ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
21 ನೆಯ ಶರಣಮಾಸದ ಅನುಭಾವ ಮಾಲಿಕೆಯಲ್ಲಿ ಇಂದು ಶರಣೆ ಗೌರಮ್ಮ ನಾಶಿ ಅವರು ಹಡಪದ ಅಪ್ಪಣ್ಣ ಅವರ ಬಗೆಗೆ ಅತ್ಯಂತ ಅರ್ಥವತ್ತಾಗಿ ಮಾತನಾಡಿದರು.
ವಂದನೆಗೆ ನಿಲ್ಲಬೇಡ
ನಿಂದೆಗಂಜಿ ಓಡಲಿಬೇಡ
ಹಿಂದು ಮುಂದು ಆಡಲಿ ಬೇಡ
ಸಂದೇಹಗೊಳಲಿ ಬೇಡ
ದ್ವಂದ್ವ ಬುದ್ಧಿಯ ಕಳೆದು
ನಿಂದಿರೆ
ಬಸವ ಪ್ರಿಯ ಕೂಡಲ ಚನ್ನಬಸವಣ್ಣ
ಎನ್ನುವ ವಚನದೊಂದಿಗೆ ತಮ್ಮಉಪನ್ಯಾಸ ಪ್ರಾರಂಭ ಮಾಡಿದ ಗೌರಮ್ಮ ಅವರು ಶರಣ ಚಳುವಳಿ ಮತ್ತು ವಚನ ಗಳ ಮಹತ್ವವನ್ನು ತಿಳಿಸುತ್ತಾ, ಹಡಪದ ಅಪ್ಪಣ್ಣನವರು ಮಹಾನುಭಾವ ಬಸವಣ್ಣನವರ ಆಪ್ತ ಕಾರ್ಯದರ್ಶಿ ಮತ್ತು ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿ, ಮಹಾಮಂತ್ರಿ ಬಸವಣ್ಣನವರನ್ನು ಎಲ್ಲ ಸಂದರ್ಭಗಳಲ್ಲಿಯೂ ಎಲ್ಲ ಸನ್ನಿವೇಶಗಳಲ್ಲಿಯೂ ನೆರಳಿನಂತೆ ಅನುಸರಿಸಿದವ ರೆoದರೆ ಹಡಪದ ಅಪ್ಪಣ್ಣ, ಬಸವಣ್ಣನವರು ಮತ್ತು ಚೆನ್ನಬಸವಣ್ಣನವರು ಇಬ್ಬರೂ ಅವರ ಆರಾಧ್ಯ ಪುರುಷರಾಗಿದ್ದರು.ಅಂತೆಯೇ ತಮ್ಮ ವಚನಾoಕಿತವನ್ನು ” “ಬಸವಪ್ರಿಯ ಕೂಡಲ ಚೆನ್ನಬಸವಣ್ಣ ” ಎಂದು ಇರಿಸಿಕೊಂಡಿದ್ದರು, ಅವರ 243 ವಚನಗಳು ಲಭಿಸಿವೆ. ಅವರ ಮಡದಿ ಲಿಂಗಮ್ಮ ನವರು 114 ವಚನಗಳನ್ನು ಬರೆದಿದ್ದಾರೆ ಎನ್ನುವುದನ್ನು ತಮ್ಮ ಮಾತಿನಲ್ಲಿ ತಿಳಿಸಿದರು.
