ಚಡಚಣ: ಪಟ್ಟಣದಲ್ಲಿ ತಮಿಳುನಾಡಿಗೆ ಕಾವೇರಿ ನೀರು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳಿಂದ ತಹಶೀಲ್ದಾರ್ ಸಂಜಯ ಇಂಗಳೆ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ, ಕರವೇ ಅಧ್ಯಕ್ಷ ಸೋಮಶೇಖರ ಬಡಿಗೇರ, ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್ ಪಿ ಬಗಲಿ ಹಾಗೂ ಮುಖಂಡ ಈರಣ್ಣ ಪಾಟೀಲ,
ನೀರು ಜೀವನಾವಶ್ಯಕ ವಸ್ತು. ಇತ್ತೀಚಿನ ವರ್ಷಗಳಲ್ಲಿ, ವರ್ಷದಿಂದ ವರ್ಷಕ್ಕೆ ಹವಮಾನ ವೈಪರೀತ್ಯದಿಂದಾಗಿ ಸಕಾಲಕ್ಕೆ ಸಾಕಷ್ಟು ಮಳೆ ಪ್ರಮಾಣವೂ ಕಡಿಮೆಯಾಗಿದೆ. ಸರಕಾರವೇ ಎಲ್ಲ ತಾಲೂಕುಗಳಲ್ಲಿ ಬರಗಾಲವೆಂದು ಸಾರಿದೆ. ಜನರು ಜನ ಜನ ಜಾನುವಾರಗಳೊಂದಿಗೆ ಗುಳ ಹೋಗುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿಯಲ್ಲಿ ಎಷ್ಟೋ ವರ್ಷಗಳ ಹಿಂದೆ ಮಾಡಿಕೊಂಡ ಒಡಂಬಡಿಕಗೆ ಬದ್ದರಾಗಿ ಅದೇ ಪ್ರಮಾಣದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದು ತೀರಾ ಅನ್ಯಾಯ. ಹೀಗೆ ಮುಂದುವರೆದರೆ ಬೆಂಗಳೂರು ಮಹಾನಗರಕ್ಕೆ ಕಾವೇರಿ ನೀರು ಪೂರೈಕೆ ಆಗದೇ ಮಹಾನಗರವೇ ಖಾಲಿಯಾಗಬೇಕಾದ ಪ್ರಸಂಗ ಬರಬಹುದು. ತಮಿಳರ ಪ್ರಭಾವಕ್ಕೆ ಒಳಗಾಗಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗದ ಹಾಗೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಶಾಖಿಲ ಖಾಟಿಕ, ಸಂಗಪ್ಪ ಇಂಡಿ, ಶರಣಪ್ಪ ಅಲಕುಂಟೆ, ವಿಜಯಕುಮಾರ ಪಾಟೀಲ, ಶಿವಪ್ಪ ಸ್ವಾಮಿ, ಮಹೇಬೂಬ ವಾಲಿಕಾರ, ಬಾಗೇಶ ಗೊಟ್ಯಾಳ, ಸೋಮಶೇಖರ ಹೊರೇಮಠ, ದುಂಡು ಗೋಳಗಿ ಹಾಗೂ ಕಾರ್ಯಕರ್ತರು ಇದ್ದರು.
Related Posts
Add A Comment