ಸ್ವಚ್ಛತೆಯೇ ಸೇವೆ-ತ್ಯಾಜ್ಯ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ
ಇಂಡಿ: ಪರಿಶುದ್ಧ ಬೆಳಕು, ಗಾಳಿ, ನೀರು ಮತ್ತು ಆಹಾರದಿಂದ ಮಾತ್ರ ಗುಣಮಟ್ಟದ ಆರೋಗ್ಯ ಕಾಪಾಡಲು ಸಾಧ್ಯ. ಹೀಗಾಗಿ ಪರಿಸರವನ್ನು ಮಾಲಿನ್ಯ ಮುಕ್ತವಾಗುವಂತೆ ಜಾಗೃತಿ ವಹಿಸಬೇಕು ಎಂದು ಹಿರೇರೂಗಿ ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜ ಬಬಲಾದ ಹೇಳಿದರು.
ಅವರು ಶನಿವಾರ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ, ತಾಲೂಕ ಪಂಚಾಯತ್ ಇಂಡಿ, ಗ್ರಾಮ ಪಂಚಾಯಿತಿ ವತಿಯಿಂದ ಜರುಗಿದ ಸ್ವಚ್ಛತೆಯೇ ಸೇವೆ-ತ್ಯಾಜ್ಯ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ಲಾಸ್ಟಿಕ್ ಮುಕ್ತ ಭಾರತದ ನಿರ್ಮಾಣ ಹಾಗೂ ಗ್ರಾಮದ ಸ್ವಚ್ಚತೆಗೆ ಎಲ್ಲರೂ ಒಟ್ಟಾಗಿ ಕೈಜೋಡಿಸೋಣ. ಮನೆಯಿಂದಲೇ ಸ್ವಚ್ಚತಾ ಕಾರ್ಯ ಆರಂಭಿಸಬೇಕು ಎಂದು ಕರೆ ನೀಡಿದರು.
ಶಿಕ್ಷಕ ಸಂತೋಷ ಬಂಡೆ ಮತ್ತು ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಶುರಾಮ ಹೊಸಮನಿ, ಉಪಾಧ್ಯಕ್ಷ ಸಂತೋಷ ಕೋಟಗೊಂಡ, ಸದಸ್ಯ ಗಡ್ಡೆಪ್ಪ ಗಿಣ್ಣಿ,ಚಂದ್ರಯ್ಯ ಹಿರೇಮಠ, ಶಿಕ್ಷಕ ಎಸ್ ಆರ್ ಚಾಳೆಕಾರ, ಸಿಬ್ಬಂದಿ ಅಕ್ಬರ ಕೋರಬು, ಶ್ರೀಧರ ಬಾಳಿ, ಶರಣು ನಾಟೀಕಾರ, ಬಸವರಾಜ ತಳಕೇರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.