ಇಂಡಿ: ದೇವಾಲಯಗಳು ಮನುಷ್ಯನ ಶ್ರದ್ಧಾ ಹಾಗೂ ನೆಮ್ಮದಿಯ ಕೇಂದ್ರಗಳು ಎಂದು ಸದ್ಗುರು ರಾಯಲಿಂಗೇಶ್ವರ ಮಠ ಕಕಮರಿಯ ಅಭಿನವ ಗುರು ಜಂಗಮ ಮಹಾರಾಜರು ಹೇಳಿದರು.
ಪಟ್ಟಣದ ಸಾತಪುರ ವಸ್ತಿಯಲ್ಲಿ ನಿಯೋಜಿತ ಶ್ರೀ ಸದ್ಗುರು ರಾಯಲಿಂಗೇಶ್ವರ ಸಂಸ್ಥಾನಮಠ ಕಕಮರಿಯ ಶಾಖಾ ಮಠ ಸಾತಪುರ ವಸ್ತಿ ಮಠಕ್ಕೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಹಣ ಐಶ್ವರ್ಯ ನೀಡದಿರುವ ಮನಶಾಂತಿಯನ್ನು ದೇವಾಲಯಗಳು ನೀಡುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ದೇವಾಲಯಗಳಲ್ಲಿ ಅರ್ಧ ತಾಸು ಕುಳಿತು ಭಗವಂತನನ್ನು ಧ್ಯಾನ ಮಾಡಿದರೆ ಮನಸ್ಸಿಗೆ ಸಮಾಧಾನ ಸಿಗುತ್ತದೆ ಎಂದರು.
ಶಾಖಾ ಮಠದ ಪ್ರಕಾಶ ಗುಡ್ಲ ಮಾತನಾಡಿ, ಯಾವುದೇ ರೀತಿಯ ಫಲಾಪೇಕ್ಷೆ ಇಲ್ಲದೆ ದೇವಸ್ಥಾನಕ್ಕೆ ಸಾತಪುರ ವಸ್ತಿಯವರು ನಿವೇಶನವನ್ನು ದಾನರೂಪದಲ್ಲಿ ನೀಡಿರುತ್ತಾರೆ. ಅದಲ್ಲದೆ ದೇವಸ್ಥಾನದ ಸಮಿತಿಯವರೇ ಎಲ್ಲ ಖರ್ಚನ್ನು ಮಾಡಿದ್ದಾರೆ. ಮತ್ತು ಮುಂದಿನ ಖರ್ಚನ್ನು ಸಮಿತಿಯವರೇ ಮಾಡುತ್ತಿದ್ದಾರೆ. ದೇವಾಲಯ ನಿರ್ಮಿಸುವ ಇವರ ಸೇವಾಕಾರ್ಯ ಶ್ಲಾಘನೀಯ ಎಂದರು.
ಇಂಡಿ ಪುರಸಭೆ ಮಾಜಿ ಅಧ್ಯಕ್ಷ ಮಾರತಂಡ ಗುಡ್ಲ , ಬಸಗೊಂಡ ಗುರುಗಳು, ಮಹಾದೇವ ರೂಗಿ, ಮಾಳಪ್ಪ ಜಕ್ಕಪ್ಪ ನಿಂಬಾಳ, ಸುರೇಶ ಗುಡ್ಲ, ಮಲಕಪ್ಪ ಬೆನೂರ, ಭೂತಾಳಿ ಹದರಿ, ಮಲ್ಲಪ್ಪ ಗುಡ್ಲ ಮತ್ತಿತರಿದ್ದರು.
Related Posts
Add A Comment