ವಿಜಯಪುರ: ಯುವಜನೋತ್ಸವ- ೨೦೨೪ ಅಂಗವಾಗಿ ಆಗಸ್ಟ್ ೨೦ ರಂದು ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಹಾಗೂ ರಕ್ತದಾನ ಜಾಗೃತಿ ಮೂಡಿಸಲು ೧೭ರಿಂದ ೨೫ ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳಿಗೆ ೫ಕೀ.ಮಿ ಮ್ಯಾರಾಥಾನ್ (ರೆಡ್ ರಿಬ್ಬನ್ ಓಟ) ಸ್ಪರ್ಧೆ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ ೬.೩೦ಕ್ಕೆ ಗೋಲಗುಂಬಜದಿಂದ ಪ್ರಾರಂಭವಾಗಿ, ಗಾಂಧಿ ವೃತ್ತ, ಶಿವಾಜಿ ವೃತ್ತ, ವಾಟರ್ ಟ್ಯಾಂಕ್, ಸೈನಿಕ ಶಾಲೆ ಮಾರ್ಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಡ್ಯಾಪ್ಕೋ ಕಚೇರಿಯವರೆಗೆ ಮ್ಯಾರಾಥಾನ್ (ರೆಡ್ ರಿಬ್ಬನ್ ಓಟ) ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಮೆಡಲ್‌ಗಳನ್ನು ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
