ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹೆಸ್ಕಾಂ ವತಿಯಿಂದ ೧೧ ಕೆ.ವಿ. ಎಲ್.ಬಿ.ಎಸ್. ಮತ್ತು ಎಸ್.ಟಿ.ಪಿ. ಫೀಡರ್ಗಳ ವ್ಯಾಪ್ತಿಯಲ್ಲಿ ಹೊಸ ಲಿಂಕ್ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು,
ಈ ನಗರ ಉಪವಿಭಾಗ-೧ರ ಶಾಖೆ-೨ರ ವ್ಯಾಪ್ತಿಯ ಇಂಡಿ ರಸ್ತೆ, ಬಿಜ್ಜರಗಿ ಶೋರೂಂ, ಜೈನ ಮಂದಿರ, ಉಪ್ಪಿನ ಕಾಲನಿ, ಬಿಜ್ಜರಗಿ ಆಯಿಲ್ ಮಿಲ್, ರಾಜರತ್ನ ಕಾಲನಿ, ಧನಲಕ್ಷ್ಮಿ ನಗರ, ರಜಪೂತ ಗಲ್ಲಿ, ವಡ್ಡರ ಗಲ್ಲಿ, ಇನಾಮದಾರ ಕಾಲನಿ, ಕಾಳಿಕಾ ನಗರ, ನಾಲಬಂದ ಚೌಕ್, ಅಂಚೆ ಕಚೇರಿ, ಬಸವೇಶ್ವರ ವೃತ್ತ, ಎಪಿಎಂಸಿ, ಶಿವನಗರ, ತರಕಾರಿ ಮಾರುಕಟ್ಟೆ, ಕಲಾದಗಿ ಗಲ್ಲಿ ಹಾಗೂ ಎಸ್.ಟಿ.ಪಿ. ಪ್ಲಾಂಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನ.೬ರಂದು ಬೆಳಿಗ್ಗೆ ೯ರಿಂದ ಸಂಜೆ ೫ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
