ಮುದ್ದೇಬಿಹಾಳ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಅ೧೦ ರಂದು ಮದ್ಯಾಹ್ನ ೨:೩೦ ಕ್ಕೆ ಶ್ರಾವಣ ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ವಹಿಸಲಿದ್ದು, ಪ್ರೊ ಬಿ.ಎಮ್.ಹಿರೇಮಠರು ಉದ್ಘಾಟಿಸಲಿದ್ದಾರೆ. ವಸತಿ ಶಾಲೆಯ ಪ್ರಾಂಶುಪಾಲ ಖೇಮು ರಾಠೋಡ ಅಧ್ಯಕ್ಷತೆವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಸಾಪ ನಿಕಟಪೂರ್ವ ಅಧ್ಯಕ್ಷರುಗಳಾದ ಎಂ.ಬಿ ನಾವದಗಿ ಮತ್ತು ಎಂ.ಎಚ್.ಹಾಲಣ್ಣವರ. ರಾಜೇಸಾಬ ಶಿವನಗುತ್ತಿ, ಸುರೇಶಗೌಡ ಪಾಟೀಲ, ಜಯಶ್ರೀ ಹಿರೇಮಠ, ಚೈತನ್ಯ ಮುದ್ದೆಬಿಹಾಳ, ಬುರಾನ ರುದ್ರವಾಡಿ, ವಾಯ್.ಎಚ್.ವಿಜಯಕರ ಆಗಮಿಸಲಿದ್ದಾರೆ. ಕವಿಗಳಾದ ಸುಮಲತಾ ಗಡಿಯಪ್ಪನವರ, ಶಾಂತಲಾ ಪಾಟೀಲ, ಅಂಬಿಕಾ ಕರಕಪ್ಪಗೋಳ, ಮಡಿವಾಳಮ್ಮ ನಾಡಗೌಡ, ಸಿದ್ದನಗೌಡ ಕಾಶಿನಕುಂಟೆ, ಶಿವಪುತ್ರ ಅಜಮನಿ, ವಿಶ್ವನಾಥ ಕುಲಕರ್ಣಿ, ಸಾವಿತ್ರಿ ತಳವಾರ, ಶೈಲಾ ಗೊಂಗಡಿ, ಬಸಮ್ಮ ಗದ್ದಿ, ಶಿವಲೀಲಾ ಬಿರಾದಾರ, ಬಸವರಾಜ ಹಾವೇರಿ, ಕಸ್ತೂರಿ ಗದ್ದೇಪ್ಪನವರ, ಹೇಮಾ ಬಿರಾದಾರ, ಡಿ ಚಿಕ್ಕಣ್ಣ, ಕವನ ವಾಚಿಸಲಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮತ್ತು ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
