ಯಡ್ರಾಮಿ: ವಿಶ್ವ ಜಾಗತಿಕ ಇತಿಹಾಸದಲ್ಲಿ ಧರ್ಮ, ಸಮಾಜ, ಸಾಹಿತ್ಯ ಸಂವರ್ಧನೆಗಾಗಿ ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದವನು ಬಸವಣ್ಣ ಎಂದು ಯಡ್ರಾಮಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ವಿರಕ್ತಮಠದಲ್ಲಿ ರವಿವಾರದಂದು ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವದ ಪ್ರಯುಕ್ತ ನಡೆದ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಸವಣ್ಣನವರು ಕಾಯಕವೇ ದ್ಯೇಯವಾಗಿಸಿಕೊಂಡÀರು, ಮಹಿಳೆಯರಿಗೆ ಮನ್ನಣೆಯಾದÀರು, ದಾಸೋಹಕ್ಕೆ ಆಡಂಬೋಲಾದರು. ಜನರಾಡುವ ಭಾಷೆಯಲ್ಲಿಯೇ ವಚನಗಳನ್ನು ರಚಿಸಿ, ಜಗತ್ತಿನಲ್ಲಿಯೇ ಪ್ರಪ್ರಥಮವಾಗಿ ಅನುಭವ ಮಂಟಪ ಎನ್ನುವ ಪಾರ್ಲಿಮೆಂಟ್ ಸ್ಥಾಪಿಸಿದರು. ವಚನಗಳ ಮೂಲಕ ಸಮಾಜವನ್ನು ತಿದ್ದಿ ಚಿರಸ್ಥಾಯಿಯಾದರು. ಇದರ ಪರಿಣಾಮವಾಗಿಯೇ ಸಪ್ತ ಸಾಗರದಾಚೆ ಮೊದಲ ಕನ್ನಡಿಗನಾಗಿ ಇಂಗ್ಲೆAಡಿನ ಥೇಮ್ಸ್ ನದಿಯ ದಡದಲ್ಲಿ ನಿಂತಿದ್ದಾರೆ. ಪ್ರಸಕ್ತ ದಿನಗಳಲ್ಲಿ ವಚನಗಳನ್ನು ನಾವು ಅನುಕರಣೆ ಮಾಡಿಕೊಂಡು ನಡದದ್ದೇ ಆದಲ್ಲಿ ಜೀವನ ಸಾರ್ಥಕವಾಗುವದು ಎಂದರು.
ನAತರ ಸಿಂಗಾರಗೊAಡ ಎತ್ತಿನ ಬಂಡಿಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ಯಡ್ರಾಮಿ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಮೆರವಣಿಗೆಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸುಮಾರು ೨೧ ಜೊತೆ ಎತ್ತುಗಳ ಮೆರವಣಿಗೆ ನೋಡುಗರ ಗಮನ ಸೆಳೆಯುವಂತಿತ್ತು.
ಈ ವೇಳೆ ಮಹಾನಿಂಗಪ್ಪಗೌಡ ಬಂಡೆಪ್ಪಗೌಡ್ರ, ಸಿದ್ರಾಮಪ್ಪಗೌಡ ಮಾಲಿಪಾಟೀಲ, ನಿಂಗನಗೌಡ ಜವಳಗಿ, ರಾಜಶೇಖರ ಡಗ್ಗಾ, ಬಸಲಿಂಗಪ್ಪ ಅಂಕಲಕೋಟಿ, ಶಾಂತಗೌಡ ಜವಳಗಿ, ಲಕ್ಷಿö್ಮಕಾಂತ ಸೋನಾರ, ಪ್ರಕಾಶ ಬೆಲ್ಲದ, ಮಂಜುನಾಥ ಕುಲಕರ್ಣಿ, ರೇವಣಸಿದ್ದ ಅಂಕಲಕೋಟಿ, ವಿಜಯಕುಮಾರ ಗುಂದಗಿ, ಆನಂದ ಯತ್ನಾಳ, ಚನ್ನವೀರ ತಾಳಿಕೋಟಿ, ಕಿರಣ ದೇಸಾಯಿ, ಅಣ್ಣಯ್ಯ ಹಿರೇಮಠ, ಸತಿಶ ಬಂಡೆಪ್ಪಗೋಳ, ಮಂಜುನಾಥ ಪುರಾಣಿಕ, ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment