ವಿಜಯಪುರ: ಸಾಮಾಜಿಕ ನೆರವು ಯೋಜನೆಗಳಿಗೆ ಸಂಬಂಧಿಸಿದಂತೆ ಪಿಂಚಣಿದಾರರು ತಮ್ಮಕುಂದು ಕೊರತೆ ನೋಂದಾಯಿಸಲು,ಪಿಂಚಣಿ ಕುರಿತ ಮಾಹಿತಿ ಪಡೆಯಲು ಹಾಗೂ ಮಾಹಿತಿ ಹಂಚಿಕೊಳ್ಳಲುಜಿಲ್ಲೆಯ ೧೩ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಒಂದು ಬಾರಿ ಪಿಂಚಣಿ ದಿನವನ್ನು ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಯಶಸ್ವಿಯಾಗಿ ಜುಲೈ ೨೦ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲೆಯ ೧೩ ಗ್ರಾಮ ಪಂಚಾಯತಿಗಳಲ್ಲಿ ಪಿಂಚಣಿ ದಿನ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.
ಅಂದು ಬೆಳಗ್ಗೆ ೧೧ ಗಂಟೆಗೆ ವಿಜಯಪುರದ ಗ್ರೇಡ್-೨ ತಹಶೀಲ್ದಾರ ಅವರು ಕನ್ನೂರಿನ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ, ಬಬಲೇಶ್ವರ ಗ್ರೇಡ್-೨ ತಹಶೀಲ್ದಾರ್ ಅವರು ಕಂಬಗಿ ಗ್ರಾಮ ಪಂಚಾಯತಿಯಲ್ಲಿ, ತಿಕೋಟಾ ಗ್ರೇಡ್-೨ ತಹಶೀಲ್ದಾರ ಅವರು ಟಕ್ಕಳಕಿಯ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ,ಬಸವನ ಬಾಗೇವಾಡಿ ತಹಸೀಲ್ದಾರ್ ಅವರು ಯರನಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಿಂಚಣಿ ದಿನ ನಡೆಸಲಿದ್ದಾರೆ.
ನಿಡಗುಂದಿ ಗ್ರೇಡ್-೨ ತಹಶೀಲ್ದಾರ ಅವರು ಆಲಮಟ್ಟಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ, ಕೊಲ್ಹಾರ ತಹಶೀಲ್ದಾರ್ ಅವರು, ಕೂಡಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಮುದ್ದೇಬಿಹಾಳ ಗ್ರೇಡ್ ೨ ತಹಶೀಲ್ದಾರ ಅವರು ಕಾಳಗಿ ಗ್ರಾಮ ಪಂಚಾಯತಿ ಶಾದಿ ಮಹಲ್ ನಲ್ಲಿ ತಾಳಿಕೋಟೆ ತಹಶೀಲ್ದಾರ್ ಅವರು ಹಿರೂರ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ, ಇಂಡಿ ಗ್ರೇಡ್ ೨ ತಹಶೀಲ್ದಾರ್ ಅವರು ಗುಬ್ಬೇವಾಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಚಡಚಣ ಗ್ರೇಡ್ ೨ ತಹಶೀಲ್ದಾರ್ ಅವರು ಜಿಗಜಿವಣಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಸಿಂದಗಿ ಗ್ರೇಡ್ ೨ ತಹಶೀಲ್ದಾರ ಅವರು ಬ್ಯಾಕೋಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ದೇವರ ಹಿಪ್ಪರಗಿ ಗ್ರೇಡ್ ೨ ತಹಶೀಲ್ದಾರ ಅವರು ಹರನಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಾಗೂ ಆಲಮೇಲ ತಹಶೀಲ್ದಾರ್ ಅವರು ಗಬಸಾವಳಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಿಂಚಣಿ ದಿನ ನಡೆಸಲಿದ್ದಾರೆ.
ಈ ದಿನದಂದು ಸಂಬಂಧಿಸಿದ ಗ್ರಾಮ ಪಂಚಾಯತಿಯ ಸಂಪೂರ್ಣ ಪಿಂಚಣಿದಾರರ ಮಾಹಿತಿಯೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಹಾಗೂ ಅಂಚೆ ಕಚೇರಿಯ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

