ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ಶರಣಮಾಸದ 15 ನೆಯ ದಿವಸದ ಉಪನ್ಯಾಸ ಮಾಲಿಕೆಯಲ್ಲಿ ಶರಣ ಕೆ. ಬಿ. ಮಹದೇವಪ್ಪ ಅವರು ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಎನ್ನುವ ವಿಷಯದ ಬಗೆಗೆ ಅತ್ಯಂತ ಪ್ರಬುದ್ಧವಾಗಿ ನಮ್ಮೊಡನೆ ಹಂಚಿಕೊಂಡರು.
ಕನ್ನಡ ಸಾಹಿತ್ಯ ಪ್ರಕಾರಗಳಾದ ಚಂಪೂ ಕಾವ್ಯ, ವಚನ ಸಾಹಿತ್ಯ, ಷಟ್ಪದಿಗಳ ಜೊತೆಗೆ ಜೈನ ಯುಗ, ಲಿಂಗಾಯತ ಯುಗ,ಶೈವ ಯುಗ,ಆಧುನಿಕ ಯುಗದಲ್ಲಿ ಕನ್ನಡದಲ್ಲಿ ಆಗಿ ಹೋದ ವಿಶಿಷ್ಟ ಬದಲಾವಣೆ ಗಳ ಬಗೆಗೆ ಬೆಳಕು ಚೆಲ್ಲಿದರು.
ಇದರಲ್ಲಿ ವಚನ ಯುಗ ಮಹತ್ವವಾದದ್ದು, ವಚನ ಸಾಹಿತ್ಯದಲ್ಲಿ ವಚನಕಾರರು ಹೇಗೆ ವಸ್ತು ರಚನೆ ಆಯ್ಕೆ, ಬರವಣಿಗೆಯ ವಿಧಾನ,
ಆಲೋಚನೆ, ಭಾವನೆ, ಚಿಂತನೆಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸಿದರು. ಕನ್ನಡ ಭಾಷೆ ದುಡಿಸಿಕೊಂಡರು, ಅದರ ಔನ್ನತ್ಯ, ತೀವ್ರತೆ, ಭಾಷಾ ಜ್ಞಾನ ವನ್ನು ಹೇಳುತ್ತಾ, ವಚನ ಪರಂಪರೆಯ ಧೋರಣೆಯ ಮಹತ್ವವನ್ನು ಹಂಚಿಕೊಂಡರು.
ಆಗಿನ 346 ವಚನಕಾರರು ಮತ್ತು 42 ವಚನಕಾರ್ತಿಯರು ತಮ್ಮವಚನಗಳ ಮೂಲಕ ಜನರನ್ನು ತಲುಪಿದ್ದು, ಇದು ಜನಸಾಮಾನ್ಯರ ಭಾಷೆ ಕಾಯಕಯೋಗಿಗಳ ಭಾಷೆ,ಎಲ್ಲ ಅಪ ನಂಬಿಕೆಗಳನ್ನು ಹೋಗಲಾಡಿಸಿದ ಭಾಷೆ, ಜನವಾಣಿಯನ್ನೇ ದೇವವಾಣಿ ಯನ್ನಾಗಿ ಪರಿವರ್ತನೆ ಮಾಡಿದ ಭಾಷೆ, ಹೊಸ ಧಾರ್ಮಿಕ ಪಾಲನೆಗೆ ಸಾಮಾಜಿಕ ಕ್ರಾಂತಿಯ ಪ್ರಾರಂಭ, ದೇವರನ್ನು ವೈಯಕ್ತೀಕರಣ ಗೊಳಿಸಿದ್ದು, ದುಡಿಮೆಯನ್ನು ದಾಸೋಹದ ಮೂಲಕ ಸಾರ್ವತ್ರಿಕರಣಗೊಳಿಸಿದ್ದು,ವಚನಗಳ ಆಧ್ಯಾತ್ಮಿಕ ಮತ್ತು ತಾತ್ವಿಕ ವಿಚಾರಗಳು, ಮಹಿಳಾ ಸಮಾನತೆ, ಅರಿವೇ ಗುರು, ದೇಹವೇ ದೇವಾಲಯ, ಸ್ಥಾವ ರಕ್ಕಳಿವುಂಟು, ಜಂಗಮಕ್ಕಳಿ ವಿಲ್ಲ, ಬಯಲು ಬಯಲನೇ ಬಿತ್ತಿ, ಎನ್ನುವ ಹಲವಾರು ಅರ್ಥವತ್ತಾದ ವಚನಗಳ ಸಾಲುಗಳ ಜೊತೆಗೆ ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಹೇಗೆ
ಶರಣರ ಚಿಂತನೆ ಒಡಮೂಡಿದೆ ಎನ್ನುವುದನ್ನು ವಿವರಿಸಿದರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು, ಶರಣರು ವಚನಗಳ ಮೂಲಕ ಜಾಗತಿಕ ದಾಖಲೆಯನ್ನು ಮಾಡಿದ್ದಾರೆ. ಅವರು ದೇವರಿಗೆ ಕನ್ನಡ ಕಲಿಸಿದವರು, ಅಚ್ಚ ಬೇಸಾಯಗಾರರು, ಶರಣರು ವಚನಗಳ ಮೂಲಕ ಸಾರ್ವತ್ರಿಕವಾದ ಮತ್ತು ಸಾರ್ವಕಾಲಿಕವಾದ ಕುರುಹುಗಳನ್ನು 900 ವರ್ಷಗಳ ನಂತರವೂ ಎಂದಿಗೂ ಅಳಿಯದ ರೀತಿಯಲ್ಲಿ ನಮಗೆಲ್ಲರಿಗೂ ಬಿಟ್ಟು ಹೋಗಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದರು.
ದತ್ತಿ ದಾಸೋಹಿ ಗಳಾದ ಶರಣ ಶಿವಾನಂದ ಕಲಕೇರಿ ಅವರು ಉಪನ್ಯಾಸಕರು ಮಾತನಾಡಿದ ಎಲ್ಲ ಸಾರಾಂಶಗಳನ್ನು ಒಟ್ಟುಗೂಡಿಸಿ ಪ್ರಶಂಸೆ ಮಾಡಿದರು.
ಸೋನಾಲಿ ನೀಲಕಂಠ ಅವರ ವಚನ ಪ್ರಾರ್ಥನೆ, ಶಾಂತಾ ಧುಲಂಗೆ ಅವರ ಸ್ವಾಗತ, ಅಕ್ಕಮಹಾದೇವಿ ತೆಗ್ಗಿ ಅವರ ಶರಣು ಸಮರ್ಪಣೆ, ಸರಸ್ವತಿ ಬಿರಾದಾರ ಅವರ ವಚನ ಮಂಗಳ ಮತ್ತು ಬಸಮ್ಮ ಗಂಗನಳ್ಳಿ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಸಾಂಗವಾಗಿ ನಡೆಯಿತು.

ವಿಶೇಷ ಉಪನ್ಯಾಸ – 313
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶ್ರೀ ಶಿವಾನಂದ ಕಲಕೇರಿ ಆಯುಕ್ತರು, ಆದಾಯ ತೆರಿಗೆ ಇಲಾಖೆ ಬೆಂಗಳೂರು ಇವರ ತಂದೆ ಲಿಂ. ಹಣಮಂತರಾಯ ಕಲಕೇರಿ ಮತ್ತು ಲಿಂ.ಗಿರಿಜಾದೇವಿ ಕಲಕೇರಿ ಅವರ ಸ್ಮರಣಾರ್ಥ ವಿಶೇಷ ಉಪನ್ಯಾಸ – 313
