ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
14 ನೆಯ ದಿವಸದ ಶರಣ ಮಾಸದ ಅನುಭಾವ ಮಾಲಿಕೆಯಲ್ಲಿ ಅನಿತಾ ಕಾರಾಜನಗಿ ಅವರು ಸದ್ಗುರು ಸಮರ್ಥ ಭಾವೂ ಸಾಹೇಬರ ಬಾಲ್ಯದಿಂದ ಅವರ ಸಾಧನೆಯ ಶಿಖರವನ್ನು ತಿಳಿಸುತ್ತಾ ಹೋದರು. ಭಾವೂ ಮಹಾರಾಜರು ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿ ಗ್ರಾಮದವರು. ತಂದೆ ಖಂಡೆ ರಾಯ ಮತ್ತು ತಾಯಿ ಭಾಗೀರಥಿಯ ಉದರದಲ್ಲಿ 1843 ರಲ್ಲಿ ಜನಿಸಿದರು. ನಿವರ್ಗಿ ಗ್ರಾಮದ ಕಾಶಿಬಾಯಿ ಅವರೊಂದಿಗೆ ಬಾಲ್ಯ ವಿವಾಹವಾಯಿತು. ಕೃಷ್ಣ ರಾಯ ಭೀಮರಾಯ, ರಾಮರಾಯ ಎಂಬ ಮೂವರು ಮಕ್ಕಳು ಇವರಿಗಿದ್ದರು. ರಘುನಾಥರಾಯ ಮಹಾರಾಜರಿಂದ ಗುರು ಲಿಂಗ ಜಂಗಮ ಮಹಾರಾಜರ ಸಮ್ಮುಖದಲ್ಲಿ ನಾಮೋಪದೇಶವಾಯಿತು. ಆರಂಭದಲ್ಲಿ ಬೇರೆ ಜಾತಿಯವರಿಂದ ನಾಮ ಹೇಗೆ ಪಡೆಯುವುದೆಂಬ ಸಂಶಯ ಉಂಟಾದರೂ ಅವುಗಳನ್ನೆಲ್ಲ ತೊಡೆದುಹಾಕಿ, ನೀಲಗಾರರಾಗಿದ್ದ ಗುರುಲಿಂಗ ಜಂಗಮ ಮಹಾರಾಜರನ್ನು ಬ್ರಾಹ್ಮಣರಾದ ಭಾವೂ ಅವರು ತಮ್ಮ ಗುರುಗಳೆಂದು ಸ್ವೀಕರಿಸುತ್ತಾರೆ.
ಭಾವೂ ಸಾಹೇಬರು 18 ವರ್ಷ ಕಟ್ಟುನಿಟ್ಟಾಗಿ ಧ್ಯಾನ, ಸಾಧನೆ ಮಾಡಿ ಸದ್ಗುರು ಸಮರ್ಥ ಭಾವೂ ಸಾಹೇಬ ಮಹಾರಾಜರಾಗಿ ಪರಿವರ್ತನೆ ಹೊಂದಿದರು. ಆತ್ಮ ಪರೀಕ್ಷಣೆ ಅವರಲ್ಲಿ ಎದ್ದು ಕಾಣುತ್ತಿತ್ತು. ಸಾಧಕರಿಗಾಗಿ ಉಮದಿಯಲ್ಲಿ ಬ್ರಹ್ಮ ಶಾಲೆಯನ್ನು ಸ್ಥಾಪಿಸಿದರು. ಗುರು ಜಂಗಮರಿಂದ ಆಶೀರ್ವಾದ ಪಡೆದು ಭವ್ಯವಾದ ಸಂಪ್ರದಾಯ ಕಟ್ಟಲು ಸಿದ್ದರಾದರು. ಗುರು ಲಿಂಗ ಜಂಗಮ ಮಹಾರಾಜರ ಅಸ್ಥಿಯೊಂದಿಗೆ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ 1903 ರಲ್ಲಿ ಗದ್ದುಗೆ ಸ್ಥಾಪಿಸಿದರು. ಈ ಮೂಲಕ ಇಂಚಗೇರಿ ಸಂಪ್ರದಾಯದ ಸಂಸ್ಥಾಪಕರಾದರು ಮತ್ತು ಮೊದಲ ಗುರುವಾದರು.
