ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವ ಜಯಂತಿ ನಿಮಿತ್ತ ವಿಶ್ವಗುರು ಬಸವಣ್ಣನವರು ಹುಟ್ಟೂರು ಬಸವನ ಬಾಗೇವಾಡಿಯಿಂದ ವಿಜಯಪುರ ಬಸವೇಶ್ವರ ವೃತ್ತದವರೆಗೆ ಬೆಂಗಳೂರಿನಲ್ಲಿ ನೆಲೆಸಿರುವ ವಿಜಯಪುರ ಮೂಲದ ಉದ್ಯಮಿ ಬಿ ಬಿ ಪಾಟೀಲ ನೇತೃತ್ವದಲ್ಲಿ ಬಸವಜ್ಯೋತಿ ಯಾತ್ರೆಗೆ ಮಂಗಳವಾರ ಮಧ್ಯರಾತ್ರಿ ಬಾಗೇವಾಡಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ಬಸವೇಶ್ವರ ಜ್ಯೋತಿಯನ್ನು ಬಾಗೇವಾಡಿಯಿಂದ ಇಂಗಳೇಶ್ವರ, ಮಸಬಿನಾಳ ಮತ್ತು ಉಕುಮನಾಳ ಮಾರ್ಗವಾಗಿ ನಗರದ ಶಿವಗಿರಿವರೆಗೆ 42 ಕಿಮಿ ದೂರವನ್ನು ಬೆಂಗಳೂರಿನ ಜಗದೀಶ ದಮಾನಿಯಾ, ಸಂದೀಪ ಡಿಯೋ, ಮೋಹನ, ಪ್ರಸಾದ ಶೃಂಗೇರಿ ಮತ್ತು ಹುಬ್ಬಳ್ಳಿಯ ವಿವಿಟ್, ವಿಸಿಜಿ ಗ್ರೂಪ್ ನ ಪ್ರವೀಣ ಚೌರ್, ಶ್ರೀಕಾಂತ ಅಂಗಡಿ, ಸಂದೀಪ್ ಮಡಗೊಂಡ, ಸೋಮು ಮಠ, ವಿನಯ ಪಾಟೀಲ, ರಘು ಸಾಲೋಟಗಿ ಮತ್ತು ಕಲಬುರಗಿಯ ವೀರಣ್ಣ ಕೌಲಗಿ ಓಡುತ್ತ ಬಂದಿದ್ದಾರೆ. ಅಲ್ಲದೆ, ವಿಸಿಜಿ ಸದಸ್ಯರಾದ ಅಬಕಾರಿ ಇಲಾಖೆ ಅಧೀಕ್ಷಕ ಲಗಮಣ್ಣ ಸಲಗಾರೆ ಹಾಗು ಪುತ್ರ ಧನುಷ್ ಮತ್ತು ಅಬಕಾರಿ ಇಲಾಖೆ ಅಪ್ಪು ಭೈರಗೊಂಡ ಮತ್ತು ಅವರ ಪುತ್ರರಾದ ಅಮಿತ ಮತ್ತು ಅಪೇಕ್ಷಾ. ಗುರುಶಾಂತ ಕಾಪಸೆ, ಸೋಮಶೇಖರ ಸ್ವಾಮಿ, ಮುತ್ತಣ್ಣ ಬಿರಾದಾರ, ಸಿದ್ದು ನಾಯ್ಕೊಡಿ, ಡಾ. ಶಂಕರಗೌಡ ಪಾಟೀಲ, ಡಾ. ರವಿ ಚೌಧರಿ ಮತ್ತು ಅಮೋಘಸಿದ್ದ ಬಸನಾಳ. ಇಡೀ ರಾತ್ರಿ ಸೈಕಲ್ ತುಳಿಯುವ ಮೂಲಕ ಸಾಥ್ ನೀಡಿದರು.
ಇದುವರೆಗೆ ವಿಜಯಪುರಕ್ಕೆ ಸೀಮಿತವಾಗಿದ್ದ ಬಸವಯಾತ್ರೆಗೆ ವಿಸಿಜಿ ತಂಡ ಹೆಚ್ಚು ಸದಸ್ಯರು ಭಾಗವಹಿಸುವ ಮೂಲಕ ಈ ಜ್ಯೋತಿ ಯಾತ್ರೆಗೆ ಕಳೆ ತಂದಿದ್ದಾರೆ. ನೆರೆಯ ಬೆಳಗಾವಿ, ಕಲಬುರಗಿಯ ಈ ಬಾರಿ ಓಟಗಾರರು ಭಾಗವಹಿಸ್ದಿದರು. ಮುಂದಿನ ಬಾರಿ ಬಸವಯಾತ್ರೆಯನ್ನು ಭಕ್ತಿ ಬಂಡಾರಿ ಬಸವಣ್ಣ ಯಾತ್ರೆಯನ್ನು ಹೆಚ್ಚೆಚು ಸದಸ್ಯರನ್ನು ಒಳಗೊಂಡು ಆಚರಣೆ ಮಾಡಲಾಗುವುದು ಎಂದು ವಿಸಿಜಿ ಸೈಕ್ಲಿಂಗ್ ಗ್ರೂಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.