ಚೈತ್ರವೇ ಕೇಳು ಈ ಮೊರೆಯ
ನನ್ನವಳು ಬರುವ ಆ ಸಮಯ
ಸುರಿಯೋ ಹೂವಿನ ಮಳೆಯ
ಕೋಗಿಲೆಯೆ ಹಾಡು ನೀನೀಗ
ನನ್ನವಳು ನಲಿದು ಬರುವಾಗ
ಶುಭವ ಕೋರಿ ಹೊಸರಾಗ
ನನ್ನೆದೆಯ ಸ್ವರವೀಣೆ
ನೀ ನುಡಿಸು ಓ ಜಾಣೆ.
ಪ್ರತಿಸ್ವರವು ಮಿಡಿದಿಹುದು
ನಿನ್ನ ಹೆಸರ ನೀ ಕಾಣೆ
ತಾವರೆಯ ಮೊಗದೊಳಗೆ
ಮುಗುಳುನಗೆ ಮಲ್ಲಿಗೆಯ
ಕಾಣಲು ಕಾದಿದೇ ಹೃದಯ
ಲೋಕಕೆಲ್ಲ ಹುಣ್ಣಿಮೆಯು
ಒಂದು ತಿಂಗಳಿಗೊಮ್ಮೆ
ನನ್ನವಳ ನಗುವಿಂದ
ಅನುದಿನವೂ ಹುಣ್ಣಿಮೆ
ದುಂಬಿಗಳೇ ಹೊರಡಿ ಇಲ್ಲಿಂದ
ಹೂವಲ್ಲ ಈ ಚೆಲುವು
ನನ್ನ ಪ್ರೇಯಸಿಯ ಮೊಗವು
ಗಿರಿನವಿಲು ಗರಿಬಿಚ್ಚಿ
ಕಾಯುತಿದೆ ನಿನಗಾಗಿ
ಹೊಸದೊಂದು ಬಿನ್ನಾಣ
ಕಲಿಯುವ ಸಲುವಾಗಿ
ನೀ ಬರುವ ಸೂಚನೆಗೆ
ಧರೆಯೆಲ್ಲ ಹಸಿರಾಯ್ತು
ಸಂತಸ ಹೊನಲಾಯ್ತು