ಭಾವೂ ಅವರು ಗುರುದೇವ ರಾನಡೆ ಅವರ ಸಹಕಾರದಿಂದ ನಿತ್ಯ ನೇಮ ಭಜನೆಯನ್ನು ಪ್ರಾರಂಭಿಸಿದರು. ಗುರು ಗಿರಿ ಮಲ್ಲೇಶ್ವರರ ಮಂದಿರವನ್ನು ನಿರ್ಮಿಸಿದರು. ಹೀಗೆ ಉತ್ತರೋತ್ತರವಾಗಿ ಗುರು ಪರಂಪರೆ ಬೆಳೆದು ಬಂದಿತು. ಕೋಟ್ಯಾoತರ ಭಕ್ತರು, ಸಾವಿರಾರು ಮಠಗಳ ಜೊತೆಗೆ ಇಂಚಗೇರಿ ಸಂಪ್ರದಾಯದ ಶಾಖೆಗಳಾದವು. ಭಾವೂ ಸಾಹೇಬರು ತಮ್ಮಂತಹ ಅನೇಕ ಆತ್ಮಜ್ಞಾನಿ ಶಿಷ್ಯರನ್ನು ತಯಾರಿಸಿದರು. ಇಂಚಗೇರಿ ಸಂಪ್ರದಾಯವೆಂಬ ಹೊಸ ಸಂಪ್ರದಾಯವನ್ನು ಕೊಡುಗೆಯಾಗಿ ನೀಡಿ 1914ರಲ್ಲಿ ದೇಹವನ್ನು ತೊರೆದರು. ಪ್ರಖರವಾದ ವಾಣಿಯಿಂದ ಶಿಷ್ಯರ ಮನಸ್ಸನ್ನು ಪರಿವರ್ತಿಸಿದರು.ತಮ್ಮ ಶಿಷ್ಯರನ್ನು ಅಪಾರ ಪ್ರೀತಿಯಿಂದ ಕಂಡರು.ಪ್ರಸಿದ್ದ ಆತ್ಮಜ್ಞಾನಿ ಗುರುಗಳಾಗಿ ತಮ್ಮ ಕಾಯವಳಿದ ಮಹಾನ್ ಸಂತರು ಎಂಬ ಕೀರ್ತಿ ಪಡೆದು ಅಜರಾಮರರಾಗಿದ್ದಾರೆ ಎನ್ನುವುದನ್ನು ಅಭಿಮಾನದಿಂದ ಹಂಚಿಕೊಂಡರು.
ಅಧ್ಯಕ್ಷರಾದ ಡಾ.ಶಶಿಕಾಂತ ಪಟ್ಟಣ ಅವರು ತಾವು ಚಿಕ್ಕವರಿದ್ದಾಗ 50 ವರ್ಷದ ಹಿಂದೆ ಮಠಕ್ಕೆ ಭೇಟಿ ನೀಡಿದ ಪ್ರಸಂಗವನ್ನು ನೆನಪು ಮಾಡಿಕೊಂಡರು. ಇಂಚಗೇರಿ ಮಠದಿಂದ ನಡೆಯುವ ಜನತಾ ಅದಾಲತ್, ಅಸಂಖ್ಯಾತ ಅಂತರ್ಜಾತಿಯ ವಿವಾಹ ನೆರವೇರುವುದು, ಮುರುಗೋಡ ಮಹಾದೇವಪ್ಪನವರು ಗುರುದೇವರ ರಾನಡೆ ಅವರ ಜೊತೆಗೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ಮಠದ ಶಿಷ್ಯರಾಗಿದ್ದರೆನ್ನುವುದು, ವಿನೋಭಾ ಬಾವೆ, ಜಯಪ್ರಕಾಶ್ ನಾರಾಯಣ ಅವರೂ ಸಹ ಮಠದಿಂದ ಹೇಗೆ ಪ್ರಭಾವಿತರಾಗಿದ್ದರೆನ್ನುವುದುಮತ್ತು ಬಸವಣ್ಣನವರ ಆಶಯದಂತೆ ಗುರುಲಿಂಗ ಜಂಗಮದ ತತ್ವದಡಿಯಲ್ಲಿ ಭಕ್ತಿಭಾವ ಅನುಸಂಧಾನದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಮಠ ಎಂದು ಬಣ್ಣಿಸಿದರು.
ದತ್ತಿ ದಾಸೋಹಿಗಳಾದ ಶ್ರೀ ಶಿವಾನಂದ ಕಲಕೇರಿ ಅವರು ಇಂದಿನ ಉಪನ್ಯಾಸಕರನ್ನು ಶ್ಲಾಘಿಸುತ್ತಾ, ಅಕ್ಕನ ಅರಿವು ವೇದಿಕೆಯ ಕಾರ್ಯವನ್ನು ಮೆಚ್ಚಿದರು.
ಶರಣೆ ಪೂಜಾ ಹಿರೇಮಠ ಅವರ ಪ್ರಾರ್ಥನೆ, ಡಾ. ಶೈಲಜಾ ಪವಾಡಶೆಟ್ಟರ ಅವರ ಸ್ವಾಗತ, ಶರಣೆ ಅನ್ನಪೂರ್ಣ ಅಗಡಿಯವರ ಶರಣು ಸಮರ್ಪಣೆ, ಡಾ. ಕಸ್ತೂರಿ ತಳವಾಯಿ ಅವರ ವಚನ ಮಂಗಳ ಮತ್ತು ಶರಣೆ ಲಲಿತಾ ಅಂಗಡಿ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತ

ವಿಶೇಷ ದತ್ತಿ ಉಪನ್ಯಾಸ -312
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶ್ರೀ ಶಿವಾನಂದ ಕಲಕೇರಿ ಆಯುಕ್ತರು ಆದಾಯ ತೆರಿಗೆ ಇಲಾಖೆ ಬೆಂಗಳೂರು ಇವರ ತಂದೆ ಹಣಮಂತರಾಯ ರಾಮಪ್ಪ ಕಲಕೇರಿ ಮತ್ತು ಲಿಂ. ಗಿರಿಜಾದೇವಿ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ -312
