ಕೆಂಭಾವಿ: ಸುಮಾರು ಎರಡೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಲಯ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂತನ ಅಧ್ಯಕ್ಷರಾಗಿ ಸಾಹಿತಿ, ಸಂಘಟಕ, ಮಡಿವಾಳಪ್ಪಗೌಡ ಪಾಟೀಲ್ ಹೆಗ್ಗಣದೊಡ್ಡಿ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಸ್ಪಂದನ ಶಾಲೆಯಲ್ಲಿ ಶುಕ್ರವಾರ ಸಂಜೆ ಜರುಗಿದ ವಲಯ ಕಸಾಪ ಸರ್ವ ಸದಸ್ಯರ ಸಭೆಯಲ್ಲಿ ಪತ್ರಕರ್ತ ಡಿ ಸಿ ಪಾಟೀಲ್ ಮಾತನಾಡಿ ಮಡಿವಾಳಪ್ಪಗೌಡ ಹೆಗ್ಗನದೊಡ್ಡಿ ಹೆಸರು ಸೂಚಿಸಿದರು. ಸಭೆಯಲ್ಲಿದ್ದ ಸಾಹಿತಿ ನಿಂಗನಗೌಡ ದೇಸಾಯಿ, ಶಿಕ್ಷಕ ಶಿವನಗೌಡ ಪಾಟೀಲ ಬೆಂಬಲಿಸಿದರು. ಶಿಕ್ಷಕ ಬಂದೇನವಾಜ್ ನಾಲತವಾಡ, ಪತ್ರಕರ್ತ ಗುರು ಕುಲಕರ್ಣಿ ಅನುಮೋದಿಸಿದರು. ಸುರಪುರ ತಾಲೂಕು ಕಸಾಪ ಅಧ್ಯಕ್ಷ ಶರಣಬಸವ ಯಾಳವಾರ ಮಡಿವಾಳಪ್ಪಗೌಡರ ಹೆಸರನ್ನು ಸಭೆಯಲ್ಲಿ ಘೋಷಿಸುತ್ತಿದ್ದಂತೆ ಹಾಜರಿದ್ದ ಸರ್ವ ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಅಂಗೀಕರಿಸಿದರು, ತದನಂತರ ಸುರಪುರ ಹಾಗೂ ಶಹಾಪುರ ತಾಲೂಕು ಕಸಾಪ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿ ಶುಭಹಾರೈಸಿದರು.
ನೂತನ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ್ ಮಾತನಾಡಿ, 2022ರ ಫೆಬ್ರುವರಿಯಲ್ಲಿ ನಡೆದ ಸುರಪುರ ತಾಲೂಕು ಕಸಾಪ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದ ಕೆಲವು ಕಹಿ ಘಟನೆ ಮರೆತು, ಹಿರಿಯರು ಹಾಗೂ ಸರ್ವ ಸದಸ್ಯರು ಸೇರಿ ಅವಿರೋಧವಾಗಿ ವಲಯ ಕಸಾಪ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು ಶೀಘ್ರದಲ್ಲೇ ವಲಯ ಕಸಾಪ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡುವ ಮೂಲಕ ತಮ್ಮೆಲ್ಲರ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ವಲಯ, ತಾಲೂಕು, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಮಾಡುವುದಾಗಿ ತಿಳಿಸಿದರು.
ಯಾದಗಿರಿ ಜಿಲ್ಲಾ ಕಸಾಪದ ಸಾಂಸ್ಕೃತಿಕ ಪ್ರತಿನಿಧಿ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಸಾಹಿತಿಗಳಾದ ಲಿಂಗನಗೌಡ ಮಾಲಿ ಪಾಟೀಲ್, ಶಾಂತಪ್ಪ ಬೂದಿಹಾಳ, ನಬಿಲಾಲ ಮಕಾನದಾರ, ಶಹಾಪುರ ತಾಲೂಕು ಕಸಾಪ ಅಧ್ಯಕ್ಷ ರವೀಂದ್ರನಾಥ ಹೊಸ್ಮನಿ, ನಿಕಟ ಪೂರ್ವ ಕಸಾಪ ವಲಯ ಅಧ್ಯಕ್ಷ ಡಾ ಯಂಕನಗೌಡ ಪಾಟೀಲ, ಬಿಗುಡಿ ಕಸಾಪ ವಲಯ ಅಧ್ಯಕ್ಷ ಶರಣಬಸವ ಬಿರಾದಾರ, ಮಾತನಾಡಿದರು,
ಸುರಪುರ ತಾಲೂಕು ಕಸಾಪ ಅಧ್ಯಕ್ಷ ಶರಣಬಸವ ಯಾಳವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ವೀರಣ್ಣ ಕಲಿಕೇರಿ, ವಿಜಯಾಚಾರ್ಯ ಪುರೋಹಿತ, ಸಾಹೇಬರಡ್ಡಿ ಇಟಗಿ, ರಜಾಕ್ ಬಾಗವಾನ್ ಜಟ್ಟೇಪ್ಪ ಹದನೂರು, ರಂಗಪ್ಪ ವಡ್ಡರ್ ಪರಶುರಾಮ ನಾರಾಯಣಕರ್, ಲಕ್ಷ್ಮಣ ಬಸರಿಗಿಡ, ಸೂಗುರಯ್ಯ ಇಂಡಿ, ಇಲಿಯಾಸ್ ಪಟೇಲ್, ರೇವಣಸಿದ್ದಯ್ಯ ಮಠ, ಸೇರಿದಂತೆ ಸುರಪುರ ಮತ್ತು ಶಹಾಪುರ ತಾಲೂಕಿನ ಕಸಾಪ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ಕನ್ನಡ ಪರ ಸಂಘಟನೆಗಳ ಮುಖಂಡರು, ಉಪಸ್ಥಿತರಿದ್ದರು. ಎಚ್ ರಾಠೋಡ್ ನಿರೂಪಿಸಿದರು, ವೆಂಕಟೇಶಗೌಡ ಸ್ವಾಗತಿಸಿದರು, ದೇವು ಹೆಬ್ಬಾಳ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

