ಚಡಚಣ: ನಾಗರಪಂಚಮಿ ನಾಡಿಗೆ ದೊಡ್ಡದು ಎಂಬತೆ ಶ್ರಾವಣ ಮಾಸದ ಪ್ರಾರಂಭದಲ್ಲಿ ಬರುವ ಹಬ್ಬ ನಾಗರಪಂಚಮಿ. ಗ್ರಾಮೀಣ ಭಾಗದಲ್ಲಿ ಇದು ಇನ್ನೂ ಮಹತ್ವ ಪಡೆದುಕೊಂಡಿದೆ. ಆಧುನಿಕತೆ ಬೆಳೆದಂತೆ ಹಬ್ಬವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತ ಸಾಗಿದೆ. ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ. ಹೆಣ್ಣು ಮಕ್ಕಳು ನಾಗರಪಂಚಮಿಯನ್ನು ತವರಿನಲ್ಲಿಯೇ ಆಚರಿಸಬೇಕೆಂಬುದು ಅವರ ಕನಸು.
ದಿ.೯ ರಂದು ಶುಕ್ರವಾರ ಪಟ್ಟಣದ ಅಗಸಿಯ ಮುಂದಿರುವ ಹನುಮಾನ ದೇವಸ್ಥಾನದ ಆವರಣದಲ್ಲಿ ಬೃಹದಾಕಾರವಾದ ಸುಂದರವಾದ ಮಣ್ಣಿನ ನಾಗೇಶನನ್ನು ನಿರ್ಮಿಸಿದ್ದಾರೆ. ಪಟ್ಟಣದ ಎಲ್ಲ ಸುಮಂಗಲೆಯರು ಮಣ್ಣಿನ ನಾಗೇಶನಿಗೆ ಹಾಲೆರೆದು ಧನ್ಯರಾದರು.
ಅದರಂತೆ ಪಟ್ಟಣದ ಪ್ರತಿಷ್ಠಿತ ಬಾಬುಗೌಡ ಪಾಟೀಲರ ಕುಟುಂಬದವರು ಮೊದಲು ನಾಗೇಶನಿಗೆ ಪೂಜೆ ಮಾಡುವ ವಾಡಿಕೆ. ಅವರ ಕುಟುಂಬದವರು ಮಣ್ಣಿನ ನಾಗೇಶನಿಗೆ ನೂಲು ಸುತ್ತಿ ಅರಿಷಿಣ ಕುಂಕುಮದೊಂದಿಗೆ ಪೂಜೆ ಮಾಡಿ, ಎಲ್ಲರೂ ಹಾಲೆರೆದು ನೈವೇದ್ಯ ಸಮರ್ಪಿಸಿದರು. ಇವರೊಂದಿಗೆ ಎಲ್ಲ ಮಹಿಳೆಯರು ಭಾಗಿಯಾಗಿದ್ದರು.
ವಿಜಯಲಕ್ಷಿ, ಸುನಂದ, ಸುರೇಖ, ಸುವರ್ಣ, ಸ್ವಾತಿ, ಸನ್ನೀಧಿ, ಅಕ್ಷತಾ, ಲಕ್ಷ್ಮಿ, ಕೀರ್ತಿ, ಸೋನಾಲಿ, ಇವರು ಭಾಗಿಯಾಗಿದ್ದರು.
ಗೌರಿ ಪೂಜೆ: ದಿ.೧೦ ರಂದು ಶನಿವಾರ ಸಿರಿಯಾಳಶೆಟ್ಟಿ ದಿನದಂದು ಪಟ್ಟಣದ ಬಾಬುಗೌಡ ಪಾಟೀಲ, ಎ.ಆರ್.ಕುಲಕರ್ಣಿ, ರಾಮನಗೌಡ ಪಾಟೀಲ, ಮೋನಪ್ಪ ಬಡಿಗೇರ ಇವರುಗಳ ನಿವಾಸದಲ್ಲಿ ಅಲಂಕೃತ ಗೌರಿ ಪೂಜೆ ನೆರವೇರಿಸಿದರು. ವಿವಿಧ ಧಾರ್ಮಿಕ ಕಾರ್ಯಗಳು, ಹಾಡಿಕೆಗಳು ಪ್ರಸಾದ ಜರುಗಿದವು. ಸಾಯಂಕಾಲ ಗೌರಿ ವಿಸರ್ಜನೆ ಜರುಗಿತು.
ಜೋಕಾಲಿಗೆ ಬರ: ಈ ಹಬ್ಬದ ಇನ್ನೋಂದು ವೈಶಿಷ್ಟ್ಯವೆಂದರೆ ಜೋಕಾಲಿ ಆಡುವದು. ಅಲ್ಲಲ್ಲಿ ಆಯಾಕಟ್ಟಿನ ಸ್ಥಳಗಲ್ಲಿ ಬೃಹದಾಕಾರದ ಜೋಕಾಲಿಗಳನ್ನು ಕಟ್ಟಿ ಅವುಗಳಿಗೆ ಬಲೂನ, ಗೆಜ್ಜೆ ಸರದೊಂದಿಗೆ ಅಲಂಕರಿಸಿ, ಮಹಿಳೆಯರು ಪುರುಷರು ಜೋಕಾಲಿ ಆಡಿದ್ದರು. ಜೋಕಾಲಿಗಳು ಮಾಯವಾಗಿ ಜೋಕಾಲಿ ಆಡುವವರು ಇಲ್ಲದಂತಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
