ಎಸ್. ಎಸ್ ಅಧಿಕಾರಿಯಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿತ್ವ ಎಂದು ಹೇಳಬಹುದು.

ಡಾ.ತಾರಾ ಬಿ. ಎನ್ ಅವರಿಗೆ ಸಂದ ಪ್ರಶಸ್ತಿಗಳು
1..ಕರ್ನಾಟಕ ಸರ್ಕಾರವು 2008 ಹಾಗೂ 2023ರಲ್ಲಿ ಎನ್ಎಸ್ಎಸ್ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ರಾಜ್ಯ ಪ್ರಶಸ್ತಿಯನ್ನು ರಾಜ್ಯಪಾಲರು ನೀಡಿ ಗೌರವಿಸಿದ್ದಾರೆ.
2..ಕರ್ನಾಟಕ ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಕೋಶದಿಂದ ಡಿಸಿ ಪಾವಟೆ ಪ್ರಶಸ್ತಿ ಲಭಿಸಿದೆ.
ಡಾ. ತಾರಾ ಬಿ. ಎನ್ ಅವರ ಸಾಮಾಜಿಕ ಕಳಕಳಿಯನ್ನು, ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ..
ರಾಷ್ಟ್ರ ಪ್ರಶಸ್ತಿಗಳು
1.. ಭಾರತ ಭೂಷಣ,
ಅಂಡಮಾನದ ಫೋರ್ಟ್ ಬ್ಲೇರನಲ್ಲಿ ,ನೃಪತುಂಗ ಕಲಾನಿಕೇತನ ಬೆಂಗಳೂರು, ಕನ್ನಡ ಸಂಘ ಅಂಡಮಾನ.
2..ಬಸವ ರತ್ನ ಭಾರತೀಯ ಕಲಾ , ಸಾಂಸ್ಕೃತಿಕ ಅಕಾಡೆಮಿ ದಾವಣಗೆರೆ.
3.. ಕನಕ ಶ್ರೀ , ಕನಕ ಶ್ರೀ ,ಪ್ರಕಾಶನ ಬ್ಯಾಕೂಡ
4..ರಾಷ್ಟ್ರೀಯ ವಸುಂಧರಾ ಕರ್ನಾಟಕ ಅಸೋಸಿಯನ್ ಕ್ಲಬ್
ರಾಜ್ಯ ಪ್ರಶಸ್ತಿಗಳು
1.. ಎನ್. ಎಸ್. ಎಸ್ ಅತ್ಯುತ್ತಮ ಕಾರ್ಯಮಾಧಿಕಾರಿ ರಾಜ್ಯ ಪ್ರಶಸ್ತಿ ಕರ್ನಾಟಕ ರಾಜ್ಯ ಸರ್ಕಾರ 2008
2.. ಎನ್. ಎಸ್. ಎಸ್ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ರಾಜ್ಯ ಪ್ರಶಸ್ತಿ ಕರ್ನಾಟಕ ರಾಜ್ಯ ಸರ್ಕಾರ 2023
3..ಕರುನಾಡ ಚೇತನ, ಚೇತನ ಫೌಂಡೇಶನ್ ಹುಬ್ಬಳ್ಳಿ.
4..ಕರುನಾಡ ರಾಜ್ಯೋತ್ಸವ 2021
ಕರುನಾಡ ಸೇವಾ ಟ್ರಸ್ಟ್ (ರಿ) ಮಂಡ್ಯ
ಮುಂತಾದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
5..ಕರ್ನಾಟಕ ಇತಿಹಾಸ ಪರಿಷತ್ತು ಬೆಂಗಳೂರು ಇವರ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ಕಾಗಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದೆ,
ಬಾಕ್ಸ್
ಆಜೀವ ಸದಸ್ಯತ್ವ
1..ಇತಿಹಾಸ ಮತ್ತು ಪುರಾತತ್ವ ವಿಭಾಗ ಕ ವಿ ವಿ ಧಾರವಾಡ
2..ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗ ಕ ವಿ ವಿ ಧಾರವಾಡ
3..ಕರ್ನಾಟಕ ಇತಿಹಾಸ ಕಾಂಗ್ರೆಸ್. ಬೆಂಗಳೂರು
4..ಕರ್ನಾಟಕ ಇತಿಹಾಸ ಮಂಡಳಿ ಬೆಂಗಳೂರು
5..ಕನ್ನಡ ಸಾಹಿತ್ಯ ಪರಿಷತ್ತು ಗದಗ
6..ಲೇಖಕಿಯರ ಸಂಘ ಗದಗ
7..ಕದಳಿ ವೇದಿಕೆ ಗದಗ
8.. ಅಧ್ಯಕ್ಷರು ಇತಿಹಾಸ ಅಧ್ಯಾಪಕರ ಸಂಘ,ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ
9..ಅಕ್ಕನ ಅರಿವು
10..ಅಂತರಾಷ್ಟ್ರೀಯ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ
11..ಬಸವ ಅಧ್ಯಯನ ವೇದಿಕೆ
