ಸಿಂದಗಿ: ವಾರ್ಡ್ ನಂ.೧೮,೧೯,೨೦,೨೧ರಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ೧೮-೧೯ನೇ ವಾರ್ಡ್ನಲ್ಲಿ ಕೋಳವೆ ಭಾವಿ ಇದ್ದು, ಸರಿಯಾಗಿ ಅದರ ನಿರ್ವಹಣೆಯಿಲ್ಲದೇ ಕುಡಿಯುವ ನೀರಿನ ಸಮಸ್ಯೆಯಿದೆ ಕೂಡಲೇ ಈ ಸಮಸ್ಯೆಗಳಿಗೆ ಸ್ಪಂದಿಸಿ ಸರಿಪಡಿಸಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ವಕ್ತಾರ ಚನ್ನಪ್ಪಗೌಡ ಎಸ್. ಬಿರಾದಾರ ಆಗ್ರಹಿಸಿದರು.
ಪಟ್ಟಣದ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಪ್ರತಿಭಟಿಸಿ, ಮನವಿ ಸಲ್ಲಿಸಿ ಮಾತನಾಡಿದ ಅವರು, ನಗರ ಸ್ವಚ್ಚತೆಯೆಡೆಗೆ ಅಧಿಕಾರಿಗಳು ಗಮನ ಹರಿಸಬೇಕು. ರಾಜ್ಯದಲ್ಲಿ ಈಗಾಗಲೇ ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸಿಂದಗಿ ನಗರವು ಸ್ವಚ್ಚತೆಯಿಂದ ಮರಿಚೀಕೆಯಾಗಿ ಅಶುಚಿತ್ವದಿಂದ ರಾರಾಜುಸುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಪರಿಹರಿಸದೆ ಹೋದರೇ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಸಂತೋಷ ಮನಗೂಳಿ, ಸಿದ್ರಾಮಪ್ಪ ಅವಟಿ, ಸೋಮಲಿಂಗ ನಾಯ್ಕೋಡಿ, ನಾಗಣ್ಣ ಪಡೆಕನೂರ, ರಮೇಶ ರಾಠೋಡ, ಶರಣು ಮನಗೂಳಿ, ಮುನ್ನಾ ಮುಜಾವರ, ಅಶೋಕ ಪಾಟೀಲ, ಸಿದ್ದು ತಮದೊಡ್ಡಿ, ಸದ್ದಾಂ ಮುಲ್ಲಾ, ಕಿರಣಕುಮಾರ ತಳವಾರ, ದಾದಾಗೌಡ ಮೋರಟಗಿ, ಮನೋಜ್ ಪಾಟೀಲ, ಶ್ರೀಶೈಲ ಮೋರಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

