ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಜೋರಾಪುರ
ಪೇಠದಲ್ಲಿರುವ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025 26ನೇ ಸಾಲಿನ ಶಾಲಾ ಸಂಸತ್ತು ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಚುನಾವಣೆ ಮಹತ್ವ ಮತ್ತು ಮತದಾನದ ಹಕ್ಕು ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು.
ಶಾಲಾ ವಿದ್ಯಾರ್ಥಿ ಸಂಘದ 9 ಸ್ಥಾನಗಳಿಗೆ ನಡೆದ ಶಾಲಾ ಸಂಸತ ಚುನಾವನಾ ಪ್ರಕ್ರಿಯೆಯನ್ನು ಚುನಾವಣಾ ಆಯೋಗದ ನೀತಿ ಸಂಹಿತೆಯ ಪ್ರಕಾರ ನಡೆಸಲಾಯಿತು. ಶಿಸ್ತು ಹಾಗೂ ಶಾಂತಿಯುತ ಮತದಾನಕ್ಕಾಗಿ ಅರೆ ಪಡೆಯ ಪಾತ್ರವನ್ನು ವಿದ್ಯಾರ್ಥಿನಿಯರು ಅಚ್ಚುಕಟ್ಟಾಗಿ ನೆರವೇರಿಸಿದರು ವಿದ್ಯಾರ್ಥಿನಿಯರು ಗೌಪ್ಯವಾಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮತದಾನ ಮಾಡಿದರು. ಮತದಾನಕ್ಕಿಂತ ಪೂರ್ವದಲ್ಲಿ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಶಾಲೆಗಾಗಿ ತಾವು ಕೈಕೊಳ್ಳುವ ಕಾರ್ಯಗಳನ್ನು ವಿವರಿಸಿ ಮತಯಾಚಿಸಿದರು. ಶಾಲೆಯ ಗೇಟಿನಲ್ಲಿ ನಿಂತು ಅಭ್ಯರ್ಥಿಗಳು ಮತಯಾಚಿಸುವ ದೃಶ್ಯ ನೈಜ ಚುನಾವಣೆಯನ್ನು ನೆನಪಿಸುವಂತಿತ್ತು.
ಶಿಕ್ಷಕರಾದ ಸಂತೋಷ್ ಬಾಗ್ಯವಾಡಿ ಪ್ರಿಸೈಡಿಂಗ್ ಅಧಿಕಾರಿಗಳಾಗಿ ಶ್ರೀಮತಿ ಶೀತಲ್ ಪೂಜಾರಿ, ಶ್ರೀ ಕೆ.ಎನ್. ಖಂಡೇಕರ್ ಸಿ ಎಸ್ ಗಜಕೋಶ.ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.
ಬಾಲಪ್ಪನವರ ವಿಜಯಕುಮಾರ ಕಾಂತಾಬಾಯಿ ತಳೇವಾಡ ಚುನಾವಣೆಯ ನಂತರ ಫಲಿತಾಂಶ ಘೋಷಿಸಿದರು. ಮುಖ್ಯ ಶಿಕ್ಷಕರು ಅಜೀಜ ಅರಳಿಮಟ್ಟಿ ಮಾರ್ಗದರ್ಶನ ಮಾಡಿದರು.
ನಂತರ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣ ವಚನ ಬೋಧನೆ ಮಾಡಲಾಯಿತು.

