ಸಿಂದಗಿ: ಚುನಾವಣಾ ಸಾಕ್ಷರತಾ ಕ್ಲಬ್ ಆಸಕ್ತಿದಾಯಕ ಚಟುವಟಿಕೆಗಳ ಮೂಲಕ ಶಾಲಾ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ವೇದಿಕೆಯಾಗಿದೆ. ಮತ್ತು ಚುನಾವಣಾ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮೂಡಿಸಲು, ನೋಂದಣಿ ಮತ್ತು ಮತದಾನದ ಪ್ರಕ್ರಿಯೆಯೊಂದಿಗೆ ಪರಿಚಿತರಾಗಲು ಅನುಭವವನ್ನು ನೀಡುತ್ತದೆ. ಇಎಲ್‌ಸಿಗಳು ಕಾಲೇಜು ಮತ್ತು ಗ್ರಾಮೀಣ ಸಮುದಾಯಗಳಲ್ಲಿಯೂ ಇವೆ ಎಂದು ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಹೇಳಿದರು.
ಪಟ್ಟಣದ ಶ್ರೀ ಪ.ವಿ.ವ.ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಂಡ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಎಲ್‌ಸಿ ಮೂಲಕ ಭಾರತದ ಚುನಾವಣಾ ಆಯೋಗ, ಯುವ ಮತ್ತು ಭವಿಷ್ಯದ ಮತದಾರರಲ್ಲಿ ಚುನಾವಣಾ ಭಾಗವಹಿಸುವಿಕೆಯ ಸಂಸ್ಕೃತಿಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದರು.
ಈ ವೇಳೆ ಪಿ.ಎಂ.ಮಹಲಿನಮಠ ಮಾತನಾಡಿ, ಭಾರತದ ಚುನಾವಣಾ ಆಯೋಗವು ಶಾಲೆ ಮತ್ತು ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತೆಯನ್ನು ಮುಖ್ಯವಾಹಿನಿಗೆ ತೆಗೆದುಕೊಂಡು ಬರಲು ತನ್ನ ಮಹತ್ವಾಕಾಂಕ್ಷೆಯ ಯೋಜನೆಯಾದ ಚುನಾವಣಾ ಸಾಕ್ಷರತಾ ಕ್ಲಬ್‌ಗಳನ್ನು ಈಗ ಹೊರತರುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಸಂಘಕ್ಕೆ ನೋಂದಣಿಯಾಗಬೇಕು. ಈ ಸಂಘಗಳ ಸದಸ್ಯರು ಮತಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ಪಾಲ್ಗೊಂಡು ಮತಪಟ್ಟಿಯ ಮಾಹಿತಿ ಪಡೆಯುವ, ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆ ಹಾಗೂ ಮತದಾರರ ಪಟ್ಟಿ ಪರಿಶೀಲನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲೂಕಾ ಇಎಲ್‌ಸಿ ಸಂಯೋಜಕ, ಉಪನ್ಯಾಸಕ ಎನ್.ಬಿ.ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ಮತದಾರರಾಗಲು ನೋಂದಣಿಯ ಪ್ರಕ್ರಿಯೆ ನಮೂನೆ-೬ನ್ನು ಭರ್ತಿ ಮಾಡುವುದು ಹೇಗೆ, ನೋಂದಣಿ ಮಾಡಲು ಸಲ್ಲಿಸಬೇಕಾದ ದಾಖಲೆಗಳು ಮತ್ತು ನಮೂನೆಗಳನ್ನು ಎಲ್ಲಿ ಪಡೆಯುವುದು ಎಂಬುದನ್ನು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಮತಗಟ್ಟೆ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಯಾವೊಬ್ಬ ಮತದಾರನು ಮತದಾನದಿಂದ ಹೊರಗುಳಿಯಬಾರದು ಎಂಬ ತತ್ವವನ್ನು ಅನುಸರಿಸಲು ಸಜ್ಜುಗೊಳಿಸುವುದು. ವಿದ್ಯಾರ್ಥಿಗಳು ಮತದಾನದ ಮೌಲ್ಯವನ್ನು ಪ್ರಶಂಸಿಸುವ ಮನೋಭಾವವನ್ನು ರೂಪಿಸಿಕೊಳ್ಳಲು ಸಮರ್ಥರಾಗಬೇಕು. ವಿದ್ಯಾರ್ಥಿಗಳು ನೋಟಾ ಮಹತ್ವವನ್ನು ಪ್ರಶಂಸಿಸಬೇಕು ಮತ್ತು ನೋಟಾ ಸೇರಿದಂತೆ ಪ್ರತಿ ಮತವೂ ಪರಿಗಣಿಸಲ್ಪಡುವುದು ಎಂಬುದನ್ನು ಮನಗಾಣುವುದು.ಅವರು ನೈತಿಕ ಮತದಾನದ ಮೌಲ್ಯವನ್ನು ಸಹ ಅರ್ಥಮಾಡಿಕೊಳ್ಳಬೇಕೆಂದು ಮತದಾನದ ಬಗ್ಗೆ ಸ್ವ-ವಿವರವಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಶಿವರಾಜ ಕುಂದಗೋಳ, ಶಿವಶರಣ ಬೂದಿಹಾಳ, ಬಸವರಾಜ ಜಮಾದಾರ, ಪ್ರಸನಕುಮಾರ ಜೋಗೂರ, ಸಂಗಮೇಶ ಚಾವರ, ಡಾ.ವಿಶ್ವನಾಥ ನಂದಿಕೋಲ, ನವೀನ ಶೆಳ್ಳಗಿ, ರೋಹಿತ್ ಸುಲ್ಪಿ, ರಾಹುಲ ಕುನ್ನಾಳ, ಶೋಭಾ ಹಿರೇಮಠ, ಭಾಗ್ಯ ಕೋರಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
ಚುನಾವಣಾ ಭಾಗವಹಿಸುವಿಕೆಯಿಂದ ಸಂಸ್ಕೃತಿಗೆ ಬಲ :ಪ್ರಾ.ಸಿಂಗನಳ್ಳಿ
Related Posts
Add A Comment

