ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ವಾರ್ಡ್ ಸಂಖ್ಯೆ ೨೩ ಜೈನಾಪುರದಿಂದ ಟಕ್ಕಳಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಡಾಂಬರೀಕರಣ ರಸ್ತೆಯನ್ನಾಗಿ ಸುಧಾರಣೆ ಮಾಡುವಂತೆ ಸಚಿವ ಶಿವಾನಂದ ಪಾಟೀಲರ ವಿಜಯಪುರದ ನಿವಾಸದಲ್ಲಿ ಶನಿವಾರ ಜೈನಾಪೂರದ ಬೀರಲಿಂಗೇಶ್ವರ ದೇವಸ್ಥಾನ ಕಮೀಟಿ, ವೀರಶೈವ ಲಿಂಗಾಯತ ಟ್ರಸ್ಟ್ ಉಪಾಧ್ಯಕ್ಷ ಚನ್ನಬಸಯ್ಯ ಹಿರೇಮಠ ಹಾಗೂ ಈಶ್ವರ ಹೂಗಾರ ಅವರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚನ್ನಬಸಯ್ಯ ಹಿರೇಮಠ ಅವರು ಜೈನಾಪೂರದಿಂದ ಟಕ್ಕಳಕಿ ಗ್ರಾಮಕ್ಕೆ ಕೇವಲ ೨.೫ ಕಿಮೀ ಅಂತರವಿದೆ. ಈ ರಸ್ತೆಯನ್ನು ಡಾಂಬರ್ ರಸ್ತೆಯ ಮಾಡುವ ಜೊತೆಗೆ ಈ ರಸ್ತೆಯಲ್ಲಿ ಬರುವ ಇಗಳಿ ಹಳ್ಳಕ್ಕೆ ಬ್ರಿಜ್ ಕಮ್ ಬಾಂದಾರ ನಿರ್ಮಿಸಿದರೆ ಜೈನಾಪುರ, ಟಕ್ಕಳಕಿ ಗ್ರಾಮದ ಜನರಿಗೆ ಅನುಕೂಲವಾಗುತ್ತದೆ. ಬಾಂದಾರ ನಿರ್ಮಾಣದಿಂದ ಅನೇಕ ರೈತ ಬಾಂಧವರಿಗೆ ತುಂಬಾ ನೆರವಾಗುವ ಜೊತೆಗೆ ರಸ್ತೆ ಸಂಪರ್ಕವಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದಾಗ ಸಚಿವರು ಈ ಕಾಮಗಾರಿಗಳನ್ನು ಶೀಘ್ರವಾಗಿ ಮಾಡಿಸಿಕೊಡುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುತ್ತು ಗಣಿ, ಮಲ್ಲಪ್ಪ ಹಣಮಂತ ಶೆಟ್ಟೆಪ್ಪಗೋಳ, ಮುತ್ತಪ್ಪ ಬಾಲಾಗೋಳ, ರಾಜಪ್ಪ ಮೇಲ್ದಾಪೂರ, ಶ್ರೀಶೈಲ ಮೇಲ್ದಾಪೂರ ಇತರರು ಇದ್ದರು.