ವಿಜಯಪುರ: ಭೀಮಸೇನಾ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘ ಜಿಲ್ಲಾ ಘಟಕ ವಿಜಯಪುರ ಇದರ ವತಿಯಿಂದ ಸನ್ ೨೦೨೩-೨೪ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. ೯೦ ಕ್ಕಿಂತ ಹೆಚ್ಚು ಅಂಕ ಪಡೆದ ಚಲವಾದಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ೦೧-೦೭-೨೦೨೩ ರಿಂದ ೩೦-೦೬-೨೦೨೪ರ ಅವಧಿಯಲ್ಲಿ ನಿವೃತ್ತಗೊಂಡ ನೌಕರರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಕಾರಣ ೨೦೨೩-೨೪ ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ, ೯೦ಕ್ಕಿಂತಲೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ದಿ :೨೦-೦೭-೨೦೨೪ ರ ಒಳಗೆ ತಮ್ಮ ಹೆಸರು ನೊಂದಾಯಿಸಿಕೊಳ್ಳುವವರು ತಮ್ಮ ಸ್ವ ವಿವರಗಳೊಂದಿಗೆ ವಿಜಯಾನಂದ ಮುದ್ದೇಬಿಹಾಳ ಪ್ರಧಾನ ಕಾರ್ಯದರ್ಶಿ ಮೊಬೈಲ್ ನಂ ೯೬೬೩೩೯೯೩೪೫, ಎಚ್.ಬಿ.ಸಿಂಗೆ ವಿಭಾಗೀಯ ಸಂಯೋಜಕರು ಮೊಬೈಲ್ ನಂ. ೯೭೪೧೧೪೦೦೭, ರಾವುಸಾಹೇಬ್ ಗವಾರಿ ಜಿಲ್ಲಾಧ್ಯಕ್ಷರು ಮೊಬೈಲ್ ನಂ .೭೪೮೩೨೫೧೬೯೦, ಮುದ್ದಣ್ಣ ಭೀಮನಗರ ರಾಜ್ಯ ಸಹ ಕಾರ್ಯದರ್ಶಿ ಮೊಬೈಲ್ ನಂ. ೭೦೧೯೨೨೩೬೧೫ ಇವರಲ್ಲಿ ತಮ್ಮ ವಿವರಗಳೊಂದಿಗೆ ತಮ್ಮ ಹೆಸರನ್ನು ನೊಂದಾಯಿಸಲು ಪ್ರಕಟಣೆಯ ಮೂಲಕ ತಿಳಿಸಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
