ಸಿಂದಗಿ: ಇಂದಿನ ದಿನಗಳಲ್ಲಿ ಒಂದು ರಾಷ್ಟ್ರ ಅಭಿವೃದ್ಧಿ ಹೊಂದಬೇಕಾದರೆ ಯುವ ಸಮುದಾಯ ತಂಬಾಕಿನಂತಹ ಹಾನಿಕಾರಕ ವಸ್ತುಗಳ ಸೇವನೆಯಿಂದ ಕ್ಯಾನ್ಸರ್‌ನಂತಹ ಖಾಯಿಲೆಗಳಿಗೆ ತುತ್ತಾಗಿ ಆರ್ಥಿಕವಾಗಿ ರಾಷ್ಟ್ರ ನಿರ್ಮಾಣದಲ್ಲಿ ತೊಂದರೆಯಾಗುತ್ತಿದ್ದು ಇಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ತಾಪಂ ಇಒ ರಾಮು ಅಗ್ನಿ ಹೇಳಿದರು.
ಪಟ್ಟಣದ ತಾಪಂ ಸಬಾಭವನದಲ್ಲಿ ನಶಾ ಮುಕ್ತ ಭಾರತ ಅಭಿಯಾನದಡಿಯಲ್ಲಿ ತಾಲೂಕಿನ ವಿಆರ್‌ಡಬ್ಲೂ ಮತ್ತು ಎಂಆರ್‌ಡಬ್ಲೂ ಅವರಿಂದ ಜರುಗಿದ ವ್ಯಸನ ಮುಕ್ತ ಸಮಾಜ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಕುಟುಂಬದ ಸದಸ್ಯರಿಗೂ, ಸ್ನೇಹಿತರಿಗೂ ಇಂತಹ ದುಷ್ಚಟಗಳಿಂದ ಮುಕ್ತಾರಾಗುವಂತೆ ತಿಳುವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕರು ನಿತ್ಯಾನಂದ ಯಲಗೋಡ, ಎ.ಎ.ದುರ್ಗದ, ಎಸಿಡಿಪಿಒ ಸಿದ್ದಲಿಂಗಪ್ಪ ಕೊರವಾರ, ನರೇಗಾ ಸಂಯೋಜಕ ಭೀಮರಾಯ ಚೌಧರಿ, ಎಂಆರ್‌ಡಬ್ಲೂ ಮುತ್ತು ಸಾತಿಹಾಳ, ಭುವನೇಶ್ವರಿ ಕೋಟಿ, ಜಕ್ಕು ಪೂಜಾರಿ ಸೇರಿದಂತೆ ಸಿಬ್ಬಂದಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

