Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ

ಬಾಲಕಿ ನೇಣಿಗೆ ಶರಣು

ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಮತ್ಸ್ಯ ಸಂಜೀವಿನಿ ಸಹಕಾರಿ :ವಡ್ಡರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ವಚನ ಪಿತಾಮಹ ಫ. ಗು. ಹಳಕಟ್ಟಿ
ವಿಶೇಷ ಲೇಖನ

ವಚನ ಪಿತಾಮಹ ಫ. ಗು. ಹಳಕಟ್ಟಿ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ

ಉದಯರಶ್ಮಿ ದಿನಪತ್ರಿಕೆ

19 ನೆಯ ದಿನದ ಶರಣಮಾಸದ ಮಾಲಿಕೆಯಲ್ಲಿ
ಡಾ. ಎಂ.ಎಸ್.ಮದಭಾವಿ ಅವರು ವಚನ ಪಿತಾಮಹ ಫ. ಗು. ಹಳಕಟ್ಟಿ ಅವರ ಬಗೆಗೆ ಅತ್ಯಂತ ಭಾವುಕರಾಗಿ ಅವರ ಜೀವನ ಚಿತ್ರಣವನ್ನು ಮನ ಮುಟ್ಟುವಂತೆ ಕಟ್ಟಿಕೊಟ್ಟರು.
ಫ. ಗು.ಹಳಕಟ್ಟಿ ಅವರು 60 ವರ್ಷ ಸಂಗ್ರಹಿಸಿ ಪ್ರಕಟಿಸಿದ ಶರಣ ಸಾಹಿತ್ಯವನ್ನು ಓದಲು ನಮಗೆಲ್ಲರಿಗೂ ಆರು ದಶಕಗಳು ಬೇಕು, ಅವುಗಳನ್ನು ಅರ್ಥ ಮಾಡಿಕೊಳ್ಳಲು ಆರು ನೂರು ವರ್ಷಗಳು ಬೇಕು, ದೇವರೇ ಅವರನ್ನು ಶರಣತತ್ವದ ಕಾರ್ಯದ ಸಲುವಾಗಿ ಭೂಲೋಕಕ್ಕೆ ಕಳಿಸಿರಬೇಕು, 20 ನೆಯ ಶತಮಾನದ 771 ನೆಯ ಅಮರಗಣoಗಳು, 65 ನೆಯ ಪುರಾತನರು ಎಂದು ಅತ್ಯಂತ ಮಾರ್ಮಿಕವಾಗಿ ಹಂಚಿಕೊಂಡರು.
ಅವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆ ಮತ್ತು ಅಜ್ಜಿಯ ಸಂಸ್ಕಾರದಲ್ಲಿ ಬೆಳೆದದ್ದು, ಹಾನಗಲ್ ಕುಮಾರ ಸ್ವಾಮಿಗಳ ಭಕ್ತರೆನ್ನುವುದು, ಪ್ರಾಥಮಿಕ, ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿ, ಮುಂಬೈ ನ ಸಂತ. ಝೆವಿಯರ್ ನಲ್ಲಿ ವಿಜ್ಞಾನದ ವಿಷಯದಲ್ಲಿ ಡಿಗ್ರಿ ಮುಗಿಸಿ ನಂತರ ಕನ್ನಡ ಎಂ. ಎ ಮಾಡಿ, ಆಮೇಲೆ ಎಲ್.ಎಲ್. ಬಿ ಮಾಡಿ ವಕೀಲಿ ವೃತ್ತಿ ಆರಂಭ ಮಾಡಿದ್ದು,ಅದರ ಜೊತೆಗೆ 1901 ರಿಂದ 1964 ರವರೆಗೆ ಸುಧೀರ್ಘ 60 ವರ್ಷ ಕಾಲ ಸಾoಸಾರಿಕ ಸುಖವನ್ನು ಬದಿ ಗೊತ್ತಿ, ಶರಣ ಪರಂಪರೆಯನ್ನು ಸಂಗ್ರಹಿಸಿ, ಪ್ರಕಟಣೆ ಮಾಡುವಲ್ಲಿ ತಮ್ಮ ಜೀವವನ್ನು ಸವೆಸಿದ್ದು, ಒಂದು ಸಲ ವೀರಭದ್ರಪ್ಪ ಹಾಲಭಾವಿ ಅವರ ಜೊತೆಗೆ ಒಬ್ಬರ ಮನೆಗೆ ಹೋದಾಗ ಅವರ ಜಗಲಿ ಮೇಲೆ ಕೆಂಪು ವಸ್ತ್ರದೊಳಗೆ ಕಟ್ಟಿ ಇಟ್ಟ ಪ್ರಭು ಲಿಂಗ ಲೀಲೆ ಮತ್ತು ಘನ ಭಾಷಾ ರತ್ನಮಾಲೆ ಯ ಕಟ್ಟುಗಳನ್ನು ನೋಡಿದ ಮೇಲೆ ಅವರ ಜೀವನದ ದಿಕ್ಕೇ ಬದಲಾಗಿದ್ದು, ವಚನ ಕಟ್ಟುಗಳ ಪರಿಷ್ಕರಣೆಯ ಪ್ರಕಟಣೆ ಮಾಡಲು ಯಾರೂ ಒಪ್ಪದಿದ್ದಾಗ ತಾವೇ ಸ್ವತಃ ಇದ್ದ ಒಂದು ಮನೆ ಮಾರಿ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಿದ್ದರು ಎನ್ನುವುದನ್ನು
ಅತ್ಯಂತ ಅಭಿಮಾನದಿಂದ ಹೇಳಿದರು.