ಆರೂ ಇಲ್ಲದ ಅರಣ್ಯದೊಳಗೆ ನಾನಡಿಯಿಟ್ಟು ನಡೆಯುತ್ತಿರೆ
ಮುಂದೆ ಮಹಾಸರೋವರವ
ಮತ್ತದರೊಳಗೆ ಮೃಗವ ಕಂಡೆ
ಆ ಮೃಗಕ್ಕೆ ಕೊಂಬುoಟು ತಲೆಯಿಲ್ಲ, ಬಾಯಿಯುoಟು
ಕಣ್ಣಿಲ್ಲ
ಕೈಯುoಟು ಬೆರಳಿಲ್ಲ, ಕಾಲುಂಟು, ಹೆಜ್ಜೆಯಿಲ್ಲ
ಅದ ಕಂಡು ನಾನು ಹವ್ವನೆ ಹಾರಿ ಹೆದರಿ ಕೆಳಗೆ ಬಿರ್ದೆ ನಯ್ಯಾ ಎನ್ನುವ ವಚನದಲ್ಲಿ
ಅಪ್ಪಣ್ಣನವರು ಮಾಯೆ ಮತ್ತು ಜ್ಞಾನ ಅಥವಾ ಅರುಹು ಮತ್ತು ಮರಹುಗಳ ವ್ಯತ್ಯಾಸ-ವೈಶಿಷ್ಟ್ಯ
ಗಳನ್ನು ಪ್ರಸ್ತುತ ವಚನದಲ್ಲಿ ಅದ್ಭುತವಾದ ಬೆಡಗಿನೊಂದಿಗೆ ನಿರೂಪಿಸುತ್ತಿರುವರು ಎನ್ನುವುದರ ಜೊತೆಗೆ ಇನ್ನೂ ಹಲವಾರು ವಚನಗಳ ವಿಶ್ಲೇಷಣೆಯನ್ನು ಅತ್ಯಂತ ಅರ್ಥವತ್ತಾಗಿ ತಿಳಿಸಿಕೊಟ್ಟರು
ಹಡಪದ ಅಪ್ಪಣ್ಣನವರು ಒಳ್ಳೆಯ ಅನುಭಾವಿಯೂ ಸಮರ್ಥ ರಾಯಭಾರಿಯೂ ಆಗಿದ್ದರೆಂಬುದು ಅಲ್ಲಮ ಪ್ರಭುಗಳು ಮೊಟ್ಟಮೊದಲನೆಯ ಬಾರಿಗೆ ಬಸವಣ್ಣನವರ ಮಹಾಮನೆಗೆ ಬಂದ ಪ್ರಸಂಗದಿಂದ ಗೊತ್ತಾಗುತ್ತದೆನ್ನುವುದು, ಮರುಳಶಂಕರದೇವರು ನಿಜ ಸುಖಿ ಅಪ್ಪಣ್ಣ ಎಂದು ಪ್ರಶoಸೆ ಮಾಡಿದ್ದು,ಹಡಪದ ಅಪ್ಪಣ್ಣ ಮತ್ತು ನೀಲಾoಬಿಕೆ ಅವರ ನಡುವೆ ನಡೆದ ಸಂವಾದ,
ನೀಲಾoಬಿಕೆಯವರು ಲಿಂಗೈಕ್ಯ ರಾಗಿದ್ದನ್ನು ಬಸವಣ್ಣನವರಿಗೆ ತಿಳಿಸಿದ ಪ್ರಸಂಗ,ನಂತರ ಹಡಪದ ಅಪ್ಪಣ್ಣನವರು ಸಹ ಇಷ್ಟಲಿಂಗದಲ್ಲಿ ಸಮರಸ ಗೊಳ್ಳುವ ರೀತಿಯನ್ನು ಹೇಳುತ್ತಾ, ತಂಗಡಗಿ ಗ್ರಾಮದಲ್ಲಿ ಕೃಷ್ಣಾ ನದಿಯ ದಂಡೆಯ ಮೇಲೆ ಹಡಪದ ಅಪ್ಪಣ್ಣ ಮತ್ತು ನೀಲಾoಬಿಕೆ ಅವರ ಸಮಾಧಿ ಇದೆ ಎಂದು ತಿಳಿಸುತ್ತಾ, ಮರಣವನ್ನೇ ಮಹಾನವಮಿಯಾಗಿಸಿ

ಕೊಂಡು ಪಾರಮಾರ್ಥಿಕ ಜೀವನ ನಡೆಸಿದ ಶರಣರನ್ನು ನೆನೆಸಿಕೊಂಡು ತಮ್ಮ ಮಾತುಗಳನ್ನು ಮುಗಿಸಿದರು.
ಎಂ. ಎಸ್. ಸುಂಕಾಪುರ ಅವರ ಮಗಳು ಶೋಭಾ ಸಂಗಣ್ಣವರ ಅವರು ಇಂದಿನ ದತ್ತಿ ದಾಸೋಹಿಗಳಾದ ಸುಧಾ ಪಾಟೀಲ ಅವರ ತಂದೆ – ತಾಯಿಯ ಬಗೆಗಿನ ತಮ್ಮ ಒಡನಾಟ, ಅವರ ತಂದೆಯ ಶಿಸ್ತುಬದ್ಧತೆ, ನೇರ ನುಡಿಯ ಕಟ್ಟುನಿಟ್ಟಿನ ಅಧಿಕಾರಿ, ಮತ್ತು ಅವರಿಬ್ಬರ ಸಾಹಿತ್ಯ ಪ್ರೇಮ, ಅತಿಥಿ ಸತ್ಕಾರದ ಬಗೆಗೆ ಆತ್ಮೀಯತೆಯಿಂದ ಹೇಳಿದರು ಗಜೇಂದ್ರಗಡದ ಅಕ್ಕನ ಬಳಗದ ಅಧ್ಯಕ್ಷರಾದ ಸಂಯುಕ್ತ ಬಂಡಿ ಅವರು ತಮ್ಮ ಅಜ್ಜ – ಅಮ್ಮನ ಹೆಸರಿನಲ್ಲಿ ನಡೆಯುತ್ತಿರುವ ದತ್ತಿ ದಾಸೋಹದಲ್ಲಿ ಮಾತನಾಡಿ ಶ್ರೀ ಬಿ. ಎಂ. ಪಾಟೀಲ ಮತ್ತು ಅಕ್ಕಮಹಾದೇವಿ ಪಾಟೀಲ ಅವರು ಎಷ್ಟು ಸರಳ -ಸಜ್ಜನಿಕೆಯ, ಪಾರದರ್ಶಕತೆಯ, ಆಧ್ಯಾತ್ಮದ ನಡೆ -ನುಡಿ, ದಾಸೋಹ ತತ್ವದ ಜೀವನ ನಡೆಸಿದ್ದರು ಎನ್ನುವುದನ್ನು ಅಭಿಮಾನದಿಂದ ಹಂಚಿಕೊಂಡರು.
ಹಡಪದ ಅಪ್ಪಣ್ಣ ಮತ್ತು ಸಂಗಮೇಶ ಅಪ್ಪಣ್ಣ ಇಬ್ಬರೂ ಒಬ್ಬರೇ.
ಅವರಿಬ್ಬರ ಅಂಕಿತವೂ ಸಹ ಒಂದೇ ಆಗಿತ್ತು.
ಹಡಪದ ಅಪ್ಪಣ್ಣ ಅವರ ಪತ್ನಿ ಲಿಂಗಮ್ಮ ಬಸವನ ಬಾಗೇವಾಡಿ ಮುಸುಬಿನಾಳ ಮತ್ತು ಲಿಂಗಮ್ಮ ದೇಗಿನಾಳದ ಹೂಗಾರ ನಾಗಪ್ಪನ ಮಗಳು.
ಹಡಪದ ಅಪ್ಪಣ್ಣ ಕ್ಷೌರಿಕ ವೃತ್ತಿಯವರಲ್ಲ ಅವರು ಬಸವಣ್ಣನವರ ಆಪ್ತ ಸಹಾಯಕರಾಗಿದ್ದರು.
ಹಡಪ ಅಂದರೆ ಕಟ್ಟಿಗೆಯ ಡಬ್ಬಿ ಅದು ಜಾತಿ ಆಗಿದ್ದು ನಮ್ಮ ದೌರ್ಭಾಗ್ಯ ಎಂದು
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಅಧ್ಯಕ್ಷ ಡಾ ಶಶಿಕಾಂತ ಪಟ್ಟಣ ಇವರು ಸಮಾರೋಪ ನುಡಿಯಲ್ಲಿ ತಮ್ಮ ಅಭಿಮತ ವ್ಯಕ್ತಪಡಿಸಿದರು.ಸಂವಾದದಲ್ಲಿ
ಹಲವಾರು ಸದಸ್ಯರು ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು
ಸೋನಾಲಿ ನೀಲಕಂಠ ಅವರ ವಚನ ಪ್ರಾರ್ಥನೆ, ಡಾ. ಕಸ್ತೂರಿ ದಳವಾಯಿ ಅವರ ಸ್ವಾಗತ, ಡಾ. ಸರಸ್ವತಿ ಪಾಟೀಲ ಅವರ ಶರಣು ಸಮರ್ಪಣೆ, ಶರಣೆ ತ್ರಿವೇಣಿ ವಾರದ ಅವರ ವಚನ ಮಂಗಳ ಮತ್ತು ಶರಣೆ ದೀಪಾ ಜಿಗಬಡ್ಡಿ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು

ವಿಶೇಷ ದತ್ತಿ ಉಪನ್ಯಾಸ – 318
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶ್ರೀ ಬಿ.ಎಂ.ಪಾಟೀಲ ಮತ್ತು ತಾಯಿಯವರಾದ ಲಿಂ.ಶ್ರೀಮತಿ ಅಕ್ಕಮಹಾದೇವಿ ಪಾಟೀಲ – ಗದಗ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 318
