ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024ರಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಲು ನವೆಂಬರ್ 30 ಕೊನೆಯ ದಿನವಾಗಿದ್ದು, ಆಸಕ್ತರು ಕೂಡಲೇ ತಮ್ಮ ಹೆಸರು ನೊಂದಾಯಿಸಬೇಕು ಎಂದು ಕೋರ್ ಕಮಿಟಿ ನೋಂದಣಿ ವಿಭಾಗದ ಡಾ.ರಾಜು ಯಲಗೊಂಡ ಮತ್ತು ವೀರೇಂದ್ರ ಗುಚ್ಚೆಚ್ಚಿ ತಿಳಿಸಿದ್ದಾರೆ.
ಈಗಾಗಲೇ ನೋಂದಣಿ ಕಾರ್ಯ ಭರದಿಂದ ಸಾಗಿದ್ದು, ಕರ್ನಾಟವಷ್ಟೇ ಅಲ್ಲ ಬೇರೆ ಬೇರೆ ರಾಜ್ಯಗಳಿಂದಲೂ ಹೆಸರಾಂತ ಓಟಗಾರರು ತಮ್ಮ ಹೆಸರು ನೋದಾಯಿಸಿದ್ದಾರೆ. ಕಳೆದ ಬಾರಿ ಸುಮಾರು 10 ಸಾವಿರ ಓಟಗಾರರು ಪಾಲ್ಗೊಂಡಿದ್ದರು. ಈ ಬಾರಿ ಸುಮಾರು 15 ರಿಂದ 20 ಸಾವಿರ ಜನ ಪಾಲ್ಗೋಳ್ಳುವ ನಿರೀಕ್ಷೆಯಿದೆ. ಈ ಓಟದಲ್ಲಿ ಪಾಲ್ಗೋಳ್ಳಲು ಅನೇಕ ಸಂಘ, ಸಂಸ್ಥೆಗಳು ಗ್ರುಪ್ ರೆಜಿಸ್ಟ್ರೇಷನ್ ಕೂಡ ಮಾಡಿಸಿವೆ. ಹೀಗಾಗಿ ಆಸಕ್ತರು ಗ್ರುಪ್ ನೋಂದಣಿ ಸಹಿತ ಮಾಡಿಸಬಹುದಾಗಿದೆ. ಆನಲೈನ್ ಮೂಲಕ https://www.eventzalley.com/event-details/211 ನಲ್ಲಿ ಹೆಸರು ನೋಂದಾಯಿಸಬಹುದಾಗಿದೆ.
ನೋಂದಣಿ ಸಂಬಂಧಿತ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 8095190218 ಮತ್ತು 9886668498 ಸಂಪರ್ಕಿಸಬಹುದಾಗಿದೆ ಎಂದು ಡಾ. ರಾಜು ಯಲಗೊಂಡ ಮತ್ತು ವೀರೇಂದ್ರ ಗುಚ್ಚೆಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
