ಉತ್ತರ ಕರ್ನಾಟಕದಲ್ಲಿ ಅತ್ಯುತ್ತಮ ಹೈ ಎಂಡ್ ಉಪಕರಣಗಳನ್ನು ಒಳಗೊಂಡು ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಜೆ.ಎಸ್.ಎಸ್ ಡೈಗ್ನೊಸ್ಟಿಕ್ಸ್ ಲ್ಯಾಬ್ಸ್ ವತಿಯಿಂದ ಪ್ರತಿ ಭಾನುವಾರ ಬೆಳಿಗ್ಗೆ 7 ರಿಂದ 10 ಗಂಟೆಯವರೆಗೂ ಸಕ್ಕರೆ ಖಾಯಿಲೆಗೆ ಸಂಬAಧಿಸಿದ ರಕ್ತ ತಪಾಸಣಾ ಉಚಿತ ಶಿಬಿರವನ್ನು ಏರ್ಪಡಿಸಲಾಗಿದೆ. ಆದ ಕಾರಣ ಅಗತ್ಯತೆ ಇರುವವರು ಇಟಗಿ ಪೆಟ್ರೋಲ್ ಬಂಕ್, ಆದರ್ಶನಗರ ಆಶ್ರಮ ರಸ್ತೆ, ಸಾಯಿ ಪಾರ್ಕ, ಸಿದ್ಧೇಶ್ವರ ದೇವಸ್ಥಾನ ಹಾಗೂ ಮೆಡಿಕಲ್, ಮೀನಾಕ್ಷಿ ಚೌಕ್, ಸುಕುನ ಕಾಲೋನಿ ಹಾಗೂ ಜಲನಗರ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಪ್ರಾರಂಭಿಸಲಾಗಿರುವ ಜೆ.ಎಸ್.ಎಸ್ ರಕ್ತ ಮಾದರಿ ಸಂಗ್ರಹಣಾ ಘಟಕಗಳಿಗೆ ಭೇಟಿ ಕೊಟ್ಟು ರಕ್ತ ಮಾದರಿಯನ್ನು ನೀಡಿದರೆ ಪರೀಕ್ಷಾ ವರದಿಯನ್ನು ಅವರ ಮೊಬೈಲ್‌ಗೆ ವಾಟ್ಸಪ್ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಎಫ್.ಬಿ.ಎಸ್, ಪಿ.ಪಿ.ಬಿ.ಎಸ್ ಹಾಗೂ ಆರ್.ಬಿ.ಎಸ್ ಪರೀಕ್ಷೆಯನ್ನು ನೆರವೇರಿಸಲಾಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜೆ.ಎಸ್.ಎಸ್ ಹಾಸ್ಪಿಟಲ್ಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರಣ ಮಳಖೇಡ್ಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈರಣ್ಣ ಕುರ್ಲೆ ಅವರಿಗೆ 9743900067 ಸಂಪರ್ಕಿಸಬೇಕೆAದು ಜೆ.ಎಸ್.ಎಸ್ ಹಾಸ್ಪಿಟಲ್ಸ್ ನ ಮಂಜುನಾಥ ಮ. ಜುನಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.