ಆಲಮೇಲ: ವಿಜಯಪುರ ಜಿಲ್ಲೆಯ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ(ರಿ) ಯು ರಾಜ್ಯಮಟ್ಟದ ಪ್ರೊ. ಎಚ್.ಟಿ.ಪೋತೆ ಕತೆ-ಕಾವ್ಯ ಪ್ರಶಸ್ತಿ ನೀಡಲು ಮಹಿಳಾ ಲೇಖಕಿಯರಿಂದ ಹಸ್ತಪ್ರತಿಗಳನ್ನು ಆವ್ಹಾನಿಸಿದೆ. ಪ್ರಶಸ್ತಿ ರೂ ೧೦ ಸಾವಿರ ನಗದು, ಪ್ರಶಸ್ತಿ ಫಲಕ ಸ್ಮರಣಿಕೆ ಒಳಗೊಂಡಿದೆ. ಆಯ್ಕೆಯಾದ ಹಸ್ತಪ್ರತಿಯನ್ನು ಪ್ರಕಾಶನದಿಂದ ಪ್ರಕಟಿಸಿ ಪ್ರಕಾಶನದ ೬ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಕತ್ತಿ ತಿಳಿಸಿದ್ದಾರೆ.
ಮಹಿಳೆಯರು ಮಾತ್ರ ಈ ಸಲದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು ಕನಿಷ್ಠ ೧೦ ಕತೆಗಳನ್ನೊಳಗೊಂಡ ಹಾಗೂ ೪೦ಕ್ಕೂ ಮೀರದ ಕವಿತೆಗಳ ಒಳಗೊಂಡ ಮುದ್ರಣಕ್ಕೆ ಸಿದ್ಧವಾದ ಹಸ್ತಪ್ರತಿಯನ್ನು ಕಳಿಸಬಹುದಾಗಿದೆ. ನುಡಿ ಅಥವಾ ಬರಹದಲ್ಲಿ ಟೈಪ್ ಮಾಡಿದ ತಮ್ಮ ಹಸ್ತಪ್ರತಿಯ ಎರಡು ಪ್ರತಿಗಳನ್ನು ಅಕ್ಟೋಬರ್ ೧೫ ರೊಳಗೆ ತಲುಪುವಂತೆ ಕಳಿಸಲು ಕೋರಲಾಗಿದೆ.
ಹಸ್ತಪ್ರತಿ ಮತ್ತು ಪುಸ್ತಕ ಕಳಿಸುವ ವಿಳಾಸ: ವಿಜಯಲಕ್ಷ್ಮಿ ರಮೇಶ ಕತ್ತಿ, ಪ್ರಕಾಶಕರು, ಬೆರಗು ಪ್ರಕಾಶನ ಸಂಸ್ಥೆ, ವಿನಾಯಕ ನಗರ ಆಲಮೇಲ -೫೮೬ ೨೦೨, ತಾ: ಆಲಮೇಲ, ಜಿಲ್ಲೆ: ವಿಜಯಪುರ, ಮೊ: ೭೭೯೫೩೪೧೩೩೫
ಪ್ರೊ. ಎಚ್.ಟಿ.ಪೋತೆ ಕತೆ-ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿ ಆವ್ಹಾನ
Related Posts
Add A Comment