ಚಿಮ್ಮಡ: ಈ ಭಾಗದ ಆರಾದ್ಯ ದೈವ ಶ್ರೀ ಪ್ರಭುಲಿಂಗೇಶ್ವರರ “ಕಿಚಡಿ” ಜಾತ್ರೆ ಇಂದು ವಿಜ್ರಂಭಣೆಯಿಂದ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ ೬ ಘಂ,ಗೆ ರುದ್ರಾಭಿಷೇಕ ೧೦ ಘಂ,ಗೆ ಷಟಸ್ಥಲ ಧ್ವಜಾರೋಹಣ ೧೦;೩೦ ಕ್ಕೆ ಅಡ್ಡ ಪಲ್ಲಕ್ಕಿ ಮಹೋತ್ಸವ ೧೧;೩೦ ಕ್ಕೆ ನಡೆಯಲಿರುವ ಶಿವಾನುಭವಗೋಷ್ಟಿಯಲ್ಲಿ ನಾಡಿನ ಅನೇಕ ಶ್ರೀಮಠಗಳ ಪೂಜ್ಯ ಮಠಾಧೀಶರು ಪಾಲ್ಗೊಳ್ಳುವರೆಂದು ಸ್ಥಳೀಯ ವಿರಕ್ತಮಠದ ಶ್ರೀ ಪ್ರಭು ಶ್ರೀಗಳು ತಿಳಿಸಿದ್ದಾರೆ.
ಮದ್ಯಾಹ್ನ ೧೨:೩೦ ಕ್ಕೆ ಕಿಚಡಿ ಪ್ರಸಾದ ವಿತರಣೆ ಪ್ರಾರಂಭವಾಗಲಿದ್ದು ಸಂಜೆ ೬:೩೦ ರವರೆಗೆ ನಿರಂತರವಾಗಿ ನಡೆಯಲಿದೆ
ಸಂಜೆ ೭ ಘಂಟೆಗೆ ಅಲಂಕ್ರತ ಜೋಡಿ ನಂದಿಕೋಲ ಉತ್ಸವ ವಿವಿಧ ವಾದ್ಯ ವೃಂದಗಳೊಂದಿಗೆ ವಿಜ್ರಂಭಣೆಯಿಂದ ಜರುಗಲಿದೆ. ರಾತ್ರಿ ಶ್ರೀ ಪ್ರಭುಲಿಂಗೇಶ್ವರ ಯುವಕ ನಾಟ್ಯ ಸಂಘದ ಕಲಾವಿದರು ಅಭಿನಯಿಸುವ “ಚನ್ನಪ್ಪ ಚನಗೌಡ” ಹಾಗೂ ಶ್ರೀ ಕರಿಸಿದ್ದೇಶ್ವರ ಯುವಕ ನಾಟ್ಯ ಸಂಘ ಅಭಿನಯಿಸುವ “ಗೌಡ ಮೆಚ್ಚಿದ ಹುಡುಗಿ”ಎಂಬ ನಾಟಕದಲ್ಲಿ ಕಿರು ತೆರೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದ ದಾನಪ್ಪಾ ಹಾಗೂ ಕಿರುತೆರೆ, ಸಿನಿಮಾ ಕಲಾವಿದರು ಅಭಿನಯಿಸಲಿದ್ದಾರೆ. ಎರಡು ನಾಟಕಗಳು ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಈ ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ಪ್ರಮುಖ ರಾಜಕಾರಣಿಗಳು ಹಿರಿಯ ಅಧಿಕಾರಿಗಳು, ಸೇರಿದಂತೆ ವಿಜಯಪುರ, ಬೆಳಗಾವಿ, ಬಾಗಲಕೋಟ ಸೇರಿದಂತೆ ನೆರೆಯ ಮಹಾರಾಷ್ಟ್ರ ದಿಂದಲೂ ಸಾವಿರಾರು ಜನ ಭಕ್ತಾಧಿಗಳು ಆಗಮಿಸದ್ದಾರೆಂದು ಓಂ ಪ್ರಭುಲಿಂಗೇಶ್ವರ ಸೇವಾ ಸಮೀತಿಯ ಪ್ರಮುಖರು ತಿಳಿಸಿದ್ದಾರೆ. ಸರ್
Related Posts
Add A Comment