1926 ರಲ್ಲಿ ಲಿಂಗಾಯತ ಧರ್ಮದ ಬಗ್ಗೆ, ನಾಡಿನ ಬಗ್ಗೆ, ತತ್ವದ ಬಗ್ಗೆ, ನ್ಯಾಯ ಒದಗಿಸಬೇಕು ಎನ್ನುವ ಹಂಬಲದಿಂದ ಪ್ರಾರಂಭ ಮಾಡಿದ ಶಿವಾನುಭವ ಪತ್ರಿಕೆ ಯಲ್ಲಿ,410 ಜನರು 1005 ಲೇಖನಗಳನ್ನು ಬರೆದದ್ದು, 20,333 ಪುಟಗಳು ಪ್ರಿಂಟ್ ಆಗಿದ್ದು,ಮೊದಲು ತ್ರೈಮಾಸಿಕ, ಮಾಸಿಕ, ದ್ವೈಮಾಸಿಕದಲ್ಲಿ ಮೂಡಿ ಬಂದು ನಂತರದಲ್ಲಿ ಮಾಸಿಕ ಪತ್ರಿಕೆಯಾಗಿ 35 ವರ್ಷ ಮುಂದುವರೆದದ್ದು, ವಚನ ಶಾಸ್ತ್ರದ ಸಂಪುಟಗಳು ಮತ್ತು ಶೂನ್ಯ ಸಂಪಾದನೆಯ ಸಂಪುಟಗಳನ್ನು ಪ್ರಕಟಣೆ ಮಾಡಿದ್ದು, 82 ವರ್ಷ ಕಡುಬಡತನದ ಜೀವನ, ಮಕ್ಕಳ ಅಗಲಿಕೆ ಜೊತೆಗೆ ಉತ್ಕೃಷ್ಟ ಕಾರ್ಯವನ್ನು ಎಡೆಬಿಡದೆ ಜೀವನದುದ್ದಕ್ಕೂ ಮಾಡಿಕೊಂಡು ಬಂದಿದ್ದು ಶ್ಲಾಘನೀಯ ಎಂದು ಹೇಳುತ್ತಾ ಅವರಿಗೆ ಮ್ಯಾಕ್ಸ್ ಮುಲ್ಲರ್,ವಚನ ಪಿತಾಮಹ, ರಾವ್ ಬಹದ್ದೂರ ಬಿರುದು ಗಳು ಬಂದದ್ದರ ಜೊತೆಗೆ ಕಡೆಯ ಕಾಲದಲ್ಲಿ ಹೊಲ ಮನೆಇಲ್ಲದೆ ಬಾಡಿಗೆ ಮನೆಯಲ್ಲಿ ಅವರ ಜೀವನ ಅಂತ್ಯವಾಗಿದ್ದು ಮತ್ತು ಅವರ ಜೀವನದ ಇನ್ನೂ ಹಲವಾರು ಪ್ರಮುಖ ವಿಷಯಗಳನ್ನು ಹೇಳಿ ಎಲ್ಲರೂ ಭಾವ ಪರವಶರಾಗುವಂತೆ ಮಾಡಿದರು
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಫ. ಗು. ಹಳಕಟ್ಟಿ ಅವರು ಬೆತ್ತಲೆ ಯಾದ ಲಿಂಗಾಯತ ಧರ್ಮಕ್ಕೆ ವಚನಗಳ ಬಟ್ಟೆಯನ್ನು ಹೊಲೆದ ಶರಣರು ಎಂದು ಹೇಳುತ್ತಾ, ವಿಜಯಪುರದಲ್ಲಿ ಕಳೆದ ತಿಂಗಳು ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರದಿಂದ ನಡೆದ ಮನವಿ ಪತ್ರ ಮತ್ತು ಪ್ರತಿಭಟನೆ ಮೂಲಕ ಧಾರವಾಡದಲ್ಲಿ ಫ. ಗು. ಹಳಕಟ್ಟಿ ಅವರ ಹೆಸರಿನಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಹಳಕಟ್ಟಿ ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡುವ ಕುರಿತು ಸರ್ಕಾರಕ್ಕೆ ಆಗ್ರಹ ಮಾಡಿದ್ದನ್ನು ನೆನಪು ಮಾಡಿಕೊಂಡರು. ಡಾ. ಮದಭಾವಿ ಅವರ ಉಪನ್ಯಾಸ ಕೇಳಿ ಎಲ್ಲರೂ ರೋಮಾಂಚನ ಗೊಂಡೆವು ಎಂದು ಹೇಳುತ್ತಾ ಭಾವುಕರಾಗಿ ಇನ್ನೂ ಬಹಳಷ್ಟು ಅರ್ಥಪೂರ್ಣವಾದ ವಿಷಯಗಳನ್ನು ಹಂಚಿಕೊಂಡರು.
ದತ್ತಿ ದಾಸೋಹಿಗಳಾದ ಶಿವಾನಂದ ಕಲಕೇರಿ ಅವರು ಪ್ರತಿ ದಿನ ತಪ್ಪದೇ ಗೂಗಲ್ ಮೀಟ್ ನಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಅಭಿಪ್ರಾಯ ಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ.
ಹಲವಾರು ಗಣ್ಯರು ಸಹ ಸಂವಾದ ದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು
ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಪ್ರಾರ್ಥನೆ, ಡಾ. ನಿರ್ಮಲಾ ಬಟ್ಟಲ ಅವರ ಸ್ವಾಗತ, ಶರಣೆ ಬಸಮ್ಮ ಭರಮಶೆಟ್ಟಿ ಅವರ ಶರಣು ಸಮರ್ಪಣೆ, ಶರಣೆ ಮಂಗಲಾ ಪಾಟೀಲ ಅವರ ವಚನ ಮಂಗಳ ಮತ್ತು ಡಾ. ಪ್ರಿಯoವದಾ ಹುಲಗಬಾಳಿ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ವಿಶೇಷ ಉಪನ್ಯಾಸ – 316

ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶ್ರೀ ಶಿವಾನಂದ ಕಲಕೇರಿ ಆಯುಕ್ತರು, ಆದಾಯ ತೆರಿಗೆ ಇಲಾಖೆ ಬೆಂಗಳೂರು ಇವರ ತಂದೆ ಲಿಂ. ಹಣಮಂತರಾಯ ಕಲಕೇರಿ ಮತ್ತು ಲಿಂ.ಗಿರಿಜಾದೇವಿ ಕಲಕೇರಿ ಅವರ ಸ್ಮರಣಾರ್ಥ ವಿಶೇಷ ಉಪನ್ಯಾಸ – 316

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ

ಬಾಲಕಿ ನೇಣಿಗೆ ಶರಣು

ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಮತ್ಸ್ಯ ಸಂಜೀವಿನಿ ಸಹಕಾರಿ :ವಡ್ಡರ

ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ
    In (ರಾಜ್ಯ ) ಜಿಲ್ಲೆ
  • ಬಾಲಕಿ ನೇಣಿಗೆ ಶರಣು
    In (ರಾಜ್ಯ ) ಜಿಲ್ಲೆ
  • ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಮತ್ಸ್ಯ ಸಂಜೀವಿನಿ ಸಹಕಾರಿ :ವಡ್ಡರ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳ ಅಂತಿಮ ಪಟ್ಟಿ ಪ್ರಕಟ
    In (ರಾಜ್ಯ ) ಜಿಲ್ಲೆ
  • ಜಂಟಿ ಕೃಷಿ ನಿರ್ದೇಶಕರ ಕಚೇರಿ ಸ್ಥಳಾಂತರ
    In (ರಾಜ್ಯ ) ಜಿಲ್ಲೆ
  • ಟಿಲಿಸ್ಕೋಪ‌ ತಯಾರಿಕೆ: ಹೊನವಾಡ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಲಾಂಛನಗಳ ಪಾರುಪತ್ಯದಲ್ಲಿ ಬಳಲುವುದು ಬೇಡ
    In ಚಿಂತನ
  • ಈ ಚೆಂದದ ಹೃದಯದಲಿ ನಿನ್ನದೇನೆ ಚಟುವಟಿಕೆ
    In ವಿಶೇಷ ಲೇಖನ
  • ಎಡಿಸಿ ಭರವಸೆ: ಆಹೋರಾತ್ರಿ ಧರಣಿ ಸತ್ಯಾಗ್ರಹ ಹಿಂಪಡೆದ ಬಿಜೆಪಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.