ಚಿಮ್ಮಡ: ಗ್ರಾಮದ ಆರಾದ್ಯದೇವರಾದ ಶ್ರೀ ಪ್ರಭುಲಿಂಗೇಶ್ವರರ ಹರಿವಾಣೋತ್ಸವ, ಬಸವಜಯಂತಿ ಹಾಗೂ ರುದ್ರಾಭಿಷೇಕ ಮಹಾಮಂಗಲ ಕಾರ್ಯಕ್ರಮ ವಿಜ್ರಂಭನೆಯಿAದ ನಡೆಯಿತು.
ಹರಿವಾಣೋತ್ಸವದ ನಿಮಿತ್ಯ ಕಳೆದ ಹತ್ತು ದಿನಗಳಿಂದ ಪ್ರತಿದಿನ ಮುಂಜಾನೆ ೫ ಘಂಟೆಯಿAದ ೭ ಘಂಟೆಗಳವರೆಗೆ ನಡೆಯುತ್ತಿರುವ ರುದ್ರಾಭಿಷೇಕ, ಮಹಾಪೂಜೆಯ ಮಂಗಲೋತ್ಸವಕ್ಕೆ ಗ್ರಾಮದ ರೈತರು ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಂತರನಡೆದ ಪಲ್ಲಕ್ಕಿ ಉತ್ಸವದಲ್ಲಿ ಜಗಜ್ಯೋತಿ ಶ್ರೀ ಬಸವಣ್ಣನವರ ಭಾವಚಿತ್ರವನ್ನು ಅಲಂಕ್ರತ ಪಲ್ಲಕ್ಕಿಯಲ್ಲಿಟ್ಟು, ಮಹಿಳೆಯರಿಂದ ಆರತಿ, ಕುಂಭಮೇಳ, ಸಕಲ ವಾದ್ಯ ವೃಂದಗಳೊAದಿಗೆ ಬಸ್ ನಿಲ್ದಾನದ ಹತ್ತಿರವಿರುವ ಬಸವೇಶ್ವರ ವೃತ್ತದಿಂದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಬಸವಣ್ಣನವರಿಗೆ ಜಯಘೋಷ ಮಾಡಲಾಯಿತು. ನಂತರ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಹರಿವಾಣ ತುಂಬುವ ಕಾರ್ಯಕ್ರಮದಲ್ಲಿ ಗ್ರಾಮದ ರೈತರು ತಾವು ಬೆಳೆದ ಕಬ್ಬು, ಬಾಳೆ, ತೆಂಗು ಸೇರಿದಂತೆ ವಿವಿಧ ಹಣ್ಣು ಹಂಫಲಗಳ ರಾಶಿಗಳಿಂದ ಹರಿವಾಣ ತುಂಬಿಸಲಾಗುತ್ತದೆ ಕೆಳಗೆ ಬಿದ್ದ ಹರಿವಾಣ ಯಾರಿಗೆ ದೊರೆಯುವುದೋ ಅವರ ಇಷ್ಠಾರ್ಥಗಳನ್ನು ಶ್ರೀ ಪ್ರಭುಲಿಂಗೇಶ್ವರ, ಬಸವಣ್ಣನವರು ನೆರವೇರಿಸುತ್ತಾರೆಂಬ ಪ್ರತೀತಿ ಇದೆ. ಇದರೊಂದಿಗೆ ಹರಿವಾಣದ ನಿಮಿತ್ಯ ಕಳೆದ ಹತ್ತು ದಿನಗಳಿಂದ ಸ್ಥಳಿಯ ಗದ್ದಿಗೆಗುಡಿಯಲ್ಲಿ ನಡೆಯುತ್ತಿರುವ ರುದ್ರಾಭಿಷೇಕ ವಿಶೇಷವಾಗಿದೆ.
Related Posts
Add A Comment