ಆಲಮೇಲ: ಕಡಣಿ ಬೆರಗು ಪ್ರಕಾಶನವು ದಿ. ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ಅವರ ಹೆಸರಿನಲ್ಲಿ ಪ್ರತಿವರ್ಷ ನೀಡುವ ಬೆರಗು ಪ್ರಶಸ್ತಿ-೨೦೨೩ ನೀಡಲು ೨೦೨೨ನೇ ಸಾಲಿನಲ್ಲಿ ಪ್ರಕಟವಾದ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ಆವ್ಹಾನಿಸಿದೆ. ಪ್ರಶಸ್ತಿಯು ೫ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಆಸಕ್ತ ಲೇಖಕರು ತಮ್ಮ ಕೃತಿಯ ಎರಡು ಪ್ರತಿಗಳನ್ನು ಅಕ್ಟೋಬರ್ ೧೫ ರೊಳಗೆ ಸಲ್ಲಿಸಬೇಕು. ಪಿಎಚ್.ಡಿ ಪ್ರಬಂಧ ಹೊರತುಪಡಿಸಿ ಕನ್ನಡದ ಎಲ್ಲಾ ಪ್ರಕಾರದ ಪುಸ್ತಕಗಳನ್ನು ಪ್ರಶಸ್ತಿಗೆ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹಸ್ತಪ್ರತಿ ಮತ್ತು ಪುಸ್ತಕ ಕಳಿಸುವ ವಿಳಾಸ: ವಿಜಯಲಕ್ಷ್ಮಿ ರಮೇಶ ಕತ್ತಿ, ಪ್ರಕಾಶಕರು ಬೆರಗು ಪ್ರಕಾಶನ ಸಂಸ್ಥೆ, ವಿನಾಯಕ ನಗರ ಆಲಮೇಲ -೫೮೬ ೨೦೨, ತಾ: ಆಲಮೇಲ, ಜಿಲ್ಲೆ: ವಿಜಯಪುರ, ಮೊ: ೭೭೯೫೩೪೧೩೩೫
Related Posts
Add A Comment