ಚಿಕ್ಕಪಡಸಲಗಿ: ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಗುರುವಾರ ವಿದ್ಯಾಮಾತೆ ಸರಸ್ವತಿ ದೇವಿ ಪೂಜಾ ಆರಾಧನೆ ಶ್ರದ್ಧಾಭಕ್ತಿ ನಮನದೊಂದಿಗೆ ಜರುಗಿತು.
ಸರಸ್ವತಿ ದೇವಿ ಹಾಗೂ ಲಿಂ, ತೋಂಟದ ಸಿದ್ದಲಿಂಗ ಪೂಜ್ಯರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಲಾಯಿತು. ಗುರು,ಗುರುಮಾತೆ ಹಾಗೂ ಶಾಲಾ ಮಕ್ಕಳು ಭಕ್ತಿಭಾವದಿಂದ ಆರಾಧಿಸಿದರು.
ಈ ಸಂದರ್ಭದಲ್ಲಿ ವಿಶ್ರಾಂತ ದೈಹಿಕ ಶಿಕ್ಷಕ ಬಸವರಾಜ ಅನಂತಪುರ ಮಾತನಾಡಿ, ಮಕ್ಕಳು ಒಳ್ಳೆಯ ಜ್ಞಾನದಿಂದ ವಿದ್ಯಾವಂತರಾಗಲು ಸರಸ್ವತಿದೇವಿಯ ಕೃಪಾಶೀವಾ೯ದ ಬೇಕು.ಶುಭ್ರ ಪ್ರಸನ್ನತೆಭಾವದಿಂದ ಆರಾಧಿಸಿದರೆ ದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು. ವಿದ್ಯಾಭ್ಯಾಸ ಮಾಡುವ ಮಕ್ಕಳು ಭವಿಷ್ಯತ್ತಿನ ಬದುಕಿನಲ್ಲಿ ಉತ್ತಮ ಚರಿತ್ರೆಯಿಂದ ಉನ್ನತಿ ಕಾಣಲು ಜ್ಞಾನದಾತೆ ಸರಸ್ವತಿ ದೇವಿಯನ್ನು ಅನುದಿನವೂ ಆಧ್ಯಾತ್ಮಿಕತೆಯಿಂದ ಪೂಜಿಸಿ ಆರಾಧಿಸಬೇಕು.ಜೊತೆಗೆ ಪಠ್ಯ ಪುಸ್ತಕ, ಬುಕ್ ಗಳೊಂದಿಗೆ ಸಮಯೋಚಿತವಾಗಿ ಬೆರೆತು ಅದ್ಯಯನಶೀಲರಾದಾಗ ವಿದ್ಯೆ,ಬುದ್ದಿ ಪ್ರಾಪ್ತಿವಾದೀತು ಎಂದರು.
ಮುಖ್ಯ ಗುರು ಬಸವರಾಜ ಜಾಲೋಜಿ, ಧಾಮಿ೯ಕ ಸಂಪ್ರದಾಯದ ನಮ್ಮ ದೇಶದಲ್ಲಿ ಹಲವಾರು ದೇವ,ದೇವತೆಗಳು ಪೂಜಿಸಲ್ಪಡುವರು.ಅದರಲ್ಲಿ ವಿದ್ಯಾರ್ಥಿಗಳ ಸಮೂಹಕ್ಕೆ ಸರಸ್ವತಿ ದೇವಿ ಅತಿ ಪ್ರಿಯಳು ಎಂದು ಜ್ಞಾನ ವಾಹಿನಿಯ ಮಹತ್ವ ಮಕ್ಕಳಿಗೆ ತಿಳಿಸಿದರು. ಶಿಕ್ಷಣ ಪ್ರಗತಿಯ ಮೇಘಶಕ್ತಿಯುಳ್ಳ ಜ್ಞಾನ ಸಂಪತ್ತು ಹೊಂದಲು ವಿದ್ಯಾದೇವಿ ಸರಸ್ವತಿ ಮಾತೆ ಹಾಗೂ ಗುರು,ಹಿರಿಯರ ದಯಾಕೃಪೆಯಿಂದ ಸಾಧ್ಯ.ಆ ದಿಸೆಯಲ್ಲಿ ಮಕ್ಕಳ ಪ್ರಯತ್ನಗಳು ಓದು,ಬರಹದ ಅಭಿರುಚಿಯಡೆಗೆ ಸಾಗಬೇಕು ಎಂದರು.
ಶಿಕ್ಷಕರಾದ ಈರಣ್ಣ ದೇಸಾಯಿ, ಸದಾಶಿವ ಸಿದ್ದಾಪುರ, ಲೋಹಿತ ಮಿಜಿ೯, ಕುಮಾರ ವಾಣಿ, ಗುರುಮಾತೆಯರಾದ ಕವಿತಾ ಅಂಬಿ, ಸಹನಾ ಹತ್ತಳ್ಳಿ, ಪ್ರಶಿಕ್ಷಣಾಥಿ೯ ಅಕ್ಷತಾ ಮೂತ್ತೂರ, ಅಕ್ಷರ ದಾಸೋಹದ ಸಿಬ್ಬಂದಿ ಮಾಲಾ ಎಣಗಾಯಿ, ಶ್ಯಾಯಿನ್ ಗೆಣ್ಣೂರ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

