ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದಿಂದ ಮುಖ್ಯ ರಸ್ತೆಯಲ್ಲಿರುವ ಹಳ್ಳದ ಸೇತುವೆಯಲ್ಲಿ ಅಪಾಯಕರ ಪ್ರಮಾಣದಲ್ಲಿರುವ ಬ್ರಹತ್ ಗುಂಡಿಗಳು ಬಾಯ್ತೆರೆದು ಬಲಿಗಾಗಿ ಕಾಯುತಿದ್ದು ಈ ಭಾಗದ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ಗ್ರಾಮದಿಂದ ಜಗದಾಳ ಮಾರ್ಗವಾಗಿ ಜಮಖಂಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು ಗ್ರಾಮದ ಸಮೀಪದಲ್ಲಿಯೇ ಹಳ್ಳಕ್ಕೆ ನಿರ್ಮಿಸಲಾಗಿರುವ ಬ್ರಹತ್ ಸೇತುವೆಯ ಎರಡೂ ಬದಿಗಳಲ್ಲಿ ಒಡೆದು ದೊಡ್ಡ ಗುಂಡಿ ನಿರ್ಮಾಣವಾಗಿರುವುದರಿಂದ ಈ ಮಾರ್ಗದ ಸಂಚಾರಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಟ್ರ್ಯಾಕ್ಟರ್, ಟಿಪ್ಪರ್, ಶಾಲಾ ವಾಹನಗಳು ಸೇರಿದಂತೆ ನೂರಾರು ಸರಕಾರಿ ಖಾಸಗಿ ವಾಹನಗಳು ಈ ಮಾರ್ಗವಾಗಿಯೇ ಸಂಚರಿಸುತ್ತಿರುವುದರಿಂದ ಚಾಲಕರು ಆತಂಕದಿಂದಲೇ ಈ ಸೇತುವೆ ದಾಟಬೇಕಾಗಿದೆ. ಸೇತುವೆಯ ತಳಭಾಗ ದಿನದಿನಕ್ಕೂ ಕುಸಿಯುತ್ತಿರುವುದರಿಂದ ಯಾವುದೇ ಸಂಧರ್ಬದಲ್ಲಿ ಅನಾಹುತ ಸಂಭವಿಸುವ ಆತಂಕವಿದೆ, ಸಂಬಂದಿಸಿದ ಇಲಾಖೆಯ ಅಧಿಕಾರಿಗಳಿಗೆ ಈಕುರಿತು ಹಲವಾರು ಬಾರಿ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಸೇತುವೆ ಇಷ್ಟು ಅಪಾಯಕಾರಿ ಸ್ಥಿತಿಯಲ್ಲಿದ್ದರೂ ದುರಸ್ತಿಗೆ ಸ್ಪಂದಿಸದ ಅಧಿಕಾರಿಗಳು ಅನಾಹುತ ಸಂಭವಿಸುವುದಕ್ಕಾಗಿ ಕಾಯುತಿದ್ದಾರೆಯೇ ಎಂದು ಈ ಭಾಗದ ರೈತರು ಗ್ರಾ.ಪಂ. ಸದಸ್ಯರು ಆಕ್ರೋಶ ಮೂಡಿಸಿದ್ದಾರೆ. ಕೂಡಲೆ ಈ ಸೇತುವೆಯನ್ನು ತೆರವುಗೊಳಿಸಿ ಮರು ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಸಂಬಂದಿಸಿದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

