ಸಿಂದಗಿ: ಹಿಂದಿನ ಸರಕಾರದಲ್ಲಿ ಕಾಮಗಾರಿಗಳು ಕುಂಠಿತಗೊಂಡಿರುವುದು ಪ್ರಸ್ತುತ ಸಿಂದಗಿ ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಪಟ್ಟಣಕ್ಕೆ ಸಂಬಂಧಿಸಿದ ವಿಶೇಷ ಅನುದಾನವನ್ನು ಪೌರಾಡಳಿತ ವತಿಯಿಂದ ನೀಡುವೆ ಎಂದು ಸಚಿವ ರಹೀಂ ಖಾನ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿ ನೂತನವಾಗಿ ನಡೆಯುತ್ತಿರುವ ಇಂದಿರಾ ಕ್ಯಾಂಟಿನ್ ಕಾಮಗಾರಿ ವಿಕ್ಷೀಸಿ ಮಾದ್ಯಮದವರೊಡನೆ ಮಾತನಾಡಿದ ಅವರು, ರಾಜ್ಯದಲ್ಲಿ ಐದು ರೂಪಾಯಿಗೆ ಉಪಹಾರ ಹತ್ತು ರೂಪಾಯಿಗೆ ಊಟ ಸಿಗುವ ಯೋಜನೆ ನಮ್ಮ ಕಾಂಗ್ರೇಸ್ ಸರಕಾರದ ಸಿದ್ದರಾಮಯ್ಯ ಅವರು ನೀಡಿದ್ದು, ಬಡವರ ಹೊಟ್ಟೆ ತುಂಬಿಸುತ್ತಿರುವುದು ಬಡ ವರ್ಗಕ್ಕೆ ಸಂತಸ ತಂದಿದೆ. ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿಯೇ ಹಿಂದುಳಿದ ಅಭಿವೃದ್ಧಿ ಕಾಣದ ಕ್ಷೇತ್ರವಾಗಿ ಸಿಂದಗಿ ನಗರ ಬಿಂಬಿತವಾಗುತ್ತಿದೆ ಎಂಬ ವರದಿಗಾರರ ಪ್ರಶ್ನೇಗೆ ಉತ್ತರಿಸಿದ ಅವರು ಹಿಂದಿನ ಸರಕಾರ ವೈಫಲ್ಯದಿಂದ ಕ್ಷೇತ್ರ ಅಭಿವೃದ್ದಿಯಲ್ಲಿ ಕುಂಠಿತಗೊಂಡಿದೆ. ಪ್ರಸ್ತುತ ಕೆಲವು ಯೋಜನೆಗಳಲ್ಲಿ ಕಾಮಗಾರಿ ನಡೆಯುತ್ತಿವೆ ಪೌರಾಡಳಿತ ಇಲಾಖೆಯಿಂದ ವಿಶೇಷ ಅನುದಾನ ನೀಡುವೆ ಎಂದು ಭರವಸೆ ನೀಡಿದರು.
ಬಳಿಕ ಶಾಸಕ ಅಶೋಕ ಮನಗೂಳಿ ಸಚಿವರನ್ನು ಸ್ವಾಗತಿಸಿ ಮಾತನಾಡಿದ ಅವರು, ಅಮೃತ-೨ ಯೋಜನೆ ಅಡಿಯಲ್ಲಿ ಟೆಂಡರ್ ಪೂರ್ಣಗೊಂಡಿದೆ. ಆಲಮೇಲಕ್ಕೆ ೩೨ಕೋಟಿ ಹಾಗೂ ಸಿಂದಗಿ ನಗರಕ್ಕೆ ೧೧ಕೋಟಿ ರೂ.ಗಳ ಭೂಮಿ ಪೂಜೆ ಮಾಡಲಾಗುವುದು. ಉಪಚುನಾವಣೆ ಸಂಧರ್ಭದಲ್ಲಿ ನನ್ನ ಕ್ಷೇತ್ರವನ್ನು ಕಾಲಚಕ್ರದಂತೆ ಸುತ್ತಿದ ಅನುಭವ ಸಚಿವರಿಗಿದೆ. ಅನುಭವದಷ್ಟು ಅನುದಾನ ಕ್ಷೇತ್ರಕ್ಕೆ ನಿಡಿದರೇ ಜನರ ಹಲವು ಸಮಸ್ಯೆಗಳಿಗೆ ಸ್ಪಂದಿಸಿದಂತಾಗುತ್ತದೆ ಎಂದು ಸಚಿವರಿಗೆ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ, ಸಿಂದಗಿ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರಿ, ಆಲಮೇಲ ಬ್ಲಾಕ್ ತಾಲೂಕಾಧ್ಯಕ್ಷ ಸಾಧೀಕ ಸುಂಬಡ, ಪುರಸಭೆ ಸದಸ್ಯ ಸಂದೀಪ ಚೌರ, ಹಣಮಂತ ಸುಣಗಾರ, ಭೀಮು ಕಲಾಲ, ಬಸವರಾಜ ಯರನಾಳ, ರಾಜಣ್ಣ ನಾರಾಯಣಕರ, ಪುರಸಭೆ ನಾಮ ನಿರ್ದೇಶಿತ ಸದಸ್ಯ ಚನ್ನಪ್ಪ ಗೋಣಿ, ಸಿದ್ದು ಮಲ್ಲೇದ, ಸುನಂದಾ ಯಂಪೂರೆ, ಪ್ರತಿಭಾ ಚಳ್ಳಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬಿಕಾ ಪಾಟೀಲ, ಮಹಾನಂದ ಬಮ್ಮಣ್ಣಿ, ಜಯಶ್ರೀ ಹದನೂರ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಅಜರ್ ನಾಟೀಕಾರ, ಸೈಪನ ನಾಟೀಕಾರ, ಮೈಬೂಬ ಆಳಂದ, ಸೇರಿದಂತೆ ವಿವಿಧ ಇಲಾಖೆಯ ಅಧಿಖಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
ಹಿಂದಿನ ಸರಕಾರದ ವೈಫಲ್ಯದಿಂದ ಅಭಿವೃದ್ದಿ ಕುಂಠಿತ :ಸಚಿವ ರಹೀಂ ಖಾನ್
Related Posts
Add A Comment

